ಸಚಿನ್ ತೆಂಡುಲ್ಕರ್ ಅಲ್ಲ, ಸ್ಟೋಕ್ಸ್ ಸಾರ್ವಕಾಲಿಕ ಶ್ರೇಷ್ಠ!
ಐಸಿಸಿ ಟ್ವೀಟ್: ಕೆರಳಿದ ಅಭಿಮಾನಿಗಳು
Team Udayavani, Aug 29, 2019, 5:05 AM IST
ಲಂಡನ್: ಕ್ರಿಕೆಟ್ ದೇವರು ಎಂದೇ ಕರೆಸಿಕೊಂಡಿರುವ ಸಚಿನ್ ತೆಂಡುಲ್ಕರ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಹೊಗಳುವುದು ಹಳೆಯ ಸಂಗತಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಟ್ವಿಟರ್ ಖಾತೆಯ ಪ್ರಕಾರ, ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರೇ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ!
ಇದು ಸಚಿನ್ ತೆಂಡುಲ್ಕರ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಐಸಿಸಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿದೆ. ಮೊನ್ನೆಯಷ್ಟೇ ಮುಗಿದ 3ನೇ ಆ್ಯಶಸ್ ಟೆಸ್ಟ್ನಲ್ಲಿ ಸ್ಟೋಕ್ಸ್ ಅದ್ಭುತ ಶತಕ ಬಾರಿಸಿ ಇಂಗ್ಲೆಂಡನ್ನು ಗೆಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಐಸಿಸಿ, ಈ ಹಿಂದೆ ತಾನೇ ಮಾಡಿದ ಟ್ವೀಟನ್ನು ರೀಟ್ವೀಟ್ ಮಾಡಿದೆ. ಅದರಲ್ಲಿ ಸಚಿನ್ ತೆಂಡುಲ್ಕರ್, ಸ್ಟೋಕ್ಸ್ ಜತೆಗೆ ಮಾತನಾಡುತ್ತಿರುವ ಚಿತ್ರವಿದೆ. ಅದಕ್ಕೆ ಐಸಿಸಿ, “ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಮತ್ತು ಸಚಿನ್ ತೆಂಡುಲ್ಕರ್’ ಎಂಬ ತಲೆಬರಹ ನೀಡಿದೆ.
ಇತ್ತೀಚೆಗೆ ಮುಗಿದ ಏಕದಿನ ವಿಶ್ವಕಪ್ ಫೈನಲ್ ಅನಂತರ ಮಾಡಿದ್ದ ಟ್ವೀಟನ್ನೇ ಮತ್ತೆ ಪೋಸ್ಟ್ ಮಾಡಲಾಗಿದೆ. ಗಲಾಟೆಗೆ ಕಾರಣವಾಗಿರುವುದು ಇದೇ!
ಸಚಿನ್ ತೆಂಡುಲ್ಕರ್ ದಾಖ ಲೆಯೇನು, ಸ್ಟೋಕ್ಸ್ ದಾಖಲೆಯೇನು ಎಂದು ಅಭಿಮಾನಿಗಳು ಖಾರವಾಗಿ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್