ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ
Team Udayavani, Apr 5, 2020, 6:17 AM IST
ಮುಂಬಯಿ: ಕ್ರಿಕೆಟ್ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ದೇಶಾದ್ಯಂತ ಲಾಕ್ಡೌನ್ ಇರುವುದರಿಂದ ಮನೆಗಳಲ್ಲಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಾಗಿ ಸ್ಟಾರ್ ಸ್ಪೋರ್ಟ್ಸ್ ಭಾರತ ಮತ್ತು ಪಾಕಿಸ್ಥಾನ ನಡುವೆ ನಡೆದ ರೋಚಕ ಪಂದ್ಯಗಳ ಪ್ರಸಾರ ಮಾಡಲು ಸಿದ್ಧತೆ ನಡೆಸುತ್ತಿದೆ. ಇವುಗಳಲ್ಲಿ ವಿಶ್ವಕಪ್ ಮತ್ತು ಏಶ್ಯಕಪ್ನ ಪಂದ್ಯಗಳೂ ಸೇರಿವೆ. ಎಲ್ಲ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ 1 ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿಯಲ್ಲಿ ಪ್ರಸಾರವಾಗಲಿವೆ.
ಈ ವಿಶೇಷ ಸರಣಿ ಪ್ರಸಾರವು ಶನಿವಾರದಿಂದ ಆರಂಭವಾಗಿದ್ದು ಮುಂದಿನ ಶುಕ್ರವಾರದವರೆಗೆ ಇರಲಿದೆ. 1992ರ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕ್ ನಡುವಣ ಪಂದ್ಯದ ಪ್ರಸಾರವನ್ನು ಶನಿವಾರ ಮಾಡಲಾಗಿತ್ತು.
ರವಿವಾರದಂದು 1996ರ ವಿಶ್ವಕಪ್ನ ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ಪಾಕಿಸ್ಥಾನ ನಡುವಣ ಪಂದ್ಯವನ್ನು ಪ್ರಸಾರ ಮಾಡಲಾಗುತ್ತದೆ. ವಾರಪೂರ್ತಿ ಪ್ರಸಾರವಾಗುವ ಈ ಸರಣಿಯಲ್ಲಿ 2003ರ ವಿಶ್ವಕಪ್ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತದ ರೋಚಕ ಗೆಲುವು ಕೂಡ ಸೇರಿದೆ. ಇದರಲ್ಲಿ ತೆಂಡುಲ್ಕರ್ 97 ರನ್ ಬಾರಿಸಿ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದರು. 2019ರ ವಿಶ್ವಕಪ್ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತದ ಅಮೋಘ ಗೆಲುವು ಸಾಧಿಸಿದ ಪಂದ್ಯದೊಂದಿಗೆ ಈ ಸರಣಿ ಪ್ರಸಾರ ಕೊನೆಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ