ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್‌: ಸತತ 2ನೇ ಸೋಲುಂಡ ಸಿಂಧು

Team Udayavani, Dec 12, 2019, 10:41 PM IST

ಗುವಾಂಗ್‌: “ವರ್ಷಾಂತ್ಯದ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್‌’ನಲ್ಲಿ ಹಾಲಿ ಚಾಂಪಿಯನ್‌ ಪಿ.ವಿ. ಸಿಂಧು ಸತತ 2ನೇ ಸೋಲುಂಡಿದ್ದಾರೆ. ಗುರುವಾರದ ಪಂದ್ಯದಲ್ಲಿ ಅವರು ಚೀನದ ಚೆನ್‌ ಯುಫಿ ವಿರುದ್ಧ 22-20, 16-21, 12-21 ಅಂತರದಿಂದ ಎಡವಿದರು.

ಮೊದಲ ಪಂದ್ಯದಲ್ಲಿ ಸಿಂಧು ಜಪಾನಿನ ಅಕಾನೆ ಯಮಾಗುಚಿ ವಿರುದ್ಧ ಹಿನ್ನಡೆ ಅನುಭವಿಸಿದ್ದರು. ಈ ಸೋಲಿನಿಂದಾಗಿ ಸಿಂಧು ನಾಕೌಟ್‌ ಸುತ್ತು ಪ್ರವೇಶಿಸುವ ಸಾಧ್ಯತೆ ದೂರವಾಗಿದೆ.

ಎರಡೂ ಪಂದ್ಯಗಳಲ್ಲಿ ಮೊದಲ ಗೇಮ್‌ ಗೆದ್ದ ಬಳಿಕ ಸಿಂಧು ಸೋಲಿನ ಹಾದಿ ಹಿಡಿ ದದ್ದು ಅವರ ಕೈಕೊಟ್ಟ ಫಾರ್ಮ್ಗೆ ಸಾಕ್ಷಿ. ಯುಫಿ ವಿರುದ್ಧ ಮೊದಲ ಗೇಮ್‌ನಲ್ಲಿ 17-20ರ ಹಿನ್ನಡೆಯಲ್ಲಿದ್ದರೂ ಅಮೋಘ ಹೋರಾಟ ತೋರ್ಪಡಿಸಿ ಮೇಲುಗೈ ಸಾಧಿಸಿದರು. ಆದರೆ ಅನಂತರ ಇದೇ ಜೋಶ್‌ ತೋರುವಲ್ಲಿ ವಿಫ‌ಲರಾದರು. ಶುಕ್ರವಾರ
3ನೇ ಪಂದ್ಯದಲ್ಲಿ ಹೆ ಬಿಂಗ್‌ ಜಿಯಾವೊ ವಿರುದ್ಧ ಸಿಂಧು ಕಣಕ್ಕಿಳಿಯಲಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ