ಐಪಿಎಲ್ ಮೊದಲೇ ಚೆನ್ನೈಗೆ ಆಘಾತ: ವೇಗಿ ಲುಂಗಿ ನಿಗಿಡಿ ಔಟ್


Team Udayavani, Mar 21, 2019, 10:20 AM IST

lungi.png

ಚೆನ್ನೈ: ವರ್ಣರಂಜಿತ ಕೂಟ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ತಂಡಗಳು ಭರ್ಜರಿ ತಾಲೀಮಿನಲ್ಲಿ ತೊಡಗಿವೆ. ಆದರೆ ಕೆಲವು ಫ್ರಾಂಚೈಸಿಗಳಿಗೆ ಈಗ ಹೊಸದೊಂದು ಸಮಸ್ಯೆ ಕಾಡುತ್ತಿದೆ. ಅದೇ ಗಾಯಾಳುಗಳ ಸಮಸ್ಯೆ. ಈಗ ಈ ಸಮಸ್ಯೆ ಬಂದಿರುವುದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ. ಗಾಯಾಳು ಆಟಗಾರ ಲುಂಗಿ ನಿಗಿಡಿ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿಗಳಾದ ಕಮಲೇಶ್ ನಾಗರಕೋಟಿ, ಶಿವಂ ಮಾವಿ ಮತ್ತು ಆನ್ರಿಚ್ ನೋರ್ಜೆ ಗಾಯಾಳಾಗಿರುವ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್ ನಿಂದಲೂ ಇಂತಹದ್ದೇ ಸುದ್ದಿ ಬಂದಿದೆ. ದಕ್ಷಿಣಾ ಆಫ್ರಿಕಾದ ವೇಗಿ ಲುಂಗಿ ನಿಗಿಡಿ ಗಾಯಗೊಂಡಿದ್ದು, ಇದರಿಂದಾಗಿ ಸಂಪೂರ್ಣ ಐಪಿಎಲ್ ನಲ್ಲಿ ಸಿಎಸ್ ಕೆ ಇವರ ಸೇವೆಯಿಂದ ವಂಚಿತವಾಗಲಿದೆ.
 
ಇತ್ತೀಚೆಗೆ ಮುಗಿದ ಶ್ರೀಲಂಕಾ ಏಕದಿನ ಸರಣಿಯ ಅಂತಿಮ ಪಂದ್ಯದ ವೇಳೆ ಸ್ನಾಯು ಸೆಳೆತದ ನೋವಿಗೆ ಸಿಲುಕಿದ್ದರು. ನಂತರ ಅವರನ್ನು ವೈದ್ಯಕೀಯ ತಪಾಸಣೆ ನಡೆಸಿ ಅವರಿಗೆ ನಾಲ್ಕು ವಾರಗಳ ವಿಶ್ರಾಂತಿ ಸೂಚಿಸಲಾಗಿದೆ. ನಂತರ ಅವರು ಕೆಲವು ಅಭ್ಯಾಸ ನಡೆಸಿ ವಿಶ್ವ ಕಪ್ ಗೆ ತಯಾರಾಗುತ್ತಾರೆ ಎಂದು ದಕ್ಷಿಣ ಆಫ್ರಿಕಾದ ಮ್ಯಾನೇಜರ್ ಮೊಹಮ್ಮದ್ ಮೂಸಾಜೆ ಹೇಳಿಕೆ ನೀಡಿದ್ದಾರೆ.

ಕಳೆದ ಋತುವಿನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈಸೂಪರ್ ಕಿಂಗ್ಸ್ ಚಾಂಪಿಯನ್ ಆಗುವಲ್ಲಿ ನಿಗಿಡಿ ಪಾತ್ರವೂ ಮಹತ್ತರವಾಗಿತ್ತು. ಆಡಿದ ಏಳು ಪಂದ್ಯಗಳಲ್ಲಿ ನಿಗಿಡಿ 11 ವಿಕೆಟ್ ಕಬಳಿಸಿದ್ದರು.


ಲುಂಗಿ ನಿಗಿಡಿ ಸಿಎಸ್ ಕೆ ಮೊದಲ ಆಯ್ಕೆಯ ವೇಗದ ಬೌಲರ್ ಆಗಿದ್ದರು. ಈಗ ಅವರ  ಅನುಪಸ್ಥಿತಿಯಲ್ಲಿ ಧೋನಿಗೆ ವೇಗಿಗಳ ವಿಭಾಗ ದೊಡ್ಡ ತಲೆ ನೋವಾಗಿದೆ. ಇಂಗ್ಲೆಂಡ್ ಆಲ್ ರೌಂಡರ್ ಡೇವಿಡ್ ವಿಲ್ಲೆ ಜೊತೆ ಶಾರ್ದೂಲ್ ಠಾಕೂರ್, ಮೋಹಿತ್ ಶರ್ಮಾ, ದೀಪಕ್ ಚಾಹರ್, ಕೆ.ಎಂ ಆಸಿಫ್ ವೇಗಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ವಿಶ್ವಕಪ್ ಗಾಗಿ ಡೇವಿಡ್ ವಿಲ್ಲೆ ಬೇಗನೆ ತವರು ತಂಡಕ್ಕೆ ವಾಪಾಸ್ ಆದರೆ ಚೆನ್ನೈ ಗೆ ಅನುಭವಿ ವೇಗಿಯ ಕೊರತೆ ಕಾಡದಿರದು. 

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸೈಯದ್‌ ಮುಷ್ತಾಖ್‌ ಅಲಿ ಟಿ20 ಪಂದ್ಯಾವಳಿ : ಕೇರಳಕ್ಕೆ ಸಂಜು ಸ್ಯಾಮ್ಸನ್‌ ನಾಯಕ

ಸೈಯದ್‌ ಮುಷ್ತಾಖ್‌ ಅಲಿ ಟಿ20 ಪಂದ್ಯಾವಳಿ : ಕೇರಳಕ್ಕೆ ಸಂಜು ಸ್ಯಾಮ್ಸನ್‌ ನಾಯಕ

750

ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿ ಆರಂಭಿಕ ಆಘಾತ ನೀಡಿದ ಪಾಕ್

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.