ಈಡನ್‌ ಕ್ರಿಕೆಟ್‌ ಹವಾ

Team Udayavani, Nov 15, 2017, 8:29 AM IST

15-17.jpg

ಭಾರತ-ಶ್ರೀಲಂಕಾ ನಡುವಿನ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಪಂದ್ಯ ಎಂದೊಡನೆ ನೆನಪಿಗೆ ಬರುವುದು 1996ರ ವಿಶ್ವಕಪ್‌ ಕ್ರಿಕೆಟ್‌ ಸೆಮಿಫೈನಲ್‌. ಅರ್ಜುನ ರಣತುಂಗ ಪಡೆಯ ವಿರುದ್ಧ ಆತಿಥೇಯ ಭಾರತ ಸೋಲಿನ ಹಾದಿ ಹಿಡಿದಾಗ ರೊಚ್ಚಿಗೆದ್ದ ವೀಕ್ಷಕರು ನಡೆಸಿದ ದುಂಡಾವರ್ತಿ, ಹಚ್ಚಿದ ಕಿಚ್ಚು, ಮ್ಯಾಚ್‌ ರೆಫ್ರಿ ಕ್ಲೈವ್‌ ಲಾಯ್ಡ ಪಂದ್ಯವನ್ನು ರದ್ದುಗೊಳಿಸಿ ಶ್ರೀಲಂಕಾವನ್ನು ವಿಜಯಿ ಎಂದು ಘೋಷಿಸಿದ್ದು, ವಿನೋದ್‌ ಕಾಂಬ್ಳಿ ನಡು ಕ್ರೀಸಿನಲ್ಲಿ ನಿಂತು ಅತ್ತದ್ದು… ಹೀಗೆ ಕ್ರಿಕೆಟ್‌ ಕಹಿ ಕಾಡುತ್ತ ಹೋಗುತ್ತದೆ. 

ಇದೇ “ಈಡನ್‌ ಗಾರ್ಡನ್ಸ್‌’ನಲ್ಲಿ ಭಾರತ-ಶ್ರೀಲಂಕಾ ತಂಡಗಳು ಮತ್ತೆ ಮುಖಾಮುಖೀಯಾಗುತ್ತಿವೆ. ಆದರೆ ಇದು ಏಕದಿನ ಪಂದ್ಯವಲ್ಲ, ಟೆಸ್ಟ್‌ ಮುಖಾಮುಖೀ. ಗುರುವಾರದಿಂದ ಇಲ್ಲಿ ಸರಣಿಯ ಮೊದಲ ಟೆಸ್ಟ್‌ ಆರಂಭವಾಗಲಿದೆ. ಈಡನ್‌ ಅಂಗಳ ಸರ್ವವಿಧದಲ್ಲೂ ಸಜ್ಜಾಗಿದೆ. ಅಂದಹಾಗೆ, ಇದು ಭಾರತ-ಶ್ರೀಲಂಕಾ ನಡುವೆ ಕೋಲ್ಕತಾದಲ್ಲಿ ನಡೆ ಯುವ ಮೊದಲ ಟೆಸ್ಟ್‌ ಪಂದ್ಯ ಎಂಬುದು ವಿಶೇಷ.

ಭಾರತದ ಅತ್ಯಂತ ಪುರಾತನ ಕ್ರೀಡಾಂಗಣವಾದ “ಈಡನ್‌ ಗಾರ್ಡನ್ಸ್‌’ನಲ್ಲಿ 1934ರಿಂದ ಮೊದಲ್ಗೊಂಡು 2016ರ ತನಕ 40 ಟೆಸ್ಟ್‌ ಪಂದ್ಯಗಳನ್ನು ಆಡಲಾಗಿದೆ. ಬಹು ತೇಕ ಎಲ್ಲ ಪ್ರವಾಸಿ ತಂಡ ಗಳಿಗೂ ಈ ಐತಿಹಾಸಿಕ ಅಂಗಳದಲ್ಲಿ ಟೆಸ್ಟ್‌ ಆಡುವ ಭಾಗ್ಯ ಲಭಿಸಿದೆ. ಆದರೆ ಶ್ರೀಲಂಕಾ ಈವರೆಗೆ ಇಲ್ಲಿ ಆಡಿಲ್ಲ. 2 ತಿಂಗಳ ಹಿಂದಷ್ಟೇ ಶ್ರೀಲಂಕಾಕ್ಕೆ ತೆರಳಿದ ಭಾರತ ತಂಡ ಅಲ್ಲಿ ಆಡಲಾದ ಎಲ್ಲ 9 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಗೆದ್ದು ಮೆರೆದದ್ದು ಈಗ ಇತಿಹಾಸ. ಇದರಲ್ಲಿ 3 ಟೆಸ್ಟ್‌ ಗೆಲುವುಗಳೂ ಸೇರಿವೆ. ಇದೇ ಲಯದಲ್ಲಿ ಸಾಗಿದರೆ ಟೀಮ್‌ ಇಂಡಿಯಾ ಕೋಲ್ಕತಾದಲ್ಲೂ ಗೆಲುವಿನ ಆರಂಭ ಕಂಡುಕೊಳ್ಳಬಹುದು. 

ಭಾರತದಲ್ಲಿ ಲಂಕಾ ಇನ್ನೂ ಗೆದ್ದಿಲ್ಲ !
ಹೌದು, ಭಾರತದಲ್ಲಿ ಈವರೆಗೆ ಲಂಕಾ 17 ಟೆಸ್ಟ್‌ ಪಂದ್ಯಗಳನ್ನಾಡಿದರೂ ಈವರೆಗೆ ಒಂದನ್ನೂ ಗೆದ್ದಿಲ್ಲ ! ಈ 17 ಪಂದ್ಯಗಳಲ್ಲಿ ಭಾರತ ಹತ್ತರಲ್ಲಿ ಜಯ ಸಾಧಿಸಿದರೆ, ಉಳಿದ 7 ಪಂದ್ಯಗಳು ಡ್ರಾಗೊಂಡಿವೆ. 1997-98ರ 3 ಪಂದ್ಯ ಗಳ ಸರಣಿಯನ್ನು ಡ್ರಾ ಮಾಡಿಕೊಂಡದ್ದು ಲಂಕೆಯ ಅತ್ಯುತ್ತಮ ಸಾಧನೆ. ಹಾಗೆ ನೋಡಿದರೆ, ಶ್ರೀಲಂಕಾ ತನ್ನ ಟೆಸ್ಟ್‌ ಚರಿತ್ರೆಯ ಮೊದಲ ಪಂದ್ಯ ವನ್ನೇ ಗೆಲುವಿನೊಂದಿಗೆ ಆರಂಭಿಸಬೇಕಿತ್ತು. 1982ರ ಸೆಪ್ಟಂಬರ್‌ನಲ್ಲಿ ಭಾರತದ ವಿರುದ್ಧ ಚೆನ್ನೈಯಲ್ಲಿ ಪ್ರಪ್ರಥಮ ಟೆಸ್ಟ್‌ ಆಡಿದ ಶ್ರೀಲಂಕಾ ಗೆಲುವಿನ ಬಾಗಿಲ ತನಕ ಬಂದಿತ್ತು. ಆದರೆ ಭಾರತದ ನಸೀಬು ಗಟ್ಟಿ ಇತ್ತು. ಅದು “ಕ್ರಿಕೆಟ್‌ ಶಿಶು’ಗಳೆದುರು ದೊಡ್ಡ ಅವಮಾನವೊಂದರಿಂದ ಪಾರಾಯಿತು. ಲಂಕೆಗೆ ಅಲ್ಲಿ ಒಲಿಯಬೇಕಿದ್ದ ಗೆಲುವು ಇಂದಿನ ವರೆಗೂ ಕೈಹಿಡಿದಿಲ್ಲ.

ಮೊದಲ ಪಂದ್ಯದಲ್ಲಿ ಮೆರೆದ ಲಂಕಾ
ಶ್ರೀಲಂಕಾ ತಂಡ ಚೊಚ್ಚಲ ಟೆಸ್ಟ್‌ ಆಡಿದ್ದು ಚೆನ್ನೈನ ” ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ. ಪ್ರವಾಸಿ ತಂಡದ ನಾಯಕರಾಗಿದ್ದವರು ದುಲೀಪ್‌ ಮೆಂಡಿಸ್‌. ಮೊದಲು ಬ್ಯಾಟ್‌ ಮಾಡಿದ ಲಂಕಾ ಮೆಂಡಿಸ್‌ ಶತಕದ ನೆರವಿನಿಂದ (105) 346 ರನ್‌ ಪೇರಿಸಿತು. ಸ್ಪಿನ್ನರ್‌ ದಿಲೀಪ್‌ ದೋಶಿ 5, ಕಪಿಲ್‌ 3 ಹಾಗೂ ಮದನ್‌ಲಾಲ್‌ 2 ವಿಕೆಟ್‌ ಕಿತ್ತರು.

ಜವಾಬಿತ್ತ ಭಾರತ ಛಾತಿಗೆ ತಕ್ಕ ಪ್ರದರ್ಶನ ನೀಡಿ 6ಕ್ಕೆ 566 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು. ನಾಯಕ ಗಾವಸ್ಕರ್‌ 155, ಸಂದೀಪ್‌ ಪಾಟೀಲ್‌ 114 ರನ್‌ ಬಾರಿಸಿದರು. ದ್ವಿತೀಯ ಸರದಿಯಲ್ಲಿ ಮೆಂಡಿಸ್‌ ಮತ್ತೆ 105 ರನ್‌ ಹೊಡೆದರು; ರಾಯ್‌ ಡಾಯಸ್‌ ಬ್ಯಾಟಿನಿಂದ 97 ರನ್‌ ಸಿಡಿಯಿತು. ಲಂಕಾ 394 ರನ್‌ ಮಾಡಿತು. ಕಪಿಲ್‌ 5, ದೋಷಿ 3, ರಾಕೇಶ್‌ ಶುಕ್ಲಾ 2 ವಿಕೆಟ್‌ ಕಿತ್ತರು.

175 ರನ್ನುಗಳ ಸಾಮಾನ್ಯ ಮೊತ್ತದ ಗೆಲುವಿನ ಗುರಿ ಪಡೆದ ಭಾರತಕ್ಕೆ ದೊಡ್ಡ ಗಂಡಾಂತರವೊಂದು ಕಾದಿತ್ತು. ಗೆಲುವಿರಲಿ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದೇ ಹರಸಾಹಸವಾಗಿ ಪರಿಣಮಿಸಿತ್ತು. ಅಸಂತ ಡಿ ಮೆಲ್‌  (68ಕ್ಕೆ 5) ದಾಳಿಗೆ ಸಿಲುಕಿದ ಭಾರತ ಕುಸಿಯುತ್ತಲೇ ಹೋಯಿತು. ಸೋಲಿನ ಭೀತಿಯೂ ಎದುರಾಯಿತು. ಆದರೆ ಯಶ್ಪಾಲ್‌ ಶರ್ಮ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ತಂಡಕ್ಕೆ ರಕ್ಷಣೆ ಒದಗಿಸಿದರು. ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವಾಗ ಭಾರತದ ಸ್ಕೋರ್‌ 7ಕ್ಕೆ 135 ರನ್‌!

ಎಚ್‌. ಪ್ರೇಮಾನಂದ ಕಾಮತ್‌

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.