Fifa Qualifiers: ಅಫ್ಘಾನ್ ವಿರುದ್ಧ ಸೋಲು
Team Udayavani, Mar 26, 2024, 11:15 PM IST
ಗುವಾಹಟಿ: ಗುವಾಹಟಿಯಲ್ಲಿ ಮಂಗಳವಾರ ನಡೆದ 2026ರ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಎರಡನೇ ಸುತ್ತಿನ ಫುಟ್ಬಾಲ್ ಪಂದ್ಯದಲ್ಲಿ, ಅಫ್ಘಾನಿಸ್ಥಾನ ವಿರುದ್ಧ ಆತಿಥೇಯ ಭಾರತ 1-2 ಅಂತರದ ಸೋಲನುಭವಿಸಿದೆ.
ಆದರೆ ಈ ಪಂದ್ಯದ ಬಳಿಕವೂ ಅಂಕಪಟ್ಟಿಯಲ್ಲಿ ಅಗ್ರ ಎರಡರಲ್ಲೇ ಉಳಿದಿರುವುದರಿಂದ, ಭಾರತದ ಮೂರನೇ ಹಂತದ ಅರ್ಹತಾ ಸುತ್ತಿನ ಕನಸು ಜೀವಂತವಾಗಿದೆ.
ಪಂದ್ಯದ ಮೊದಲಾರ್ಧದಲ್ಲಿ ಭಾರತ ಖಾತೆ ತೆರೆಯಿತು. ಈ ಪಂದ್ಯದ ಮೂಲಕ ದಾಖಲೆಯ 150ನೇ ಅಂತಾರಾಷ್ಟ್ರೀಯ ಪಂದ್ಯವಾಡಿದ ನಾಯಕ ಸುನಿಲ್ ಚೆಟ್ರಿ 37ನೇ ನಿಮಿಷದಲ್ಲಿ ಗೋಲ್ ಸಿಡಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಆದರೆ ದ್ವಿತೀಯಾರ್ಧದ 70ನೇ ಮತ್ತು 88ನೇ ನಿಮಿಷಗಳಲ್ಲಿ ಗೋಲ್ ದಾಖಲಿಸಿದ ಆಫ್ಘಾನ್, ಪಂದ್ಯವನ್ನು ತನ್ನದಾಗಿಸಿಕೊಂಡಿತು.