ಎಫ್ಐಎಚ್ ಸೀರಿಸ್: ಭಾರತ ಚಾಂಪಿಯನ್
Team Udayavani, Jun 16, 2019, 5:23 AM IST
ಭುವನೇಶ್ವರ: ಒಲಿಂಪಿಕ್ ಅರ್ಹತೆಯ ಹುರುಪಿನಲ್ಲಿದ್ದ ಭಾರತೀಯ ಹಾಕಿ ತಂಡ ಎಫ್ಐಎಚ್ ಸೀರಿಸ್ ಫೈನಲ್ಸ್ ಹಾಕಿ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ಇಲ್ಲಿ ನಡೆದ ಫೈನಲ್ನಲ್ಲಿ ಆತಿಥೇಯ ತಂಡ ದಕ್ಷಿಣ ಆಫ್ರಿಕಾವನ್ನು 5-1 ಗೋಲುಗಳಿಂದ ಕೆಡವಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ವಿಶ್ವದ 5ನೇ ರ್ಯಾಂಕಿಂಗ್ ತಂಡವಾಗಿರುವ ಭಾರತ ಕೂಟದುದ್ದಕ್ಕೂ ಅಜೇಯವಾಗಿ ಉಳಿದು ಚಾಂಪಿಯನ್ನರ ಆಟವನ್ನಾಡಿತು. ಪ್ರಶಸ್ತಿ ಕಾಳಗದಲ್ಲಿ ಡ್ರ್ಯಾಗ್ಫ್ಲಿಕರ್ಗಳಾದ ವರುಣ್ ಕುಮಾರ್ (2ನೇ, 49ನೇ ನಿಮಿಷ) ಮತ್ತು ಹರ್ಮನ್ಪ್ರೀತ್ ಸಿಂಗ್ (11ನೇ, 25ನೇ ನಿಮಿಷ) ತಲಾ 2 ಗೋಲು ಹೊಡೆದರು. ಇನ್ನೊಂದು ಗೋಲು ವಿವೇಕ್ ಸಾಗರ್ ಪ್ರಸಾದ್ ಅವರಿಂದ 35ನೇ ನಿಮಿಷದಲ್ಲಿ ದಾಖಲಾಯಿತು. ದಕ್ಷಿಣ ಆಫ್ರಿಕಾದ ಏಕೈಕ ಗೋಲನ್ನು 53ನೇ ನಿಮಿಷದಲ್ಲಿ ರಿಚರ್ಡ್ ಪೌಟ್ಜ್ ಹೊಡೆದರು.
3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ 4-2 ಗೋಲುಗಳಿಂದ ಅಮೆರಿಕವನ್ನು ಕೆಡವಿತು.
ಈ ಕೂಟದಲ್ಲಿ ಮೊದಲೆರಡು ಸ್ಥಾನ ಸಂಪಾದಿಸಿದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಒಲಿಂಪಿಕ್ ಅರ್ಹತಾ ಕೂಟದ ಅಂತಿಮ ಸುತ್ತು ಪ್ರವೇಶಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ