‘ಮೊದಲು ಯುವಿ ನಾಯಕನಾಗಬೇಕಿತ್ತು

Team Udayavani, Jul 10, 2019, 5:48 AM IST

ಅಹ್ಮದಾಬಾದ್‌: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಯುವರಾಜ್‌ ಸಿಂಗ್‌ ಅವರ ತಂದೆ ಯೋಗರಾಜ್‌ ಸಿಂಗ್‌ ಮತ್ತೆ ಕಟುವಾದ ಮಾತುಗಳಿಂದ ಟೀಕಿಸಿದ್ದಾರೆ.

‘ಧೋನಿ ಅವರಿಗಿಂತ ನನ್ನ ಪುತ್ರ ಯುವರಾಜ್‌ ಸಿಂಗ್‌ ಹಿರಿಯ ಆಟಗಾರ. ಆತ ಧೋನಿಗಿಂತ ಮೊದಲೇ ಭಾರತ ತಂಡವನ್ನು ಸೇರಿದ್ದರು. ಹಾಗಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯುವಿಗೆ ನೀಡಬೇಕಿತ್ತು. ಆದರೆ ತಡವಾಗಿ ತಂಡವನ್ನು ಸೇರಿದ ವ್ಯಕ್ತಿಗೆ ನಾಯಕನ ಜವಾಬ್ದಾರಿ ನೀಡಲಾಯಿತು’ ಎಂದು ಯೋಗರಾಜ್‌ ಆರೋಪಿಸಿದ್ದಾರೆ. ಸದ್ಯ ಸಾಗುತ್ತಿರುವ ವಿಶ್ವಕಪ್‌ ಕ್ರಿಕೆಟ್ ಕೂಟದಲ್ಲಿ ಭಾರತ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ ಎಂದು ಯೋಗರಾಜ್‌ ಸಿಂಗ್‌ ಹೇಳಿದರು.

‘ಭಾರತದ ಎಲ್ಲ ಕ್ರಿಕೆಟಿಗರು ನನ್ನ ಪುತ್ರ ಯುವಿ ಇದ್ದ ಹಾಗೇ. ಜೀವನದ ಪ್ರತಿಯೊಂದು ರಂಗದಲ್ಲೂ ನಾವು ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿಗಳನ್ನು ಕಾಣುತ್ತೇವೆ’ ಎಂದು 61ರ ಹರೆಯದ ಯೋಗರಾಜ್‌ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ