ಫ್ರೆಂಚ್ ಟೆನಿಸ್‌: ಮೂರನೇ ಸುತ್ತಿಗೆ ಫೆಡರರ್‌, ನಡಾಲ್

Team Udayavani, May 31, 2019, 6:05 AM IST

ಪ್ಯಾರಿಸ್‌: ಮಾಜಿ ಚಾಂಪಿಯನ್‌ ರೋಜರ್‌ ಫೆಡರರ್‌ ಹಾಗೂ 11 ಬಾರಿಯ ಚಾಂಪಿಯನ್‌ ರಫೆಲ್ ನಡಾಲ್ ಫ್ರೆಂಚ್ ಓಪನ್‌ ಟೆನಿಸ್‌ ಕೂಟದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ರಮವಾಗಿ ಗೆಲುವು ಸಾಧಿಸಿ ಮೂರನೇ ಸುತ್ತಿಗೆ ನೆಗೆದಿದ್ದಾರೆ.

ಸ್ವಿಜರ್ಲೆಂಡ್‌ನ‌ ಫೆಡರರ್‌ ಜರ್ಮನಿಯ ಆಸ್ಕರ್‌ ಒಟ್ಟೆ ವಿರುದ್ಧದ ಪಂದ್ಯದಲ್ಲಿ 6-4, 6-3, 6-4 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು. ಮತ್ತೂಂದು ಪಂದ್ಯದಲ್ಲಿ ಸ್ಪೇನ್‌ನ ನಡಾಲ್ ಜರ್ಮನಿಯ ಯಾನಿಕ್‌ ಮಡೆನ್‌ ವಿರುದ್ಧ 6-1, 6-2, 6-4 ಅಂತರದಿಂದ ಗೆಲುವು ಸಾಧಿಸಿ ಮೂರನೇ ಸುತ್ತಿಗೆ ಪ್ರವೇಶ ಪಡೆದುಕೊಂಡರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ