ಕೇಪ್ಟೌನ್ ಬ್ಲಿಟ್ಜ್ ತಂಡಕ್ಕೆ ಹಾಶಿಮ್ಆಮ್ಲ ಸಲಹೆಗಾರ
Team Udayavani, Nov 4, 2019, 11:32 PM IST
ಕೇಪ್ಟೌನ್: ಇಂಡಿಯನ್ ಸೂಪರ್ ಲೀಗ್ (ಐಪಿಎಲ್) ಟಿ20 ಕೂಟದ ಮಾದರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮಜಾನ್ಸಿ ಸೂಪರ್ ಲೀಗ್ (ಎಂಎಸ್ಎಲ್ಟಿ) ಟಿ20 ಕ್ರಿಕೆಟ್ ಕೂಟ ನವೆಂಬರ್ 8ರಿಂದ ಆರಂಭವಾಗಲಿದೆ.
ಈ ಕೂಟದ ಪ್ರಮುಖ ತಂಡವಾಗಿರುವ ಕೇಪ್ಟೌನ್ ಬ್ಲಿಟ್ಜ್ ತಂಡಕ್ಕೆ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಕ್ಕೆ ನಿವೃತ್ತಿ ಹೇಳಿರುವ ದಕ್ಷಿಣ ಆಫ್ರಿಕಾದ ತಾರಾ ಬ್ಯಾಟ್ಸ್ಮನ್ ಹಾಶಿಮ್ ಆಮ್ಲ ಬ್ಯಾಟಿಂಗ್ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.
36 ವರ್ಷದ ಆಮ್ಲ ನಿವೃತ್ತಿಯ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಹುದ್ದೆಯೊಂದನ್ನು ನಿರ್ವಹಿಸುತ್ತಿದ್ದಾರೆ.