ಹಿಮಾ ಚಿನ್ನದ ಓಟ: ‘ಧಿಂಗ್ ಎಕ್ಸ್ ಪ್ರೆಸ್’ ಗೆ 18 ದಿನದಲ್ಲಿ 5ನೇ ಬಂಗಾರ

Team Udayavani, Jul 21, 2019, 9:07 AM IST

ಜೆಕ್‌: ಭಾರತದ ಚಿನ್ನದ ಹುಡುಗಿ ಹಿಮಾ ದಾಸ್‌ ಓಡಿದಲ್ಲೆಲ್ಲಾ ಚಿನ್ನದ ಪದಕಕ್ಕೆ ಮುತ್ತಿಕ್ಕುತ್ತಿದ್ದಾರೆ. ಈ ಒಂದು ತಿಂಗಳಲ್ಲಿ ಈಗಾಗಲೇ ನಾಲ್ಕು ಚಿನ್ನದ ಪದಕ ಗೆದ್ದಿರುವ ಹಿಮಾ ಈಗ ಮತ್ತೊಂದು ಬಂಗಾರಕ್ಕೆ ಕೊರಳೊಡ್ಡಿದ್ದಾರೆ.

ಜೆಕ್‌ ಗಣರಾಜ್ಯದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್‌ ಕೂಟದಲ್ಲಿ ಹಿಮಾ ಬಂಗಾರ ಗೆದ್ದಿದ್ದಾರೆ. ಕೂಟದ ಮಹಿಳಾ ವಿಭಾಗದ 400 ಮೀ. ಓಟದಲ್ಲಿ ಭಾರತದ ಬಂಗಾರದ ಚಿಗರೆ ಹಿಮಾ ಕೇವಲ 52.09 ಸೆಕಂಡ್‌ ನಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದಾರೆ. ಈ ಟೈಮಿಂಗ್‌ ಕೂಟದ ಅತ್ಯುತ್ತಮ ದಾಖಲೆಯಾಗಿದೆ.

ಆದರೆ ಹಿಮಾ ತನ್ನ ವೈಯಕ್ತಿಕ ದಾಖಲೆಯನ್ನು ಮುರಿಯಲು ವಿಫಲರಾದರು. ಈ ಹಿಂದೆ ಜಕಾರ್ತ ಏಶ್ಯನ್‌ ಗೇಮ್ಸ್‌ ನಲ್ಲಿ 50.79 ಸೆಕಂಡ್‌ ನಲ್ಲಿ 400 ಮೀ. ಗುರಿ ಮುಟ್ಟಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ