ಫೈನಲ್ಗೆ ಮೇರಿ; ಶಿವ ಥಾಪ ಪರಾಜಯ
Team Udayavani, Feb 1, 2018, 6:10 AM IST
ಹೊಸದಿಲ್ಲಿ: ಐದು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಹೊಸದಿಯಲ್ಲಿ ನಡೆಯುತ್ತಿರುವ “ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಮೆಂಟ್’ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ಶಿವ ಥಾಪ ಮತ್ತು ಮನೋಜ್ ಕುಮಾರ್ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಕಂಚಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ವಿಶ್ವ ವನಿತಾ ಬಾಕ್ಸಿಂಗ್ನಲ್ಲಿ 12ನೇ ಶ್ರೇಯಾಂಕಿತೆ ಮೇರಿ ಕೋಮ್ 48 ಕೆ.ಜಿ. ವಿಭಾಗದಲ್ಲಿ ಮಂಗೋಲಿಯಾದ ಅಲ್ತಾನ್ಸೆಸೆಗ್ ಲುಸೈಖಾನ್ ವಿರುದ್ಧ ಜಯ ಸಾಧಿಸಿದರು. ಅವರು ಮೊದಲೆರಡು ಸುತ್ತುಗಳಲ್ಲಿ ಪ್ರಬಲ ಸ್ಪರ್ಧೆಯೊಡ್ಡಿದರು. ಆದರೆ ಆಕ್ರಮಣಕಾರಿ ದಾಳಿ ನಡೆಸಿದ ಮೇರಿ ಕೋಮ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಫೈನಲ್ನಲ್ಲಿ ಮೇರಿ ಫಿಲಿಪ್ಪೀನ್ಸ್ನ ಜೋಸಿ ಗಬುಕೊ ವಿರುದ್ಧ ಸ್ಪರ್ಧಿಸಲಿದ್ದಾರೆ.
ಪುರುಷರ 60 ಕೆ.ಜಿ. ವಿಭಾಗದಲ್ಲಿ ಏಷ್ಯನ್ ಪದಕ ವಿಜೇತ ಶಿವ ಥಾಪ ಭಾರತದವರೇ ಆದ ಮನೀಷ್ ಕೌಶಿಕ್ ವಿರುದ್ಧ ಸೋತರು. ಇಬ್ಬರ ನಡುವೆಯೂ ಪ್ರಬಲ ಸ್ಪರ್ಧೆ ನಡೆಯಿತಾದರೂ ಅಂತಿಮ ಫಲಿತಾಂಶ ಮನೀಷ್ ಪರವಾಯಿತು.
ಆದರೆ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ ಮನೀಷ್ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ಮತ್ತೂಂದು ಪಂದ್ಯದಲ್ಲಿ ಅವರು ದಿನೇಶ್ ಎದುರು ಸೋತು ಹೊರನಡೆಯಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ