ಲಾಂಗ್ ಜಂಪರ್ ಶ್ರೀಶಂಕರ್ಗೆ ಚಿನ್ನ
Team Udayavani, May 27, 2022, 6:36 AM IST
ಹೊಸದಿಲ್ಲಿ: ಗ್ರೀಸ್ನಲ್ಲಿ ನಡೆಯುತ್ತಿರುವ 12ನೇ “ಇಂಟರ್ನ್ಯಾಶನಲ್ ಜಂಪಿಂಗ್ ಮೀಟಿಂಗ್’ನಲ್ಲಿ ಭಾರತದ ಸ್ಟಾರ್ ಲಾಂಗ್ಜಂಪರ್ ಮುರಳಿ ಶ್ರೀಶಂಕರ್ ಚಿನ್ನದ ಪದಕ ಜಯಿಸಿದ್ದಾರೆ. ಅವರು 8.31 ಮೀ. ದೂರದ ಸಾಧನೆಯೊಂದಿಗೆ ಮೊದಲಿಗರಾದರು.
10 ಮಂದಿಯ ಈ ಸ್ಪರ್ಧೆಯಲ್ಲಿ ಕೇವಲ ಮೂವರಷ್ಟೇ 8 ಮೀ. ದೂರದ ಸಾಧನೆಯೊಂದಿಗೆ ಗುರುತಿಸಲ್ಪಟ್ಟರು. ಮೊದಲೆರಡು ಹಂತಗಳಲ್ಲಿ ಅವರು ಕ್ರಮವಾಗಿ 7.88 ಮೀ. ಹಾಗೂ 7.71 ಮೀ. ದೂರ ನೆಗೆದಿದ್ದರು. ಸ್ವೀಡನ್ನ ತೋಬಿಯಾಸ್ ಮಾಂಟ್ಲೆರ್ ಬೆಳ್ಳಿ (8.27 ಮೀ.) ಮತ್ತು ಫ್ರಾನ್ಸ್ನ ಜುಲೆಸ್ ಪೋಮ್ಮರಿ ಕಂಚು (8.17 ಮೀ.) ಗೆದ್ದರು.
ಟೋಕಿಯೊ ಒಲಿಂಪಿಕ್ಸ್ ಬಳಿಕ ಶ್ರೀಶಂಕರ್ ಪ್ರತಿನಿಧಿಸಿದ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆ ಇದಾಗಿದೆ. ಟೋಕಿಯೋದಲ್ಲಿ ಅವರು 7.69 ಮೀ. ದೂರ ನೆಗೆದಿದ್ದರು. ಶ್ರೀಶಂಕರ್ ಒಂದು ತಿಂಗಳ ಹಿಂದಷ್ಟೇ 8.36 ಮೀ. ದೂರದ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ