ಅಫ್ಘಾನ್ ಗೆಲುವಿನಲ್ಲಿದೆ ಟೀಂ ಇಂಡಿಯಾ ಸೆಮಿ ದಾರಿ! ಏನಿದು ಲೆಕ್ಕಾಚಾರ?
Team Udayavani, Nov 6, 2021, 9:50 AM IST
ದುಬೈ: ಟಿ20 ವಿಶ್ವಕಪ್ ಗೆಲ್ಲುವ ಫೇವರೆಟ್ ಆಗಿ ಕೂಟ ಆರಂಭಿಸಿದ್ದ ವಿರಾಟ್ ಪಡೆ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಮುಗ್ಗರಿಸಿ, ಸೆಮಿ ದಾರಿಯನ್ನು ಕಠಿಣಗೊಳಿಸಿತ್ತು. ಆದರೆ ನಂತರದೆರಡು ಪಂದ್ಯಗಳಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ ಇದೀಗ ಸೆಮಿ ಬಾಗಿಲಲ್ಲಿ ನಿಂತಿದೆ. ಆದರೆ ಭಾರತಕ್ಕೆ ಅಡ್ಡಯಾಗಿರವುದು ಕಿವೀಸ್.
ಐಸಿಸಿ ಕೂಟಗಳಲ್ಲಿ ಭಾರತಕ್ಕೆ ದುಸ್ವಪ್ನವಾಗಿರುವ ನ್ಯೂಜಿಲ್ಯಾಂಡ್ ತಂಡ ಇಲ್ಲೂ ಅಡ್ಡಿಯಾಗಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಆರು ಅಂಕ ಸಂಪಾದನೆ ಮಾಡಿರುವ ಕಿವೀಸ್ ಸದ್ಯ ಎರಡನೇ ಸ್ಥಾನದಲ್ಲಿದ್ದರೆ, ನಾಲ್ಕು ಅಂಕ ಸಂಪಾದನೆ ಮಾಡಿರುವ ಭಾರತ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ದುಬೈನಲ್ಲಿ ಟೀಂ ಇಂಡಿಯಾ ದೀಪಾವಳಿ: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ
ರವಿವಾರ ನಡೆಯಲಿರುವ ನ್ಯೂಜಿಲ್ಯಾಂಡ್ ಮತ್ತು ಅಫ್ಘಾನಿಸ್ಥಾನ ನಡುವಿನ ಪಂದ್ಯ ಕೂಟದಲ್ಲಿ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ. ಈ ಪಂದ್ಯದಲ್ಲಿ ಒಂದು ವೇಳೆ ನ್ಯೂಜಿಲ್ಯಾಂಡ್ ಗೆದ್ದರೆ ನೇರವಾಗಿ ಸೆಮಿ ಫೈನಲ್ ಪ್ರವೇಶಿಸಲಿದೆ. ಆಗ ಭಾರತದ ಕನಸು ಛಿದ್ರವಾಗಲಿದೆ. ಆದರೆ ಒಂದು ವೇಳೆ ಅಫ್ಘಾನ್ ಗೆದ್ದರೆ ಭಾರತದ ಅವಕಾಶಗಳು ಮತ್ತಷ್ಟು ವಿಸ್ತಾರವಾಗಲಿದೆ.
ಸ್ಕಾಟ್ಲೆಂಡ್ ವಿರುದ್ಧ ಭರ್ಜರಿಯಾಗಿ ಗೆದ್ದ ಬಳಿಕ ಭಾರತ ತಂಡದ ರನ್ ರೇಟ್ ಉತ್ತಮವಾಗಿದೆ. ಭಾರತ ಸದ್ಯ +1.619 ರನ್ ರೇಟ್ ಹೊಂದಿದೆ. ಕಿವೀಸ್ ವಿರುದ್ಧ ಅಫ್ಘಾನ್ ಗೆದ್ದರೆ, ಬಳಿಕ ಭಾರತ ತಂಡ ಅಂತಿಮ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಉತ್ತಮ ಗೆಲುವು ಸಾಧಿಸಿದರೆ ಉತ್ತಮ ರನ್ ರೇಟ್ ಕಾರಣದಿಂದ ಸೆಮಿ ಫೈನಲ್ ಪ್ರವೇಶ ಪಡೆಯಲಿದೆ.