ವಾಟ್ಸನ್‌ ಅಮೋಘ ಶತಕ; ಸೂಪರ್‌ ಚೆನ್ನೈ ಚಾಂಪಿಯನ್‌​​​​​​​


Team Udayavani, May 28, 2018, 2:34 AM IST

pti5272018000204b.jpg

ಮುಂಬಯಿ: ಸೂಪರ್‌ ಕ್ರಿಕೆಟ್‌ ಪ್ರದರ್ಶನ ನೀಡಿದ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ 2018ನೇ ಸಾಲಿನ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ರವಿವಾರ ರಾತ್ರಿ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆದ ಪ್ರಶಸ್ತಿ ಸಮರದಲ್ಲಿ ಅದು ಸನ್‌ರೈಸರ್ ಹೈದರಾಬಾದ್‌ ತಂಡವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿಯಿತು. ಶೇನ್‌ ವಾಟ್ಸನ್‌ ಅಜೇಯ ಶತಕದ ಮೂಲಕ ಚೆನ್ನೈ ಗೆಲುವಿನ ರೂವಾರಿಯಾಗಿ ಮೂಡಿಬಂದರು. 

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಹೈದರಾಬಾದ್‌ 6 ವಿಕೆಟಿಗೆ 178 ರನ್‌ ಪೇರಿಸಿದರೆ, ಚೆನ್ನೈ 18.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 181 ರನ್‌ ಬಾರಿಸಿ ಮೆರೆದಾಡಿತು; 2 ವರ್ಷಗಳ ನಿಷೇಧ ಮುಗಿಸಿ ಸ್ಮರಣೀಯ ಪುನರಾಗಮನಕ್ಕೆ ಸಾಕ್ಷಿಯಾಯಿತು.
 
ಶೇನ್‌ ವಾಟ್ಸನ್‌ 57 ಎಸೆತಗಳಿಂದ ಅಜೇಯ 117 ರನ್‌ ಬಾರಿಸಿ ಭರಪೂರ ರಂಜನೆ ಒದಗಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ ವೇಳೆ 11 ಬೌಂಡರಿ, 8 ಸಿಕ್ಸರ್‌ ಸಿಡಿಯಲ್ಪಟ್ಟಿತು. ಇದು ಪ್ರಸಕ್ತ ಋತುವಿನಲ್ಲಿ ವಾಟ್ಸನ್‌ ಹೊಡೆದ 2ನೇ ಶತಕ. ಹಾಗೆಯೇ ಐಪಿಎಲ್‌ ಫೈನಲ್‌ನಲ್ಲಿ ದಾಖಲಾದ 2ನೇ ಸೆಂಚುರಿ. ಫೈನಲ್‌ ಚೇಸಿಂಗ್‌ ವೇಳೆ ದಾಖಲಾದ ಪ್ರಥಮ ಶತಕ.

ಆರಂಭದಲ್ಲಷ್ಟೇ ಬಿಗಿ ದಾಳಿ
179 ರನ್‌ ಬೆನ್ನಟ್ಟಲಾರಂಭಿಸಿದ ಚೆನ್ನೈಗೆ ಭುನೇಶ್ವರ್‌ ಬಿಗಿಯಾದ ಕಡಿವಾಣ ಹಾಕಿದರು. ಅವರ ಮೊದಲ 10 ಎಸೆತಗಳಲ್ಲಿ ರನ್ನೇ ಬರಲಿಲ್ಲ. ಮೊದಲ ಸ್ಪೆಲ್‌ನ 3 ಓವರ್‌ಗಳಲ್ಲಿ ಭುವಿ ಕೇವಲ 9 ರನ್‌ ನೀಡಿದರು. ಇನ್ನೊಂದೆಡೆ ಸಂದೀಪ್‌ ಶರ್ಮ ಸಾಮಾನ್ಯ ಮಟ್ಟದ ನಿಯಂತ್ರಣ ಸಾಧಿಸಿದರು. ಆದರೆ ಸಿದ್ಧಾರ್ಥ್ ಕೌಲ್‌ ದುಬಾರಿಯಾದರು. ಅವರ ಮೊದಲೆರಡು ಓವರ್‌ಗಳಲ್ಲಿ 32 ರನ್‌ ಸೋರಿ ಹೋಯಿತು. ರಶೀದ್‌ ಗೂಗ್ಲಿಗಳಲ್ಲಿ ಹೆಚ್ಚಿನ ರನ್‌ ಬರಲಿಲ್ಲ. ಮೊದಲ 10 ಓವರ್‌ ಮುಗಿದಾಗ ಚೆನ್ನೈ ಒಂದು ವಿಕೆಟಿಗೆ 80 ರನ್‌ ಗಳಿಸಿ ಹಿಡಿತ ಸಾಧಿಸಿತ್ತು. ದ್ವಿತೀಯ ಸ್ಪೆಲ್‌ ದಾಳಿಗಿಳಿದ ಸಂದೀಪ್‌ ಶರ್ಮ ಸಖತ್‌ ದುಬಾರಿಯಾದರು. ಅವರೆಸೆದ 13ನೇ ಓವರಿನಲ್ಲಿ ವಾಟ್ಸನ್‌ ಹ್ಯಾಟ್ರಿಕ್‌ ಸಿಕ್ಸರ್‌ ಸಹಿತ 27 ರನ್‌ ದೋಚಿದರು. ಇದರಲ್ಲಿ ಒಂದು ವೈಡ್‌ ಎಸೆತವಾಗಿತ್ತು.
 
ಮೊದಲ ಕ್ವಾಲಿಫೈಯರ್‌ ಪಂದ್ಯದ ಹೀರೋ ಫಾ ಡು ಪ್ಲೆಸಿಸ್‌ ಇಲ್ಲಿ ಹತ್ತೇ ರನ್ನಿಗೆ ಎಡವಿದರು (11 ಎಸೆತ, 1 ಬೌಂಡರಿ). ಸಂದೀಪ್‌ ಶರ್ಮ ರಿಟರ್ನ್ ಕ್ಯಾಚ್‌ ಪಡೆಯುವ ಮೂಲಕ ಈ ವಿಕೆಟ್‌ ಹಾರಿಸಿದರು. ಆಗ ಚೆನ್ನೈ 4 ಓವರ್‌ಗಳಲ್ಲಿ 16 ರನ್‌ ಮಾಡಿತ್ತು.

ಶೇನ್‌ ವಾಟ್ಸನ್‌-ಸುರೇಶ್‌ ರೈನಾ ಜತೆಗೂಡಿದ ಬಳಿಕ ಚೆನ್ನೈ ಚೇತರಿಕೆಯ ಹಾದಿ ಹಿಡಿಯಿತು. ರನ್‌ ಕೂಡ ಸರಾಗವಾಗಿ ಬರತೊಡಗಿತು. ಆರಂಭದಲ್ಲಿ ಕುಂಟುತ್ತಿದ್ದ ವಾಟ್ಸನ್‌ 33 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. 51 ಎಸೆತಗಳಲ್ಲಿ ಶತಕ ದಾಖಲಾಯಿತು. ವಾಟ್ಸನ್‌-ರೈನಾ ಜೋಡಿ 9.3 ಓವರ್‌ಗಳ ಜತೆಯಾಟದಲ್ಲಿ 117 ರನ್‌ ಒಟ್ಟುಗೂಡಿಸಿ ತಂಡದ ಮೇಲೆ ಯಾವುದೇ ಒತ್ತಡ ಬೀಳದಂತೆ ನೋಡಿಕೊಂಡಿತು. ಹೈದರಾಬಾದ್‌ ಸವಾಲಿನ ಮೊತ್ತ
ಫೈನಲ್‌ ಪಂದ್ಯ ಆರಂಭವಾದದ್ದೇ ನೋಬಾಲ್‌ನಿಂದ. ಇದನ್ನೆಸೆದವರು ದೀಪಕ್‌ ಚಹರ್‌. ಇನ್ನೊಂದೆಡೆ ಹೈದರಾಬಾದ್‌ ಬೌಲಿಂಗ್‌ ದಾಳಿಯನ್ನು ಭುವನೇಶ್ವರ್‌ ಕುಮಾರ್‌ ಮೇಡನ್‌ ಮೂಲಕ ಆರಂಭಿಸಿದರು. ಭುವಿ ಸತತ 10 ಡಾಟ್‌ ಬಾಲ್‌ಗ‌ಳ ಮೂಲಕ ಗಮನ ಸೆಳೆದರು.

ಗಾಯಾಳು ಕೀಪರ್‌ ಸಾಹಾ ಬದಲು ಬಂದ ಆರಂಭಕಾರ ಶ್ರೀವತ್ಸ ಗೋಸ್ವಾಮಿ (5) ಮತ್ತು ಕೆಳ ಕ್ರಮಾಂಕದ ಆಟಗಾರ ದೀಪಕ್‌ ಹೂಡಾ (3) ಹೊರತುಪಡಿಸಿ ಹೈದರಾಬಾದ್‌ ತಂಡದ ಉಳಿದೆಲ್ಲ ಬ್ಯಾಟ್ಸ್‌ ಮನ್‌ಗಳಿಂದ ಗಮನಾರ್ಹ ಕೊಡುಗೆ ಸಂದಾಯವಾಯಿತು.

ನಾಯಕ ಕೇನ್‌ ವಿಲಿಯಮ್ಸನ್‌ ಸರ್ವಾಧಿಕ 47, ಔಟಾಗದೆ ಉಳಿದ ಯೂಸುಫ್ ಪಠಾಣ್‌ 45, ಎಡಗೈ ಆರಂಭಕಾರ ಶಿಖರ್‌ ಧವನ್‌ 26, ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ 23, ಹಾಗೂ ಅಂತಿಮ ಎಸೆತದಲ್ಲಿ ಔಟಾದ ಕಾರ್ಲೋಸ್‌ ಬ್ರಾತ್‌ವೇಟ್‌ 21 ರನ್‌ ಮಾಡಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. 

ಗೋಸ್ವಾಮಿ ವಿಕೆಟ್‌ 2ನೇ ಓವರಿನಲ್ಲಿ ರನೌಟ್‌ ರೂಪದಲ್ಲಿ ಬಿತ್ತು. ಬಳಿಕ ಧವನ್‌-ವಿಲಿಯಮ್ಸನ್‌ ಸೇರಿಕೊಂಡು 2ನೇ ವಿಕೆಟಿಗೆ 51 ರನ್‌ ಜತೆಯಾಟ ಪೇರಿಸಿ ಹೋರಾಟ ನಡೆಸಿದರು. ಇವರಲ್ಲಿ ಧವನ್‌ ಆಟ ತುಸು ನಿಧಾನ ಗತಿಯಿಂದ ಕೂಡಿತ್ತು. 26 ರನ್ನಿಗೆ 25 ಎಸೆತ ತೆಗೆದುಕೊಂಡರು (2 ಬೌಂಡರಿ, 1 ಸಿಕ್ಸರ್‌). ವಿಲಿಯಮ್ಸನ್‌ ಮತ್ತೂಂದು ಉಪಯುಕ್ತ ಜತೆಯಾಟದಲ್ಲಿ ಭಾಗಿಯಾಗಿ ಶಕಿಬ್‌ ನೆರವಿನಿಂದ 3ನೇ ವಿಕೆಟಿಗೆ 37 ರನ್‌ ಒಟ್ಟುಗೂಡಿಸಿದರು. ಶಕಿಬ್‌ ಗಳಿಕೆ 15 ಎಸೆತಗಳಿಂದ 23 ರನ್‌ (2 ಬೌಂಡರಿ, 1 ಸಿಕ್ಸರ್‌). ಬಿಗ್‌ ಹಿಟ್ಟರ್‌ ಯೂಸುಫ್ ಪಠಾಣ್‌ ಅಜೇಯ 45 ರನ್ನಿನೊಂದಿಗೆ ಮೆರೆದರು. 25 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 4 ಫೋರ್‌ ಹಾಗೂ 2 ಸಿಕ್ಸರ್‌ ಸೇರಿತ್ತು. ಮತ್ತೂಬ್ಬ ಸ್ಫೋಟಕ ಆಟಗಾರ ಬ್ರಾತ್‌ವೇಟ್‌ 3 ಸಿಕ್ಸರ್‌ ಸಿಡಿಸಿ 21 ರನ್‌ ಬಾರಿಸಿದರು (11 ಎಸೆತ).

ಈ ಪಂದ್ಯಕ್ಕಾಗಿ ಚೆನ್ನೈ ಸೂಪರ್‌ ಕಿಂಗ್‌ ಒಂದು ಬದಲಾವಣೆ ಮಾಡಿಕೊಂಡಿತು. ಹರ್ಭಜನ್‌ ಸಿಂಗ್‌ ಬದಲು ಕಣ್‌ì ಶರ್ಮ ಅವರಿಗೆ ಅವಕಾಶ ನೀಡಿತು. ಹೈದರಾಬಾದ್‌ ತಂಡದಲ್ಲಿ 2 ಪರಿವರ್ತನೆ ಸಂಭವಿಸಿತು. ಗಾಯಾಳು ವೃದ್ಧಿಮಾನ್‌ ಸಾಹಾ ಮತ್ತು ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಖಲೀಲ್‌ ಅಹ್ಮದ್‌ ಬದಲು ಶ್ರೀವತ್ಸ ಗೋಸ್ವಾಮಿ ಮತ್ತು ಸಂದೀಪ್‌ ಶರ್ಮ ಅವರನ್ನು ಆಡಿಸಿತು.

ಸ್ಕೋರ್‌ಪಟ್ಟಿ
ಸನ್‌ರೈಸರ್ ಹೈದರಾಬಾದ್‌

ಶ್ರೀವತ್ಸ ಗೋಸ್ವಾಮಿ    ರನೌಟ್‌    5
ಶಿಖರ್‌ ಧವನ್‌    ಬಿ ಜಡೇಜ    26
ಕೇನ್‌ ವಿಲಿಯಮ್ಸನ್‌    ಸ್ಟಂಪ್ಡ್ ಧೋನಿ ಬಿ ಶರ್ಮ    47
ಶಕಿಬ್‌ ಅಲ್‌ ಹಸನ್‌    ಸಿ ರೈನಾ ಬಿ ಬ್ರಾವೊ    23
ಯೂಸುಫ್ ಪಠಾಣ್‌    ಔಟಾಗದೆ    45
ದೀಪಕ್‌ ಹೂಡಾ    ಸಿ ಶೋರಿ (ಬದಲಿ) ಬಿ ಎನ್‌ಗಿಡಿ    3
ಕಾರ್ಲೋಸ್‌ ಬ್ರಾತ್‌ವೇಟ್‌    ಸಿ ರಾಯುಡು ಬಿ ಸಂದೀಪ್‌    21
ಇತರ        8
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)    178
ವಿಕೆಟ್‌ ಪತನ: 1-13, 2-64, 3-101, 4-133, 5-144, 6-178.
ಬೌಲಿಂಗ್‌:
ದೀಪಕ್‌ ಚಹರ್‌        4-0-25-0
ಲುಂಗಿ ಎನ್‌ಗಿಡಿ        4-1-26-1
ಶಾದೂìಲ್‌ ಠಾಕೂರ್‌        3-0-31-1
ಕಣ್‌ì ಶರ್ಮ        3-0-25-1
ಡ್ವೇನ್‌ ಬ್ರಾವೊ        4-0-46-1
ರವೀಂದ್ರ ಜಡೇಜ        2-0-24-1
ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವಾಟ್ಸನ್‌    ಔಟಾಗದೆ    117
ಫಾ ಡು ಪ್ಲೆಸಿಸ್‌    ಸಿ ಮತ್ತು ಬಿ ಸಂದೀಪ್‌    10
ಸುರೇಶ್‌ ರೈನಾ    ಸಿ ಗೋಸ್ವಾಮಿ ಬಿ ಬ್ರಾತ್‌ವೇಟ್‌    32
ಅಂಬಾಟಿ ರಾಯುಡು    ಔಟಾಗದೆ    17
ಇತರ        5
ಒಟ್ಟು  (18.3 ಓವರ್‌ಗಳಲ್ಲಿ 2 ವಿಕೆಟಿಗೆ)    181
ವಿಕೆಟ್‌ ಪತನ: 1-16, 2-133.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌    4-1-17-0
ಸಂದೀಪ್‌ ಶರ್ಮ        4-0-52-1
ಸಿದ್ಧಾರ್ಥ್ ಕೌಲ್‌        3-0-43-0
ರಶೀದ್‌ ಖಾನ್‌        4-0-25-0
ಶಕಿಬ್‌ ಅಲ್‌ ಹಸನ್‌        1-0-15-0
ಕಾರ್ಲೋಸ್‌ ಬ್ರಾತ್‌ವೇಟ್‌        2.3-0-27-1
ಪಂದ್ಯಶ್ರೇಷ್ಠ: ಶೇನ್‌ ವಾಟ್ಸನ್‌

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.