ಬೆಂಗಳೂರು-ರಾಜಸ್ಥಾನ್‌ ಪಂದ್ಯ ರದ್ದು

Team Udayavani, May 1, 2019, 10:17 AM IST

ಬೆಂಗಳೂರು: ಭಾರೀ ಮಳೆಯಿಂದ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಣ ಮಂಗಳವಾರದ ಐಪಿಎಲ್‌ ಪಂದ್ಯ ರದ್ದುಗೊಂಡಿದೆ. ಮಳೆಯಿಂದಾಗಿ 5 ಓವರ್‌ಗಳಿಗೆ ಸೀಮಿತವಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ತಂಡವು 7 ವಿಕೆಟಿಗೆ 62 ರನ್‌ ಗಳಿಸಿತ್ತು.

ಶ್ರೇಯಸ್‌ ಗೋಪಾಲ್‌ ಸತತ ಮೂರು ಎಸೆತಗಳಲ್ಲಿ ಕೊಹ್ಲಿ, ಡಿ’ವಿಲಿಯರ್ ಮತ್ತು ಸ್ಟೋಯಿನಿಸ್‌ ಅವರ ವಿಕೆಟ್‌ ಹಾರಿಸಿ ಹ್ಯಾಟ್ರಿಕ್‌ ಸಾಧಿಸಿದ್ದರು. ಇದಕ್ಕುತ್ತರವಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡವು 3.2 ಓವರ್‌ ತಲುಪಿದಾಗ ಮತ್ತೆ ಮಳೆ ಸುರಿಯಿತು. ಇದರಿಂದ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಈ ಹಂತದಲ್ಲಿ ರಾಜಸ್ಥಾನ್‌ ಒಂದು ವಿಕೆಟಿಗೆ 41 ರನ್‌ ಗಳಿಸಿತ್ತು.

ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಮಳೆಯದೇ ಆಟ. ಟಾಸ್‌ ಗೆದ್ದು ರಾಜಸ್ಥಾನ ರಾಯಲ್ಸ್‌ ಫೀಲ್ಡಿಂಗ್‌ ಆಯ್ಕೆ ಮಾಡಿ ಕೊಂಡರೂ ತುಸು ಹೊತ್ತಿನಲ್ಲೇ ಮಳೆ ಸುರಿಯಲಾರಂಭಿಸಿ ಆಟವನ್ನು ಮುಂದೂಡಬೇಕಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ