Rajasthan Royal-Punjab Kings; ಗುವಾಹಟಿಯಲ್ಲಿ ಪಂಜಾಬ್‌ ಜಯಭೇರಿ

ರಾಜಸ್ಥಾನ್‌ಗೆ 5 ರನ್‌ ಸೋಲು

Team Udayavani, Apr 6, 2023, 6:57 AM IST

Rajasthan Royal-Punjab Kings; ಗುವಾಹಟಿಯಲ್ಲಿ ಪಂಜಾಬ್‌ ಜಯಭೇರಿ

ಗುವಾಹಟಿ: ಗುವಾಹಟಿಯಲ್ಲಿ ನಡೆದ ಪ್ರಥಮ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವು ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು 5 ರನ್ನಿನಿಂದ ರೋಮಾಂಚಕವಾಗಿ ಸೋಲಿಸಿದೆ. ಇದು ಈ ಕೂಟದಲ್ಲಿ ಪಂಜಾಬ್‌ ದಾಖಲಿಸಿದ ಸತತ ಎರಡನೇ ಗೆಲುವು ಆಗಿದೆ.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್‌ 4 ವಿಕೆಟಿಗೆ 197 ರನ್‌ ಗಳಿಸಿದರೆ, ರಾಜಸ್ಥಾನ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟಿಗೆ 192 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಚೇಸಿಂಗ್‌ ವೇಳೆ ಯಶಸ್ವಿ ಜೈಸ್ವಾಲ್‌ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದರು. ಇವರೊಂದಿಗೆ ಆರ್‌. ಅಶ್ವಿ‌ನ್‌ ಇನ್ನಿಂಗ್ಸ್‌ ಆರಂಭಿಸಿದ್ದೊಂದು ಅಚ್ಚರಿ. ಆದರೆ ಇಬ್ಬರನ್ನೂ ಅರ್ಷದೀಪ್‌ 4 ಓವರ್‌ಗಳಲ್ಲಿ ಪೆವಿಲಿಯನ್‌ಗೆ ಅಟ್ಟಿದರು. ಜಾಸ್‌ ಬಟ್ಲರ್‌ ಕೂಡ ಯಶಸ್ಸು ಕಾಣಲಿಲ್ಲ. ಆಬಳಿಕ ನಾಯಕ ಸಂಜು ಸ್ಯಾಮ್ಸನ್‌, ಹಿಮ್ರಾನ್‌ ಹೆಟ್‌ಮೈರ್‌ ಅವರ ಉಪಯುಕ್ತ ಆಟದಿಂದಾಗಿ ತಂಡ ಗೆಲುವು ದಾಖಲಿಸಲು ಪ್ರಯತ್ನಿಸಿತು. ಆದರೆ ಅಂತಿಮ ಹಂತದಲ್ಲಿ ವಿಕೆಟ್‌ ಬಿದ್ದ ಕಾರಣ ರಾಜಸ್ಥಾನ್‌ ರಾಯಲ್ಸ್‌ಗೆ ಸೋಲಾಯಿತು. ನಥನ್‌ ಎಲ್ಲಿಸ್‌ ಅವರ ನಿಖರ ದಾಳಿಯೂ ರಾಜಸ್ಥಾನ್‌ ಕುಸಿಯಲು ಕಾರಣವಾಯಿತು. ಅವರು 30 ರನ್ನಿಗೆ 4 ವಿಕೆಟ್‌ ಕಿತ್ತರು.

ಪಂಜಾಬ್‌ ಭರ್ಜರಿ ಆರಂಭ
ಪಂಜಾಬ್‌ಗ ಪ್ರಭ್‌ಸಿಮ್ರಾನ್‌ ಮತ್ತು ಶಿಖರ್‌ ಧವನ್‌ ಭರ್ಜರಿ ಆರಂಭ ಒದಗಿಸಿದರು. ಹತ್ತರ ಸರಾಸರಿಯಲ್ಲಿ ರನ್‌ ಹರಿದು ಬರತೊಡಗಿತು. ಪವರ್‌ ಪ್ಲೇಯಲ್ಲಿ 63 ರನ್‌ ಒಟ್ಟುಗೂಡಿತು. 9.4 ಓವರ್‌ಗಳ ಜತೆಯಾಟ ನಡೆಸಿದ ಇವರು 90 ರನ್ನುಗಳ ಭದ್ರ ಬುನಾದಿ ನಿರ್ಮಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಜೇಸನ್‌ ಹೋಲ್ಡರ್‌ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ಪ್ರಭ್‌ಸಿಮ್ರಾನ್‌ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ 60 ರನ್‌ ಬಾರಿಸಿದರು. ಇದು ಅವರ ಚೊಚ್ಚಲ ಐಪಿಎಲ್‌ ಅರ್ಧ ಶತಕ. 34 ಎಸೆತಗಳ ಈ ಆಟ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳಿಂದ ರಂಗೇರಿಸಿಕೊಂಡಿತು.

ಶಿಖರ್‌ ಧವನ್‌ ಕೊನೆಯ ತನಕ ಕ್ರೀಸ್‌ ಆಕ್ರಮಿಸಿಕೊಂಡು ಅಜೇಯ 86 ರನ್‌ ಹೊಡೆದರು. ಆದರೆ ತಂಡದ ಮೊತ್ತವನ್ನು ಇನ್ನೂರಕ್ಕೆ ಏರಿಸಲು ಇವರಿಂದ ಸಾಧ್ಯವಾಗಲಿಲ್ಲ. 56 ಎಸೆತಗಳ ಕಪ್ತಾನನ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ, 3 ಸಿಕ್ಸರ್‌ ಸೇರಿತ್ತು.

ಕಳೆದ ಪಂದ್ಯದಲ್ಲಿ ಅಮೋಘ ಆಟವಾಡಿದ ಶ್ರೀಲಂಕಾದ ಬಿಗ್‌ ಹಿಟ್ಟರ್‌ ಭನುಕ ರಾಜಪಕ್ಸ ಇಲ್ಲಿ ಒಂದೇ ರನ್‌ ಮಾಡಿ ಕೈಗೆ ಏಟು ಅನುಭವಿಸಿ ಹೊರನಡೆದರು.

ಜಿತೇಶ್‌ ಶರ್ಮ ಅವರನ್ನು ಕೂಡಿಕೊಂಡ ಧವನ್‌ ಮತ್ತೆ ಇನ್ನಿಂಗ್ಸ್‌ ಬೆಳೆಸತೊಡಗಿದರು. ಸ್ಕೋರ್‌ ಒಂದೇ ವಿಕೆಟಿಗೆ 158ಕ್ಕೆ ಏರಿತು. ಜಿತೇಶ್‌ ಗಳಿಕೆ 16 ಎಸೆತಗಳಿಂದ 27 ರನ್‌ (2 ಬೌಂಡರಿ, 1 ಸಿಕ್ಸರ್‌). ಆದರೆ ಸಿಕಂದರ್‌ ರಝ (1) ಮತ್ತು ಶಾರೂಖ್‌ ಖಾನ್‌ (11) ಯಶಸ್ವಿಯಾಗಲಿಲ್ಲ. ಸ್ಯಾಮ್‌ ಕರನ್‌ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ರಾಜಸ್ಥಾನ್‌ ಬೌಲಿಂಗ್‌ ಸರದಿಯಲ್ಲಿ ಮಿಂಚಿದವರು ಜೇಸನ್‌ ಹೋಲ್ಡರ್‌ ಮತ್ತು ಅಶ್ವಿ‌ನ್‌. ಇಬ್ಬರೂ ಉತ್ತಮ ನಿಯಂತ್ರಣ ಸಾಧಿಸಿದರು.

ಸ್ಕೋರ್‌ ಪಟ್ಟಿ
ಪಂಜಾಬ್‌ ಕಿಂಗ್ಸ್‌
ಪ್ರಭ್‌ಸಿಮ್ರಾನ್‌ ಸಿಂಗ್‌ ಸಿ ಬಟ್ಲರ್‌ ಬಿ ಹೋಲ್ಡರ್‌ 60
ಶಿಖರ್‌ ಧವನ್‌ ಔಟಾಗದೆ 86
ಭನುಕ ರಾಜಪಕ್ಸ ಗಾಯಾಳು 1
ಜಿತೇಶ್‌ ಶರ್ಮ ಸಿ ಪರಾಗ್‌ ಬಿ ಚಹಲ್‌ 27
ಸಿಕಂದರ್‌ ರಝ ಬಿ ಅಶ್ವಿ‌ನ್‌ 1
ಶಾರೂಖ್‌ ಖಾನ್‌ ಸಿ ಬಟ್ಲರ್‌ ಬಿ ಹೋಲ್ಡರ್‌ 11
ಸ್ಯಾಮ್‌ ಕರನ್‌ ಔಟಾಗದೆ 1
ಇತರ 10
ಒಟ್ಟು (20 ಓವರ್‌ಗಳಲ್ಲಿ 4 ವಿಕೆಟಿಗೆ) 197
ವಿಕೆಟ್‌ ಪತನ: 1-90, 2-158, 3-159, 4-196.
ಬೌಲಿಂಗ್‌: ಟ್ರೆಂಟ್‌ ಬೌಲ್ಟ್ 4-0-38-0
ಕೆ.ಎಂ. ಆಸಿಫ್ 4-0-54-0
ಆರ್‌. ಅಶ್ವಿ‌ನ್‌ 4-0-25-1
ಜೇಸನ್‌ ಹೋಲ್ಡರ್‌ 4-0-29-2
ಯಜುವೇಂದ್ರ ಚಹಲ್‌ 4-0-50-1

ರಾಜಸ್ಥಾನ್‌ ರಾಯಲ್ಸ್‌
ಯಶಸ್ವಿ ಜೈಸ್ವಾಲ್‌ ಸಿ ಶಾರ್ಟ್‌ ಬಿ ಅರ್ಷದೀಪ್‌ 11
ಆರ್‌. ಅಶ್ವಿ‌ನ್‌ ಸಿ ಧವನ್‌ ಬಿ ಅರ್ಷದೀಪ್‌ 0
ಜಾಸ್‌ ಬಟ್ಲರ್‌ ಸಿ ಮತ್ತು ಬಿ ಎಲ್ಲಿಸ್‌ 19
ಸಂಜು ಸ್ಯಾಮ್ಸನ್‌ ಸಿ ಬದಲಿಗ ಬಿ ಎಲ್ಲಿಸ್‌ 42
ದೇವದತ್ತ ಪಡಿಕ್ಕಲ್‌ ಬಿ ಎಲ್ಲಿಸ್‌ 21
ರಿಯಾನ್‌ ಪರಾಗ್‌ ಸಿ ಶಾರೂಖ್‌ ಬಿ ಎಲ್ಲಿಸ್‌ 20
ಶಿಮ್ರಾನ್‌ ಹೆಟ್‌ಮೈರ್‌ ರನೌಟ್‌ 36 ದ್ರುವ್‌ ಜುರೆಲ್‌ ಔಟಾಗದೆ 32
ಜೇಸನ್‌ ಹೋಲ್ಡರ್‌ ಔಟಾಗದೆ 1 ಇತರ 10
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 192
ವಿಕೆಟ್‌ ಪತನ: 1-13, 2-26, 3-57, 4-91, 5-121, 6-124, 7-196
ಬೌಲಿಂಗ್‌: ಸ್ಯಾಮ್‌ ಕರನ್‌ 4-0-44-0
ಅರ್ಷದೀಪ್‌ ಸಿಂಗ್‌ 4-0-47-2
ಹರ್‌ಪ್ರೀತ್‌ ಬ್ರಾರ್‌ 2-0-15-0
ನಥನ್‌ ಎಲ್ಲಿಸ್‌ 4-0-30-4
ರಾಹುಲ್‌ ಚಾಹರ್‌ 4-0-31-0
ಸಿಕಂದರ್‌ ರಾಜ 2-0-24-0
ಪಂದ್ಯಶ್ರೇಷ್ಠ: ನಥನ್‌ ಎಲ್ಲಿಸ್‌

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.