ಐಪಿಎಲ್‌: ಕಿಂಗ್ಸ್‌ ಇಲೆವೆನ್‌ನಿಂದ ಡೇವಿಡ್‌ ಮಿಲ್ಲರ್‌ ಔಟ್‌

Team Udayavani, Nov 15, 2019, 10:45 PM IST

ಹೊಸದಿಲ್ಲಿ: ಮುಂಬರುವ ಐಪಿಎಲ್‌ಗೆ ಪ್ರಾಂಚೈಸಿಗಳು ತಮ್ಮ ತಂಡಗಳ ಪುನರ್ರಚನೆಯಲ್ಲಿ ತೊಡಗಿದ್ದು, ಹೊರಹೋಗುವ ಆಟಗಾರರ ಯಾದಿಯನ್ನು ಬಹುತೇಕ ಅಂತಿಮಗೊಳಿದೆ.

ಶುಕ್ರವಾರ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಡೇವಿಡ್‌ ಮಿಲ್ಲರ್‌, ಸ್ಯಾಮ್‌ ಕರನ್‌ ಮತ್ತು ಆ್ಯಂಡ್ರೂé ಟೈ ಅವರನ್ನು ಕೈಬಿಟ್ಟಿದೆ. ಆದರೆ ಕೆರಿಬಿಯನ್‌ ಬಿಗ್‌ ಹಿಟ್ಟರ್‌ ಕ್ರಿಸ್‌ ಗೇಲ್‌ ಅವರನ್ನು ಉಳಿಸಿಕೊಂಡಿದೆ.

ಡೇವಿಡ್‌ ಮಿಲ್ಲರ್‌ ಕಳೆದ 8 ಐಪಿಎಲ್‌ ಸೀಸನ್‌ಗಳಲ್ಲೂ ಪಂಜಾಬ್‌ ತಂಡವನ್ನು ಪ್ರತಿನಿಧಿಸಿದ್ದು, 79 ಪಂದ್ಯಗಳಿಂದ 1,850 ರನ್‌ ಬಾರಿಸಿದ್ದಾರೆ.

“ಮಿಲ್ಲರ್‌ ಪಂಜಾಬ್‌ ತಂಡದ ಐಕಾನ್‌ ಆಟಗಾರ. ಆದರೆ ತಂಡದಿಂದ ಹೊರಹೋಗಲು ಅವರು ನಿರ್ಧರಿಸಿದ್ದಾರೆ. ಅವರ ನಿರ್ಧಾರಕ್ಕೆ ಬೆಲೆ ಕೊಡುತ್ತಿದ್ದೇವೆ. ಅವರಿಗೆ ಆಲ್‌ ದಿ ಬೆಸ್ಟ್‌’ ಎಂದು ತಂಡದ ಮಾಲಕ ನೇಸ್‌ ವಾಡಿಯ ಶುಭ ಹಾರೈಸಿದ್ದಾರೆ.

ಉಳಿದಂತೆ ಇಂಗ್ಲೆಂಡ್‌ ಯುವ ವೇಗಿ ಸ್ಯಾಮ್‌ ಕರನ್‌ ಮತ್ತು ತಮಿಳುನಾಡಿನ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಅವರನ್ನೂ ಬಿಟ್ಟುಕೊಟ್ಟಿದೆ.

ಇದೇ ವೇಳೆ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿಜೇತ ತಂಡದ 7 ಆಟಗಾರರನ್ನು ಕೈಬಿಡಲು ನಿರ್ಧರಿಸಿದೆ. ಇದರಲ್ಲಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಕೂಡ ಸೇರಿದ್ದಾರೆ. ಉಳಿದವ ರೆಂದರೆ ಬೆನ್‌ ಕಟಿಂಗ್‌, ಎವಿನ್‌ ಲೆವಿಸ್‌, ಆ್ಯಡಂ ಮಿಲೆ°, ಜಾಸನ್‌ ಬೆಹೆÅಂಡಾಫ್ì, ಬರೀಂದರ್‌ ಸ್ರಾನ್‌ ಮತ್ತು ಪಂಕಜ್‌ ಜೈಸ್ವಾಲ್‌
ಸನ್‌ರೈಸರ್ ಹೈದರಾಬಾದ್‌ ಯೂಸುಫ್ ಪಠಾಣ್‌, ಶಕಿಬ್‌ ಅಲ್‌ ಹಸನ್‌, ಮಾರ್ಟಿನ್‌ ಗಪ್ಟಿಲ್‌ ಮತ್ತು ದೀಪಕ್‌ ಹೂಡಾ ಅವರನ್ನು ಕೈಬಿಟ್ಟಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ