ಮೆಲ್ಬರ್ನ್ ಟೆಸ್ಟ್: ಜಡೇಜಾ ಅರ್ಧಶತಕ, ಭಾರತಕ್ಕೆ ಉತ್ತಮ ಮುನ್ನಡೆ
Team Udayavani, Dec 28, 2020, 7:33 AM IST
ಮೆಲ್ಬರ್ನ್: ರವೀಂದ್ರ ಜಡೇಜಾ ಅರ್ಧಶತಕದ ನೆರವಿನಿಂದ ಭಾರತ ತಂಡ ಆಸೀಸ್ ವಿರುದ್ಧ 131 ರನ್ ಗಳ ಉಪಯಕ್ತ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಸರಣಿಯ ಮೊದಲ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.
ಐದು ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ತಂಡ ಆರಂಭದಲ್ಲಿ ನಾಯಕ ರಹಾನೆ ವಿಕೆಟ್ ಕಳೆದುಕೊಂಡಿತು. 112 ರನ್ ಗಳಿಸಿದ್ದ ವೇಳೆ ರಹಾನೆ ರನ್ ಔಟ್ ಆದರು. ನಿನ್ನೆ 40 ರನ್ ಗಳಿಸಿ ಆಡುತ್ತಿದ್ದ ಜಡೇಜಾ ಅರ್ಧಶತಕ ಪೂರೈಸಿ ತಾನೂ ಔಟಾದರು (57 ರನ್). ಬಾಲಂಗೋಚಿಗಳ ವಿಕೆಟ್ ಬೇಗನೇ ಪತನವಾಯಿತು.
ಇದನ್ನೂ ಓದಿ:ಸಯ್ಯದ್ ಮುಷ್ತಾಕ್ ಅಲಿ ಟಿ20 : ಕರ್ನಾಟಕಕ್ಕೆ ನಾಯರ್ ನಾಯಕ
ಭಾರತ 326 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ 131 ರನ್ ಮುನ್ನಡೆ ಸಾಧಿಸಿದೆ. ಆಸೀಸ್ ಪರ ಸ್ಟಾರ್ಕ್ ಮತ್ತು ಲಯಾನ್ ತಲಾ ಮೂರು ವಿಕೆಟ್, ಕಮಿನ್ಸ್ ಎರಡು ಮತ್ತು ಹೇಜಲ್ ವುಡ್ ಒಂದು ವಿಕೆಟ್ ಕಬಳಿಸಿದರು.