ಸಾಯಿ ಪ್ರಣೀತ್ಗೆ ಸೆಮಿಫೈನಲ್ನಲ್ಲಿ ಸೋಲು
ಜಪಾನ್ ಓಪನ್ ಬ್ಯಾಡ್ಮಿಂಟನ್
Team Udayavani, Jul 28, 2019, 5:59 AM IST
ಟೋಕಿಯೊ: ಬಿ. ಸಾಯಿ ಪ್ರಣೀತ್ “ಜಪಾನ್ ಓಪನ್’ ಬ್ಯಾಡ್ಮಿಂಟನ್ ಕೂಟದ ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಸೋಲನುಭವಿಸಿ ಕೂಟದಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಟೋಕಿಯೊ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಶನಿವಾರದ ಸೆಮಿಫೈನಲ್ ಹಣಾಹಣಿಯಲ್ಲಿ ಸಾಯಿ ಪ್ರಣೀತ್ ಆತಿಥೇಯ ನಾಡಿನ ಕೆಂಟೊ ಮೊಮೊಟ ವಿರುದ್ಧ 18-21, 12-21 ನೇರ ಗೇಮ್ಗಳ ಆಘಾತಕ್ಕೆ ಸಿಲುಕಿದರು.
ನೆಚ್ಚಿನ ಆಟಗಾರ ಮೊಮೊಟ ವಿರುದ್ಧ ಮೊದಲ ಗೇಮ್ನಲ್ಲಿ ಪ್ರಣೀತ್ ಉತ್ತಮ ಹೋರಾಟ ಸಂಘಟಿಸಿದರೂ ದ್ವಿತೀಯ ಗೇಮ್ ವೇಳೆ ಬಹಳ ಹಿಂದುಳಿದರು. 3-1 ಮುನ್ನಡೆಯೊಂದಿಗೆ ಪ್ರಣೀತ್ ಆಟ ಮೊದಲ್ಗೊಂಡಿತ್ತು. ಆದರೆ ತಿರುಗಿ ಬಿದ್ದ ಮೊಮೊಟ ಬ್ರೇಕ್ ವೇಳೆ 11-8 ಲೀಡ್ ಗಳಿಸುವಲ್ಲಿ ಯಶಸ್ವಿಯಾದರು. 23 ನಿಮಿಷಗಳಲ್ಲಿ ಈ ಗೇಮ್ ವಶಪಡಿಸಿಕೊಂಡರು.
ದ್ವಿತೀಯ ಗೇಮ್ನಲ್ಲೂ ಪ್ರಣೀತ್ 9-6ರ ಮುನ್ನಡೆ ಸಾಧಿಸಿದ್ದರು. ಆದರೆ ಅಗ್ರ ಶ್ರೇಯಾಂಕದ ಮೊಮೊಟ ಸತತ 6 ಅಂಕಗಳನ್ನು ಗೆದ್ದು ತಿರುಗೇಟು ನೀಡಿದರು. 22 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದು ಸತತ 2ನೇ ಬಾರಿಗೆ ತವರಿನ ಕೂಟದ ಫೈನಲ್ಗೆ ಲಗ್ಗೆ ಇರಿಸಿದರು.
ಜೊನಾಥನ್ ಕ್ರಿಸ್ಟಿ ಎದುರಾಳಿ
ಫೈನಲ್ನಲ್ಲಿ ಕೆಂಟೊ ಮೊಮೊಟ ಎದುರಾಳಿ ಇಂಡೋನೇಶ್ಯದ ಜೊನಾಥನ್ ಕ್ರಿಸ್ಟಿ. ಇನ್ನೊಂದು ಸೆಮಿಫೈನಲ್ನಲ್ಲಿ ಅವರು ಡೆನ್ಮಾರ್ಕ್ನ ಜಾನ್ ಒ ಜೊರ್ಗೆನ್ಸನ್ ವಿರುದ್ಧ 21-14, 21-14 ಅಂತರದ ಗೆಲುವು ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ