ಬೇರ್‌ಸ್ಟೊ ಶತಕ; ಇಂಗ್ಲೆಂಡಿಗೆ 4-0 ಸರಣಿ

Team Udayavani, Oct 1, 2017, 7:00 AM IST

AP9_30_2017_000009B.jpg

ಸೌತಾಂಪ್ಟನ್‌: ವೆಸ್ಟ್‌ ಇಂಡೀಸ್‌ ಮತ್ತೂಮ್ಮೆ ದೊಡ್ಡ ಮೊತ್ತ ಪೇರಿಸಿಯೂ ಸೋಲಿನ ಸುಳಿಗೆ ಸಿಲುಕಿದೆ. ಜಾನಿ ಬೇರ್‌ಸ್ಟೊ ಅವರ ಅಮೋಘ ಶತಕ ಸಾಹಸದಿಂದ ಇಂಗ್ಲೆಂಡ್‌ 9 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ 5 ಪಂದ್ಯಗಳ ಏಕದಿನ ಸರಣಿಯನ್ನು 4-0 ಅಂತರದಿಂದ ವಶಪಡಿಸಿಕೊಂಡಿದೆ.

ಶುಕ್ರವಾರ ಇಲ್ಲಿನ “ರೋಸ್‌ಬೌಲ್‌ ಸ್ಟೇಡಿಯಂ’ನಲ್ಲಿ ನಡೆದ 5ನೇ ಹಾಗೂ ಅಂತಿಮ ಏಕದಿನದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 6 ವಿಕೆಟಿಗೆ 288 ರನ್‌ ಪೇರಿಸಿದರೆ, ಇಂಗ್ಲೆಂಡ್‌ ಕೇವಲ 38 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 294 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಆರಂಭಕಾರರಾದ ಜಾಸನ್‌ ರಾಯ್‌ ಹಾಗೂ ಜಾನಿ ಬೇರ್‌ಸ್ಟೊ ಅವರ ಪ್ರಚಂಡ ಬ್ಯಾಟಿಂಗ್‌ ಆಂಗ್ಲರ ಗೆಲುವನ್ನು ನಿರೀಕ್ಷೆಗಿಂತಲೂ ಸುಲಭಗೊಳಿಸಿತು. ಇವರಿಬ್ಬರು ಮೊದಲ ವಿಕೆಟಿಗೆ 21.2 ಓವರ್‌ಗಳಿಂದ 156 ರನ್‌ ಪೇರಿಸಿದರು. ಬಳಿಕ ಬೇರ್‌ಸ್ಟೊ ಮತ್ತು ಜೋ ರೂಟ್‌ ಮುರಿಯದ 2ನೇ ವಿಕೆಟಿಗೆ 138 ರನ್‌ ರಾಶಿ ಹಾಕಿ ವಿಂಡೀಸ್‌ ದಾಳಿಯನ್ನು ಧೂಳೀಪಟಗೊಳಿಸಿದರು.

ಜಾನಿ ಬೇರ್‌ಸ್ಟೊ ಗಳಿಕೆ ಅಜೇಯ 141 ರನ್‌. ಇದು ಅವರ 2ನೇ ಶತಕ ಹಾಗೂ ಜೀವನಶ್ರೇಷ್ಠ ಬ್ಯಾಟಿಂಗ್‌. 114 ಎಸೆತ ಎದುರಿಸಿದ ಅವರು 17 ಬೌಂಡರಿ ಬಾರಿಸಿದರು. ಜಾಸನ್‌ ರಾಯ್‌ ನಾಲ್ಕೇ ರನ್ನಿನಿಂದ ಶತಕ ವಂಚಿತರಾಗಬೇಕಾಯಿತು. ಅವರ 96 ರನ್‌ 70 ಎಸೆತಗಳಿಂದ ಬಂತು. ಸಿಡಿದದ್ದು 11 ಬೌಂಡರಿ. ರೂಟ್‌ ಔಟಾಗದೆ 46 ರನ್‌ ಹೊಡೆದರು.

ವೆಸ್ಟ್‌ ಇಂಡೀಸ್‌ ಪರ ಶೈ ಹೋಪ್‌ ಸರ್ವಾಧಿಕ 72 ರನ್‌, ಕ್ರಿಸ್‌ ಗೇಲ್‌ 40 ರನ್‌ ಹೊಡೆದರು. ಕೈಲ್‌ ಹೋಪ್‌ (33), ಸಾಮ್ಯುಯೆಲ್ಸ್‌ (32), ಮೊದಲ ಪಂದ್ಯವಾಡಿದ ಸುನೀಲ್‌ ಆ್ಯಂಬ್ರಿಸ್‌ (ಅಜೇಯ 38), ಆ್ಯಶೆÉ ನರ್ಸ್‌ (31) ಮೂವತ್ತರ ಗಡಿ ದಾಟಿದರು.

ಜಾನಿ ಬೇರ್‌ಸ್ಟೊ ಪಂದ್ಯಶ್ರೇಷ್ಠ, ಮೊಯಿನ್‌ ಅಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸರಣಿಯ ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-6 ವಿಕೆಟಿಗೆ 288 (ಶೈ ಹೋಪ್‌ 72, ಗೇಲ್‌ 40, ಆ್ಯಂಬ್ರಿಸ್‌ ಔಟಾಗದೆ 38, ಪ್ಲಂಕೆಟ್‌ 54ಕ್ಕೆ 2). ಇಂಗ್ಲೆಂಡ್‌-38 ಓವರ್‌ಗಳಲ್ಲಿ ಒಂದು ವಿಕೆಟಿಗೆ-294 (ಬೇರ್‌ಸ್ಟೊ ಔಟಾಗದೆ 141, ರಾಯ್‌ 96, ಕಮಿನ್ಸ್‌ 70ಕ್ಕೆ 1). ಪಂದ್ಯಶ್ರೇಷ್ಠ: ಬೇರ್‌ಸ್ಟೊ. ಸರಣಿಶ್ರೇಷ್ಠ: ಮೊಯಿನ್‌ ಅಲಿ.

ಟಾಪ್ ನ್ಯೂಸ್

ಶಾಲೆಗೆ ಗೈರಾದ ವಿದ್ಯಾರ್ಥಿಯನ್ನು ಕರೆಯಲು ಹೋದ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ: ದೂರು ದಾಖಲು

ಶಾಲೆಗೆ ಗೈರಾದ ವಿದ್ಯಾರ್ಥಿಯನ್ನು ಕರೆಯಲು ಹೋದ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ: ದೂರು ದಾಖಲು

ಭಾರತದ ಮೊದಲ ಮಹಿಳಾ ಮನೋವೈದ್ಯೆ ಶಾರದಾ ಮೆನನ್‌ ನಿಧನ

ಭಾರತದ ಮೊದಲ ಮಹಿಳಾ ಮನೋವೈದ್ಯೆ ಶಾರದಾ ಮೆನೊನ್‌ ನಿಧನ

ಪೋಲೀಸರ ಮೇಲಿನ ಹಲ್ಲೆ ಘಟನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ

ಪೋಲೀಸರ ಮೇಲಿನ ಹಲ್ಲೆ ಘಟನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ

32croploan

ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಮುಕ್ತಿಗೆ ಓಟಿಎಸ್ ಯೋಜನೆಗೆ ಮನವಿ

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

27pramod

ಓಮಿಕ್ರಾನ್‍ಗೆ ಜನತೆ ಹೆದರುವ ಅಗತ್ಯವಿಲ್ಲ: ಪ್ರಮೋದ ಸಾವಂತ್

ಒಮಿಕ್ರಾನ್ ಅಪಾಯಕಾರಿಯಲ್ಲ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 887 ಅಂಕ ಜಿಗಿತ, ನಿಫ್ಟಿ ಟಾಪ್

ಒಮಿಕ್ರಾನ್ ಅಪಾಯಕಾರಿಯಲ್ಲ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 887 ಅಂಕ ಜಿಗಿತ, ನಿಫ್ಟಿ ಟಾಪ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೇವಿಸ್‌ ಕಪ್‌ ಟೆನಿಸ್‌: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ

ಡೇವಿಸ್‌ ಕಪ್‌ ಟೆನಿಸ್‌: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ

ನಮ್ಮ ಗುರಿ ಭಾರತೀಯ ಕ್ರಿಕೆಟ್‌ ಬೆಳವಣಿಗೆ: ವಿರಾಟ್‌ ಕೊಹ್ಲಿ

ನಮ್ಮ ಗುರಿ ಭಾರತೀಯ ಕ್ರಿಕೆಟ್‌ ಬೆಳವಣಿಗೆ: ವಿರಾಟ್‌ ಕೊಹ್ಲಿ

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

virat

ಮೂರು ಮಾದರಿಯಲ್ಲಿ 50 ಕ್ಕೂ ಹೆಚ್ಚು ಜಯ: ವಿರಾಟ್ ಕೊಹ್ಲಿ ನೂತನ ದಾಖಲೆ

MUST WATCH

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

udayavani youtube

JDS ಜೊತೆ BJP ಹೊಂದಾಣಿಕೆ ಮಾಡಲು ಹೊರಟಿದೆ ಎಂದಾದರೆ… ನೀವೇ ಯೋಚಿಸಿ : ಡಿಕೆಶಿ ವ್ಯಂಗ್ಯ

ಹೊಸ ಸೇರ್ಪಡೆ

ಶಾಲೆಗೆ ಗೈರಾದ ವಿದ್ಯಾರ್ಥಿಯನ್ನು ಕರೆಯಲು ಹೋದ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ: ದೂರು ದಾಖಲು

ಶಾಲೆಗೆ ಗೈರಾದ ವಿದ್ಯಾರ್ಥಿಯನ್ನು ಕರೆಯಲು ಹೋದ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ: ದೂರು ದಾಖಲು

ಭಾರತದ ಮೊದಲ ಮಹಿಳಾ ಮನೋವೈದ್ಯೆ ಶಾರದಾ ಮೆನನ್‌ ನಿಧನ

ಭಾರತದ ಮೊದಲ ಮಹಿಳಾ ಮನೋವೈದ್ಯೆ ಶಾರದಾ ಮೆನೊನ್‌ ನಿಧನ

ಶಿರಸಿ: ಭಾರತೀಯ ಸೇನಾ ಲೆಫ್ಟಿನೆಂಟ್ ಕೇವಲ್ ಹೆಗಡೆಗೆ ಸನ್ಮಾನ

ಶಿರಸಿ: ಭಾರತೀಯ ಸೇನಾ ಲೆಫ್ಟಿನೆಂಟ್ ಕೇವಲ್ ಹೆಗಡೆಗೆ ಸನ್ಮಾನ

ಪೋಲೀಸರ ಮೇಲಿನ ಹಲ್ಲೆ ಘಟನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ

ಪೋಲೀಸರ ಮೇಲಿನ ಹಲ್ಲೆ ಘಟನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ

shivamogga news

ಗ್ರಾಪಂ ಸದಸ್ಯರನ್ನು  ಬೀದಿಗೆ ತಂದ ಬಿಜೆಪಿ: ಮಧು ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.