ರಿಷಭ್‌ ಪಂತ್‌ ಕಳಪೆ ಫಾರ್ಮ್: ಟಿ20 ವಿಶ್ವಕಪ್‌ಗೆ ಕೆ.ಎಲ್‌.ರಾಹುಲ್‌ ವಿಕೆಟ್‌ ಕೀಪರ್‌?

Team Udayavani, Dec 16, 2019, 11:37 AM IST

ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ .ರಾಹುಲ್‌ ಹೆಚ್ಚುವರಿಯಾಗಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ಹೊರುವ ಮುನ್ಸೂಚನೆ ಲಭಿಸಿದೆ. ಕೋಚ್‌ ರವಿ ಶಾಸ್ತ್ರಿ ಇಂತಹದೊಂದು ಸುಳಿವು ಲಭಿಸಿದೆ.

“ಕಳಪೆ ಫಾರ್ಮ್ ಹೀಗೆ ಮುಂದುವರಿದರೆ ವಿಕೆಟ್‌ ಕೀಪರ್‌ ಕಮ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ . ಅನಿವಾರ್ಯವಾಗಿ ರಾಹುಲ್‌ ನಮಗೆ ಪರ್ಯಾಯ ಆಯ್ಕೆಯಾಗಬಹುದು’ ಎಂದುರವಿ ಶಾಸ್ತ್ರಿ ತಿಳಿಸಿದ್ದಾರೆ.

ಕನ್ನಡಿಗನಿಗೆ ಕೀಪಿಂಗ್‌ ಹೊಣೆ?: ರಿಷಭ್‌ ಪಂತ್‌ಗೆ ಹಲವು ಅವಕಾಶ ನೀಡಿದ ಹೊರತಾಗಿಯೂ ವಿಫ‌ಲವಾಗುತ್ತಿರುವುದು ಕೋಚ್‌ ರವಿ ಶಾಸ್ತ್ರಿ ಅಸಮಾಧಾನಕ್ಕೆ ಕಾರಣವಾಗಿದೆ. ಪಂತ್‌ ಕಳಪೆ ಪ್ರದರ್ಶನ ಹೀಗೆ ಮುಂದುವರಿದರೆ ಟಿ20 ವಿಶ್ವಕಪ್‌ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ ಎನ್ನುವುದನ್ನು ರವಿಶಾಸ್ತ್ರಿ ತಿಳಿಸಿದ್ದಾರೆ.

“ಕೆ.ಎಲ್‌.ರಾಹುಲ್‌ ವಿಶ್ವಕಪ್‌ ತಂಡದ ಕೀಪಿಂಗ್‌ಗೆ ಒಂದೊಳ್ಳೆ ಆಯ್ಕೆ. ಜತೆಗೆ ಬ್ಯಾಟಿಂಗ್‌ ಕೂಡ ಉತ್ತಮವಾಗಿ ಮಾಡುತ್ತಿದ್ದಾರೆ’ ಎಂದರು.

ಮಧ್ಯಮ ಕ್ರಮಾಂಕಕ್ಕೆ ಒಳ್ಳೆಯ ಬ್ಯಾಟ್ಸ್‌ ಮನ್‌ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದ ರವಿ ಶಾಸ್ತ್ರಿ “ಐಪಿಎಲ್‌ನಲ್ಲಿ ಆಡುವ ಆಟಗಾರನಿಗೆ ಅವಕಾಶ ಸಿಕ್ಕಿದರೂ ಸಿಗಬಹುದು’ ಎಂದಿದ್ದಾರೆ.

ಕೆ.ಎಲ್‌.ರಾಹುಲ್‌ ಭಾರತ ತಂಡದ ಪರ ವಿಕೆಟ್‌ ಕೀಪಿಂಗ್‌ ಮಾಡಿಲ್ಲ. ರಣಜಿ ಹಾಗೂ ಐಪಿಎಲ್‌ ನಲ್ಲಿ ವಿಕೆಟ್‌ ಕೀಪಿಂಗ್‌ ಮಾಡಿ ಯಶಸ್ಸು ಕಂಡಿದ್ದಾರೆ.

ಪಂತ್‌ ವೈಫ‌ಲ್ಯ ಸುರಿಮಳೆ: ಬ್ಯಾಟ್ಸ್‌ಮನ್‌ -ವಿಕೆಟ್‌ ಕೀಪರ್‌ ಆಗಿ ರಿಷಭ್‌ ಪಂತ್‌ ವೈಫ‌ಲ್ಯಗಳ ಸುರಿಮಳೆ ಕಂಡಿದ್ದಾರೆ. ಇತ್ತೀಚಿಗಿನ ವಿಂಡೀಸ್‌ ವಿರುದ್ಧ ಟಿ20 ಸರಣಿ ಸೇರಿದಂತೆ ಹಲವು ಸರಣಿಗಳಲ್ಲಿ ರಿಷಭ್‌ ಪಂತ್‌ ರನ್‌ ಬರ ಅನುಭವಿಸಿದ್ದಾರೆ. ಅಷ್ಟೇ ಆದರೆ ಸುಮ್ಮನಿರಬಹುದಿತ್ತು. ವಿಕೆಟ್‌ ಹಿಂದೆ ಸ್ಟಂಪ್‌ ಹಿಂದೆಯೂ ಅವಕಾಶ ಚೆಲ್ಲಿ ದುಬಾರಿಯಾಗಿದ್ದಾರೆ.

ಹೀಗಾಗಿಯೇ ಅಭಿಮಾನಿಗಳು ಟ್ವೀಟರ್‌ನಲ್ಲಿ ಧೋನಿಗೆ ಅವಕಾಶ ನೀಡಿ ಎಂದು ಬಿಸಿಸಿಐ ಆಯ್ಕೆ ಸಮಿತಿಯನ್ನು ಒತ್ತಾಯಿಸಿದರು. ವಿಶಾಖಪಟ್ಟಣದಲ್ಲಿ ನಡೆದ ವಿಂಡೀಸ್‌ ವಿರುದ್ಧದ ಟಿ20 ಪಂದ್ಯದಲ್ಲಿ ಪಂತ್‌ ಕೀಪಿಂಗ್‌ನಲ್ಲಿ ತಪ್ಪು ಎಸಗಿದ್ದಾಗ ಅಭಿಮಾನಿಗಳು “ಧೋನಿ…ಧೋನಿ’ ಎಂದು ಕೂಗಿದ್ದರು.

ಆಗ ವಿರಾಟ್‌ ಕೊಹ್ಲಿ ಪಂತ್‌ಗೆ ಬೆಂಬಲವಾಗಿ ಕ್ರೀಡಾಂಗಣದಲ್ಲಿ ನಿಂತಿದ್ದರು. ಸ್ವತಃ ಆಯ್ಕೆ ಸಮಿತಿ, ನಾಯಕ ಕೊಹ್ಲಿ ಸೇರಿದಂತೆ ಎಲ್ಲರ ಬೆಂಬಲದಿಂದ ಹಲವು ಅವಕಾಶ ಪಡೆಯುತ್ತಿದ್ದರೂ ಪಂತ್‌ ವಿಫ‌ಲರಾಗುತ್ತಿರುವುದು ವಿಪರ್ಯಾಸವೇ ಸರಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ