ಕಾಂಗರೂ ಪಡೆಯ ಎಚ್ಚರದ ನಡೆ

Team Udayavani, Mar 6, 2017, 11:10 AM IST

06-sp-3.jpg

ಬೆಂಗಳೂರು: ತೀವ್ರಗತಿಯಲ್ಲಿ ತಿರುವು ಪಡೆಯುತ್ತಿದ್ದ ಬೆಂಗಳೂರು ಟ್ರ್ಯಾಕ್‌ನಲ್ಲಿ ಅಷ್ಟೇ ಎಚ್ಚ ರಿಕೆಯ ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಸರಣಿಯ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಹಂತ ಹಂತವಾಗಿ ಮೇಲುಗೈ ಸಾಧಿಸ ತೊಡಗಿದೆ. ಭಾರತದ 189 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಉತ್ತರವಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 237 ರನ್‌ ಮಾಡಿದೆ.

ಇನ್ನೂ 4 ವಿಕೆಟ್‌ಗಳನ್ನು ಕೈಲಿರಿಸಿಕೊಂಡಿರುವ ಸ್ಮಿತ್‌ ಪಡೆ ಸದ್ಯ 48 ರನ್ನುಗಳ ಮುನ್ನಡೆಯಲ್ಲಿದೆ. 25 ರನ್‌ ಗಳಿಸಿರುವ ಕೀಪರ್‌ ಮ್ಯಾಥ್ಯೂ ವೇಡ್‌ ಹಾಗೂ 14 ರನ್‌ ಮಾಡಿರುವ ಮಿಚೆಲ್‌ ಸ್ಟಾರ್ಕ್‌ ಕ್ರೀಸಿನಲ್ಲಿದ್ದಾರೆ. ಆಸೀಸ್‌ ತನ್ನ ಮೊತ್ತವನ್ನು ಮುನ್ನೂರರ ತನಕ ವಿಸ್ತರಿಸಿದರೂ ಅದು ಇಲ್ಲಿನ “ಟರ್ನಿಂಗ್‌ ಟ್ರ್ಯಾಕ್‌’ನಲ್ಲಿ ಟೀಮ್‌ ಇಂಡಿಯಾಕ್ಕೆ ಭಾರೀ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಸ್ಟಾರ್ಕ್‌ ಮುನ್ನುಗ್ಗಿ ಬಾರಿಸುವ ಛಾತಿ ಹೊಂದಿರುವುದರಿಂದ, ಸೋಮವಾರ ಮೊದಲ ಅವಧಿಯಲ್ಲೇ, ಹೆಚ್ಚು ರನ್‌ ನೀಡದೆ ಕಾಂಗರೂ ಬಾಲ ಕತ್ತರಿಸಿದರಷ್ಟೇ ಟೀಮ್‌ ಇಂಡಿಯಾ ಉಳಿವಿನ ಪ್ರಯತ್ನ ಆರಂಭಿಸಬಹುದು.

ಆದರೆ ವಾಯುಭಾರ ಕುಸಿತದಿಂದಾಗಿ ಉಳಿದ ಮೂರೂ ದಿನಗಳ ಪಂದ್ಯಕ್ಕೆ ಮಳೆಯಿಂದ ಅಡಚಣೆ ಯಾಗುವ ಸಂಭವವಿದೆ. ಆದರೆ ಭಾರೀ ಮಳೆಯಾಗುವ ಸೂಚನೆ ಇಲ್ಲವಾದ್ದರಿಂದ ಸ್ಪಷ್ಟ ಫ‌ಲಿತಾಂಶಕ್ಕೇನೂ ಅಡ್ಡಿ ಇಲ್ಲ ಎನ್ನಲಾಗಿದೆ.

ದ್ವಿತೀಯ ದಿನದಾಟದಲ್ಲಿ ಮಿಂಚಿದವರು “ಫೈಟಿಂಗ್‌ ಸಿಕ್ಸ್‌ಟಿ’ ಕೊಡುಗೆ ಸಲ್ಲಿಸಿದ ಮ್ಯಾಟ್‌ ರೆನ್‌ಶಾ (60), ಶಾನ್‌ ಮಾರ್ಷ್‌ (66), 49ಕ್ಕೆ 3 ವಿಕೆಟ್‌ ಕಿತ್ತ ರವೀಂದ್ರ ಜಡೇಜ ಮತ್ತು ಎದುರಾಳಿಯನ್ನು ಹೀಯಾಳಿಸಿ ಪುಕ್ಕಟೆ ಮನೋರಂಜನೆ ಒದಗಿಸಿದ ಇಶಾಂತ್‌ ಶರ್ಮ!

ಅವಸರಿಸಲಿಲ್ಲ ಆಸ್ಟ್ರೇಲಿಯ
ವಿಕೆಟ್‌ ನಷ್ಟವಿಲ್ಲದೆ 40 ರನ್‌ ಮಾಡಿದಲ್ಲಿಂದ ರವಿವಾರದ ಆಟ ಆರಂಭಿಸಿದ ಆಸ್ಟ್ರೇಲಿಯ, ಯಾವ ಹಂತದಲ್ಲೂ ಅವಸರದ ಬ್ಯಾಟಿಂಗ್‌ ತೋರ್ಪಡಿಸಲಿಲ್ಲ. ಸ್ಪಿನ್ನರ್‌ಗಳಿಗೆ ಸಿಕ್ಕಾಪಟ್ಟೆ ನೆರವು ನೀಡುವ ಈ ಪಿಚ್‌ನಲ್ಲಿ ಎಚ್ಚರಿಕೆ, ತಾಳ್ಮೆ, ಏಕಾಗ್ರತೆಯನ್ನೇ ಮೂಲಮಂತ್ರವನ್ನಾಗಿಸಿಕೊಂಡು ಬ್ಯಾಟಿಂಗ್‌ ನಡೆಸುತ್ತ ಹೋಯಿತು. 90 ಓವರ್‌ಗಳ ಇಡೀ ದಿನದಾಟದಲ್ಲಿ ಆಸ್ಟ್ರೇಲಿಯ ಗಳಿಸಿದ್ದು ಕೇವಲ 197 ರನ್‌ ಮಾತ್ರ. ತಂಡದ ಒಟ್ಟು ಮೊತ್ತವಾದ 237 ರನ್‌ 106 ಓವರ್‌ಗಳಿಂದ ಬಂದಿರುವುದು ಪ್ರವಾಸಿಗರ ಬ್ಯಾಟಿಂಗ್‌ ಗತಿಗೆ ಕನ್ನಡಿ ಹಿಡಿಯುತ್ತದೆ. ಸರಾಸರಿ ಕೇವಲ 2.23.

ಭಾರತದ ಸ್ಪಿನ್‌ ದಾಳಿ ಕೂಡ ಹರಿತವಾಗಿಯೇ ಇತ್ತು. ಅಶ್ವಿ‌ನ್‌-ಜಡೇಜ ಜೋಡಿ ಅಡಿಗಡಿಗೂ ಅಗ್ನಿ ಪರೀಕ್ಷೆಯನ್ನೊಡ್ಡುತ್ತ ಹೋಯಿತು. ಆದರೆ ಆಸೀಸ್‌ ಕ್ರಿಕೆಟಿಗರು ಭಾರತದವರಂತೆ ಯಾವ ಹಂತದಲ್ಲೂ ಏಕಾಗ್ರತೆ ಕಳೆದುಕೊಳ್ಳಲಿಲ್ಲ. ದೊಡ್ಡ ಹೊಡೆತಕ್ಕೆ ಮುಂದಾಗಲಿಲ್ಲ. ಮುನ್ನುಗ್ಗಿ ಬಾರಿಸಿ ಎಡವಟ್ಟು ಮಾಡಿ ಕೊಳ್ಳಲಿಲ್ಲ. “ರನ್‌ ಬೇಕಾದರೆ ನಿಧಾನವಾಗಿ ಬರಲಿ, ವಿಕೆಟ್‌ ಮಾತ್ರ ಕೈಯಲ್ಲಿರಲಿ’ ಎಂಬ ಕಾರ್ಯ ತಂತ್ರದಲ್ಲಿ ಕಾಂಗರೂ ಟೀಮ್‌ ಧಾರಾಳ ಯಶಸ್ಸು ಕಂಡಿತು.

ಆಮೆಗತಿಯಲ್ಲಿ ಸಾಗಿದ ಆಟ
ಒಬ್ಬೊಬ್ಬ ಆಟಗಾರ ಎದುರಿಸಿದ ಎಸೆತಗಳೇ ಆಸ್ಟ್ರೇಲಿಯ ಇನ್ನಿಂಗ್ಸಿನ ಕತೆಯನ್ನು ಸಾರುತ್ತದೆ. ಸದಾ ಮುನ್ನುಗ್ಗಿ ಬೀಸುವ ವಾರ್ನರ್‌ 33 ರನ್ನಿಗೆ 67 ಎಸೆತ, ರೆನ್‌ಶಾ 60 ರನ್ನಿಗೆ 196 ಎಸೆತ, ಸ್ಮಿತ್‌ ಕೇವಲ 8 ರನ್ನಿಗೆ 52 ಎಸೆತ, ಶಾನ್‌ ಮಾರ್ಷ್‌ 66 ರನ್ನಿಗೆ 197 ಎಸೆತ, ವೇಡ್‌ ಅಜೇಯ 25 ರನ್ನಿಗೆ 68 ಎಸೆತ… ಹೀಗೆ ಆಮೆಗತಿಯಲ್ಲಿ ಸಾಗುತ್ತದೆ ಆಸೀಸ್‌ ಬ್ಯಾಟಿಂಗ್‌ ಬಂಡಿ.

ಭಾರತ ಮತ್ತು ಆಸ್ಟ್ರೇಲಿಯ ಇನ್ನಿಂಗ್ಸ್‌ಗಳಲ್ಲಿ ಈ ವರೆಗೆ ಸಮಾನ ಸಂಖ್ಯೆಯ 18 ಬೌಂಡರಿಗಳು ದಾಖಲಾಗಿವೆ. ಈವರೆಗಿನ ಏಕೈಕ ಸಿಕ್ಸರ್‌ ರೆನ್‌ಶಾ ಬ್ಯಾಟಿನಿಂದ ಸಿಡಿದಿದೆ. ಸಿಕ್ಸರ್‌ ಕೊಟ್ಟವರು ರವೀಂದ್ರ ಜಡೇಜ. ಅವರೇ ದ್ವಿತೀಯ ದಿನದ ಯಶಸ್ವಿ ಬೌಲರ್‌. ಜಡೇಜ ಸಾಧನೆ 49ಕ್ಕೆ 3 ವಿಕೆಟ್‌. ಅಶ್ವಿ‌ನ್‌ 41 ಓವರ್‌ ಎಸೆದರೂ ಒಂದೇ ವಿಕೆಟಿಗೆ ತೃಪ್ತಿಪಡಬೇಕಾಯಿತು. ಉಳಿದೆರಡು ವಿಕೆಟ್‌ ಇಶಾಂತ್‌ ಶರ್ಮ ಮತ್ತು ಉಮೇಶ್‌ ಯಾದವ್‌ ಪಾಲಾಯಿತು. 

ತೃತೀಯ ಸ್ಪಿನ್ನರ್‌ ಗೈರಲ್ಲಿ ಸ್ಥಳೀಯ ಆಫ್ ಸ್ಪಿನ್ನರ್‌ ಕರುಣ್‌ ನಾಯರ್‌ ಅವರನ್ನು ದಾಳಿಗಿಳಿಸಿ ಪರಿಣಾಮ ವನ್ನು ಗಮನಿಸಬಹುದಿತ್ತು. ಆದರೆ ನಾಯರ್‌ಗೆ ಲಭಿಸಿದ್ದು ಒಂದೇ ಓವರ್‌. ಅದೂ ದಿನದ ಕೊನೆಯ ಹಂತದಲ್ಲಿ. ಆಗಲೇ ಭಾರತ ಹೊಸ ಚೆಂಡನ್ನು ಕೈಗತ್ತಿ ಕೊಂಡಿತ್ತು. ಹೊಸ ಚೆಂಡಿನಲ್ಲಿ ಭಾರತಕ್ಕೆ ಸಿಕ್ಕಿದ್ದು ಒಂದೇ ಯಶಸ್ಸು, ಅದು ಶಾನ್‌ ಮಾರ್ಷ್‌ ಅವರ “ಬಿಗ್‌ ವಿಕೆಟ್‌’ ರೂಪದಲ್ಲಿ ಬಂತು. ಈ ವಿಕೆಟ್‌ ಉಮೇಶ್‌ ಯಾದವ್‌ ಬುಟ್ಟಿಗೆ ಬಿತ್ತು.

200 ರನ್ನಿಗೆ 94 ಓವರ್‌!
ದಿನದ ಮೊದಲ ಅವಧಿಯ 29 ಓವರ್‌ಗಳಲ್ಲಿ ಆಸ್ಟ್ರೇಲಿಯ ಗಳಿಸಿದ್ದು ಬರೀ 47 ರನ್‌. ಆಗ ವಾರ್ನರ್‌ ಮತ್ತು ಸ್ಮಿತ್‌ ಪೆವಿಲಿಯನ್‌ ಸೇರಿದ್ದರು. 2ನೇ ಅವಧಿಯ ಆಟದಲ್ಲಿ 35 ಓವರ್‌ ಎಸೆಯಲಾಯಿತು. ಆಸೀಸ್‌ ಪೇರಿಸಿದ್ದು 76 ರನ್‌ ಮಾತ್ರ. ಭಾರತಕ್ಕೆ ಹೆಚ್ಚಿನ ಯಶಸ್ಸು ಲಭಿಸಿದ್ದು ಕೂಡ ಇದೇ ಅವಧಿಯಲ್ಲಿ. ಆಗ ರೆನ್‌ಶಾ, ಹ್ಯಾಂಡ್ಸ್‌ ಕಾಂಬ್‌ ಮತ್ತು ಮಿಚೆಲ್‌ ಮಾರ್ಷ್‌ ಆಟ ಮುಗಿದಿತ್ತು. ಟೀ ಅವಧಿಯ ಸ್ಕೋರ್‌ 5ಕ್ಕೆ 163.
ಅಂತಿಮ ಅವಧಿಯಲ್ಲಿ ಶಾನ್‌ ಮಾರ್ಷ್‌ ಅಮೋಘ ತಾಳ್ಮೆ ಪ್ರದರ್ಶಿಸಿದರು. 26 ಓವರ್‌ಗಳಿಂದ 74 ರನ್‌ ಒಟ್ಟುಗೂಡಿತು. ಉರುಳಿದ್ದು ಒಂದೇ ವಿಕೆಟ್‌.
ಆಸ್ಟ್ರೇಲಿಯ 100 ರನ್ನಿಗೆ 53.4 ಓವರ್‌, 200 ರನ್ನಿಗೆ 93.5 ಓವರ್‌ ತೆಗೆದುಕೊಂಡಿತು.

ಭುಜದ ಮೇಲೆ ತೇಲಿದ ಚೆಂಡನ್ನು ಬಿಡದೇ ಹಿಡಿದ ಅಶ್ವಿ‌ನ್‌
ಆಲ್‌ರೌಂಡರ್‌ ರವಿಚಂದ್ರನ್‌ ಅಶ್ವಿ‌ನ್‌ ಭಾರತ ಮತ್ತು ಆಸ್ಟ್ರೇಲಿಯ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ವಿಶಿಷ್ಟ ರೀತಿಯಲ್ಲಿ ಕ್ಯಾಚೊಂದನ್ನು ಪಡೆದರು. ರವೀಂದ್ರ ಜಡೇಜ ಬೌಲಿಂಗ್‌ನ‌ಲ್ಲಿ ಆಸ್ಟ್ರೇಲಿಯದ ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಚೆಂಡನ್ನು ಮಿಡ್‌ ವಿಕೆಟ್‌ನತ್ತ ಬಾರಿಸಿದ್ದರು. ಬಹು ಎತ್ತರದಲ್ಲಿ ಸಾಗುತ್ತಿದ್ದ ಚೆಂಡನ್ನು ಅಶ್ವಿ‌ನ್‌ ನೆಗೆದು ಕೈಗೆ ಪಡೆದು ನೆಲಕ್ಕೆ ಬಿದ್ದರು. ಬಿದ್ದಾಗ ಚೆಂಡು ಅಶ್ವಿ‌ನ್‌ ಕೈತಪ್ಪಿ ಬಲಗೈ ಭುಜದ ಮೇಲೆ ಹರಿದಾಡಿ ಸ್ವಲ್ಪ ಎತ್ತರಕ್ಕೆ ಚಿಮ್ಮುದೆ. ಆದರೂ ಪಟ್ಟುಬಿಡದೇ ಅಶ್ವಿ‌ನ್‌ ಚೆಂಡನ್ನು ಮತ್ತೆ ಹಿಡಿತಕ್ಕೆ ಪಡೆದರು. ಇದು ಜಡೇಜಗೆ ಸಿಕ್ಕ 3ನೇ ವಿಕೆಟ್‌ ಆಗಿದೆ.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌    189
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌
ಡೇವಿಡ್‌ ವಾರ್ನರ್‌    ಬಿ ಅಶ್ವಿ‌ನ್‌    33
ಮ್ಯಾಟ್‌ ರೆನ್‌ಶಾ    ಸ್ಟಂಪ್ಡ್ ಸಾಹಾ ಬಿ ಜಡೇಜ    60
ಸ್ಟೀವ್‌ ಸ್ಮಿತ್‌    ಸಿ ಸಾಹಾ ಬಿ ಜಡೇಜ    8
ಶಾನ್‌ ಮಾರ್ಷ್‌    ಸಿ ನಾಯರ್‌ ಬಿ ಯಾದವ್‌    66
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಸಿ ಅಶ್ವಿ‌ನ್‌ ಬಿ ಜಡೇಜ    16
ಮಿಚೆಲ್‌ ಮಾರ್ಷ್‌    ಎಲ್‌ಬಿಡಬ್ಲ್ಯು ಇಶಾಂತ್‌    0
ಮ್ಯಾಥ್ಯೂ ವೇಡ್‌    ಬ್ಯಾಟಿಂಗ್‌    25
ಮಿಚೆಲ್‌ ಸ್ಟಾರ್ಕ್‌    ಬ್ಯಾಟಿಂಗ್‌    14

ಇತರ        15
ಒಟ್ಟು (6 ವಿಕೆಟಿಗೆ)        237

ವಿಕೆಟ್‌ ಪತನ: 1-52, 2-82, 3-134, 4-160, 5-163, 6-220.

ಬೌಲಿಂಗ್‌:
ಇಶಾಂತ್‌ ಶರ್ಮ        23-6-39-1
ಉಮೇಶ್‌ ಯಾದವ್‌        24-7-57-1
ಆರ್‌. ಅಶ್ವಿ‌ನ್‌        41-10-75-1
ರವೀಂದ್ರ ಜಡೇಜ        17-1-49-3
ಕರುಣ್‌ ನಾಯರ್‌        1-0-7-0

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.