ಟೆನಿಸ್‌ ಬಾಳ್ವೆಯ 45ನೇ ಪ್ರಶಸ್ತಿ ಮರ್ರೆ ದುಬಾೖ ಚಾಂಪಿಯನ್‌


Team Udayavani, Mar 6, 2017, 11:05 AM IST

06-sp-4.jpg

ದುಬಾೖ: ದುಬಾೖ ಡ್ನೂಟಿ ಫ್ರೀ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವದ ನಂಬರ್‌ ವನ್‌ ಟೆನಿಸಿಗ ಆ್ಯಂಡಿ ಮರ್ರೆ ಈ ವರ್ಷ ಪ್ರಶಸ್ತಿಯ ಖಾತೆ ತೆರೆದಿದ್ದಾರೆ. ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಅವರು ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ವಿರುದ್ಧ ಕೇವಲ 73 ನಿಮಿಷಗಳಲ್ಲಿ 6-3, 6-2 ಅಂತರದ ಜಯ ಸಾಧಿಸಿದರು.

ಇದು ಆ್ಯಂಡಿ ಮರ್ರೆಗೆ ಒಲಿದ ಮೊದಲ ದುಬಾೖ ಟೆನಿಸ್‌ ಪ್ರಶಸ್ತಿ. ಒಟ್ಟಾರೆಯಾಗಿ ಟೆನಿಸ್‌ ಬಾಳ್ವೆಯ 45ನೇ ಕಿರೀಟ. ಮರ್ರೆ 5 ವರ್ಷಗಳ ಹಿಂದೊಮ್ಮೆ ಇಲ್ಲಿ ಫೈನಲ್‌ ಪ್ರವೇಶಿಸಿದ್ದರೂ ಅಂದು ರೋಜರ್‌ ಫೆಡರರ್‌ ವಿರುದ್ಧ ಸೋಲುಂಡಿದ್ದರು. 

2017ರ ಟೆನಿಸ್‌ ಋತುವಿನಲ್ಲಿ ಮರ್ರೆ ಆಡುತ್ತಿರುವ ದ್ವಿತೀಯ ಫೈನಲ್‌ ಇದಾಗಿದೆ. ಇದಕ್ಕೂ ಮುನ್ನ ದೋಹಾ ಟೆನಿಸ್‌ ಕೂಟದ ಫೈನಲ್‌ ಪ್ರವೇಶಿಸಿ ಅಲ್ಲಿ ಜೊಕೋವಿಕ್‌ಗೆ ಶರಣಾಗಿದ್ದರು. “ಕೊನೆಗೂ ದುಬಾೖಯಲ್ಲಿ ಟೆನಿಸ್‌ ಪ್ರಶಸ್ತಿ ಗೆದ್ದದ್ದು ಬಹಳ ಖುಷಿಯ ಸಂಗತಿ. ಇಂದಿನ ಆರಂಭ ನಿಧಾನ ಗತಿಯದ್ದಾಗಿತ್ತಾದರೂ ಒಟ್ಟಾರೆಯಾಗಿ ನನ್ನ ಆಟ ಉತ್ತಮವಾಗಿತ್ತು. ಫಿನಿಶಿಂಗ್‌ ಕೂಡ ಸಮಾಧಾನ ತಂದಿತು’ ಎಂದು ಮರ್ರೆ ಪ್ರತಿಕ್ರಿಯಿಸಿದರು. 

ಇದು ವೆರ್ದಸ್ಕೊ ವಿರುದ್ಧ ಆಡಿದ 14 ಪಂದ್ಯಗಳಲ್ಲಿ ಮರ್ರೆ ಸಾಧಿಸಿದ 13ನೇ ಗೆಲುವು. ಕೇವಲ ಒಂದರಲ್ಲಷ್ಟೇ ಅವರಿಗೆ ಸೋಲು ಎದುರಾಗಿತ್ತು.
25 ವರ್ಷಗಳ ದುಬಾೖ ಟೆನಿಸ್‌ ಚರಿತ್ರೆಯಲ್ಲಿ ಚಾಂಪಿಯನ್‌ ಎನಿಸಿದ ಮೊದಲ ಬ್ರಿಟನ್‌ ಆಟಗಾರನೆಂಬುದು ಆ್ಯಂಡಿ ಮರ್ರೆ ಹೆಗ್ಗಳಿಕೆ.

ಬೋಪಣ್ಣ ಜೋಡಿ ಪರಾಭವ: ದುಬಾೖ ಕೂಟದ ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್‌ ಬೋಪಣ್ಣ-ಪೋಲೆಂಡಿನ ಮಾರ್ಸಿನ್‌ ಮಾಟ್ಕೊàವ್‌ಸ್ಕಿ ಜೋಡಿಗೆ ಸೋಲು ಎದುರಾಗಿದೆ. ರೊಮೇನಿಯಾದ ಹೊರಿಯ ಟೆಕು-ಹಾಲೆಂಡಿನ ಜೀನ್‌ ಜೂಲಿಯನ್‌ ರೋಜರ್‌ ವಿರುದ್ಧ ಭಾರೀ ಹೋರಾಟ ಸಂಘಟಿಸಿದ ಬಳಿಕ ಇಂಡೋ-ಪೋಲಿಶ್‌ ಜೋಡಿ 6-4, 3-6, 3-10 ಅಂತರದಿಂದ ಪರಾಭವಗೊಂಡಿತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.