ತಮ್ಮ ದೇಶ ಗೆದ್ದ ಖುಷಿಯಲ್ಲಿ ಈ ಮಕ್ಕಳ ಸಂಭ್ರಮಾಚರಣೆ ನೋಡಿ..

Team Udayavani, Sep 10, 2019, 7:10 PM IST

ಕ್ರೀಡಾ ಲೋಕದಲ್ಲಿ ದಿನಕ್ಕೊಂದು ದಾಖಲೆಗಳಾಗುತ್ತಿರುತ್ತವೆ. ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ರಂಜಿಸುವುದು ಕ್ರಿಕೆಟ್. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಕೆಲವೊಮ್ಮೆ ಒಂದೇ ಒಂದು ಸೋಲು ತಂಡವನ್ನು ಬೆಂಬಲಿಸುವ ಸಾವಿರಾರು ದೇಶ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡುತ್ತದೆ. ಕೆಲವೊಮ್ಮೆ ತಮ್ಮ ಮೆಚ್ಚಿನ ತಂಡ ಗೆದ್ದರೆ ಆ ಗೆಲುವಿನ ಸಂಭ್ರಮಕ್ಕೆ ಕೊನೆಯೇ ಇರದು.

ಕ್ರಿಕೆಟ್ ಶಿಶುಗಳೆಂದು ಕರೆಯುವ ಅಫ್ಘಾನಿಸ್ತಾನ ನಿನ್ನೆ ಚಿತ್ತಗಾಂಗ್ ನಲ್ಲಿ ಮುಕ್ತಾಯಗೊಂಡ ಟೆಸ್ಟ್ ಪಂದ್ಯದಲ್ಲಿ ಅತಿಥೇಯ  ಬಾಂಗ್ಲಾದೇಶವನ್ನು ಮಣಿಸಿ ಮೊದಲ ಬಾರಿ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು. ಈ ವಿಜಯ ಅಫ್ಫಾನ್ ಗಳ ಪಾಲಿಗೆ ಚರಿತ್ರೆ. ಅಫ್ಘಾನಿಸ್ತಾನದ ಈ ದಾಖಲೆಯನ್ನು ಕ್ರಿಕೆಟ್ ವಲಯ ಮೆಚ್ಚಿಕೊಂಡಿದೆ. ಎಲ್ಲೆಡೆಯಿಂದ ರಶೀದ್ ಪಡೆಗೆ ಅಭಿನಂದನೆಗಳು ರವಾನೆಯಾಗುತ್ತಿವೆ.

 

ಮಳೆಯ ಕಾರಣದಿಂದ ದಿನದ ಅಂತಿಮ ದಿನದ ಕಡೆಯ ಅವಧಿಯಲ್ಲಿ ಕೇವಲ 10 ಓವರ್ ಗಳ ಪಂದ್ಯ ನೆಡದಿತ್ತು. ಅಫ್ಘಾನ್ ಗೆಲುವಿಗೆ 10 ಓವರ್ ಸಾಕಿತ್ತು. ಅಂತಿಮ ಕ್ಷಣದಲ್ಲಿ ರಶೀದ್ ಖಾನ್ ಬೌಲಿಂಗ್ ದಾಳಿಗೆ ಬಾಂಗ್ಲಾ ಹುಲಿಗಳು ತತ್ತರುಸಿ ಹೋಯಿತು. ಅಫ್ಘಾನ್ ತನ್ನ ಚೊಚ್ಚಲ ಟೆಸ್ಟ್ ಪ್ರಶಸ್ತಿಯನ್ನು ಎತ್ತಿ ಸಂಭ್ರಮಾಚರಿಸಿದರು.

 

ಟಿವಿ ಎದುರು ಕೂತ ಪುಟ್ಟ ಮಕ್ಕಳು ಅಫ್ಘಾನಿಸ್ತಾನ ಗೆದ್ದಾಗ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಶಫೀಕ್ ಸ್ಟಾನಿಕ್ಜೈ  ತಮ್ಮ ಟ್ವಿಟರ್ ಖಾತೆಯಲ್ಲಿ ಮಕ್ಕಳ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

 

ಈ ವಿಡೀಯೋ ಓಗ ವೈರಲ್ ಆಗಿದೆ.ಇಲ್ಲಿದೆ ನೋಡಿ ಆ ವಿಡೀಯೋ..

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ