ಮಯಾಂಕ್ ಮತ್ತೊಂದು ದ್ವಿಶತಕ: ಹೋಳ್ಕರ್ ಮೈದಾನದಲ್ಲಿ ಕನ್ನಡಿಗ ಮಿಂಚು

Team Udayavani, Nov 15, 2019, 3:48 PM IST

ಇಂಧೋರ್: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಭಾರತದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ದ್ವಿಶತಕ ಬಾರಿಸಿ ಮಿಂಚಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಶತಕ ಬಾರಿಸಿದ್ದ ಮಯಾಂಕ್ ತಮ್ಮ ಬ್ಯಾಟಿಂಗ್ ಫಾರ್ಮ ಅನ್ನು ಹಾಗೆಯೇ ಮುಂದುವರಿಸಿದರು. 302 ಎಸೆತದಲ್ಲಿ ತಮ್ಮ ದ್ವಿಶತಕ ಪೂರೈಸಿದ ಮಯಾಂಕ್ ಭರ್ಜರಿ ಐದು ಸಿಕ್ಸರ್ ಬಾರಿಸಿದರು. ಅಗರ್ವಾಲ್ ಈ ಇನ್ನಿಂಗ್ಸ್ ನಲ್ಲಿ ಒಟ್ಟು 25 ಬೌಂಡರಿಗಳಿದ್ದವು.

ಮೆಹದಿ ಹಸನ್ ಬೌಲಿಂಗ್ ನಲ್ಲಿ ಲಾಂಗ್ ಆನ್ ಕಡೆಗೆ ಸಿಕ್ಸರ್ ಬಾರಿಸಿ ಸೆಹವಾಗ್ ಸ್ಟೈಲ್ ನಲ್ಲಿ ದ್ವಿಶತಕ ಬಾರಿಸಿ ಮೆರೆದಾಡಿದರು.

ಅತೀ ಕಡಿಮೆ ಇನ್ನಿಂಗ್ಸ್ ನಲ್ಲಿ ಎರಡು ದ್ವಿಶತಕ ಸಿಡಿಸಿದ ಎರಡನೇ ವಿಶ್ವದ ಆಟಗಾರ ಎಂಬ ದಾಖಲೆ ಬರೆದರು. ಮಯಾಂಕ್ 12 ಇನ್ನಿಂಗ್ಸ್ ನಲ್ಲಿ ಎರಡನೇ ದ್ವಿಶತಕ ಬಾರಿಸಿದರೆ, ಮೊದಲ ಸ್ಥಾನ ವಿನೋದ್ ಕಾಂಬ್ಳಿಗೆ. (5 ಇನ್ನಿಂಗ್ಸ್).


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ