ಚೆನ್ನೈ ಸೂಪರ್ ಕಿಂಗ್ಸ್ ಮರಳಿ ಸೇರ್ಪಡೆಗೆ ಧೋನಿ ಈಗ ನಿಕಟ
Team Udayavani, Oct 24, 2017, 4:56 PM IST
ಹೊಸದಿಲ್ಲಿ : ಐಪಿಎಲ್ ಆಡಳಿತ ಮಂಡಳಿಯ ಪ್ರಸ್ತಾಪವೊಂದರ ಪ್ರಕಾರ ಎಂ ಎಸ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ (ಸಿಎಸ್ಕೆ) ದಿರಿಸಿನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.
ಇದೇ ರೀತಿ ರಾಜಸ್ಥಾನ್ ರಾಯಲ್ಸ್ (ಆರ್ಆರ್) ತಂಡ ಕೂಡ ಮುಂದಿನ 2018ರ ಋತುವಿನಲ್ಲಿ ಐಪಿಎಲ್ ಕೂಟವನ್ನು ಸೇರಿಕೊಳ್ಳಲಿದೆ.
ಐಪಿಎಲ್ ಆಡಳಿತ ಮಂಡಳಿಯ ಈ ಪ್ರಸ್ತಾಪ ಜಾರಿಗೆ ಬಂದಲ್ಲಿ ಕಳೆದ ಎರಡು ವರ್ಷಗಳಿಂದ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ಮತ್ತು ಗುಜರಾತ್ ಲಯನ್ಸ್ ತಂಡಗಳಲ್ಲಿ ಹಂಚಿ ಹೋಗಿರುವ ಸಿಎಸ್ಕೆ ಮತ್ತು ಆರ್ಆರ್ ಆಟಗಾರರು ಮರಳಿ ತಮ್ಮ ಮಾತೃ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಕ್ರಿಕೆಟ್ ಫಿಕ್ಸಿಂಗ್/ಭ್ರಷ್ಟಾಚಾರದ ಆರೋಪಗಳ ಮೇಲೆ ಸಿಎಸ್ಕೆ ಮತ್ತು ಆರ್ ಆರ್ ತಂಡಗಳು ಎರಡು ವರ್ಷಗಳ ಐಪಿಎಲ್ ನಿಷೇಧಕ್ಕೆ ಗುರಿಯಾಗಿದ್ದವು.