ಮುಂಬೈ-ಲಕ್ನೋ: ಇಂದು ಎಲಿಮಿನೇಟರ್‌ ಪಂದ್ಯ… ಗೆದ್ದರೆ ಇನ್ನೊಂದು ಅವಕಾಶ; ಸೋತರೆ ಹೊರಕ್ಕೆ

Team Udayavani, May 24, 2023, 7:10 AM IST

ಮುಂಬೈ-ಲಕ್ನೋ: ಇಂದು ಎಲಿಮಿನೇಟರ್‌ ಪಂದ್ಯ… ಗೆದ್ದರೆ ಇನ್ನೊಂದು ಅವಕಾಶ; ಸೋತರೆ ಹೊರಕ್ಕೆ

ಚೆನ್ನೈ: ಕೊನೆ ಹಂತದಲ್ಲಿ ಬ್ಯಾಟಿಂಗ್‌ ಪಡೆಯ ಗಮನಾರ್ಹ ನಿರ್ವಹಣೆ ಜತೆಗೆ ಪ್ಲೇ ಆಫ್ಗೆ ನಾಟ ಕೀಯ ಪ್ರವೇಶದಿಂದ ಮುಂಬೈ ಇಂಡಿ ಯನ್ಸ್‌ ತಂಡವು ಬುಧವಾರ ನಡೆ ಯುವ ಎಲಿಮಿನೇಟರ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯದ ವಿಜೇತ ತಂಡವು ಮೇ 26ರಂದು ನಡೆಯುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್‌ ಪಂದ್ಯದ ಸೋತ ತಂಡದ ಜತೆ ಹೋರಾಡಲಿದೆ.

ರೋಹಿತ್‌ ಶರ್ಮ ನೇತೃತ್ವದ ಮುಂಬೈ ನಿಜವಾಗಿಯೂ ಅದೃಷ್ಟದ ಬಲದಿಂದಲೇ ಈ ಬಾರಿ ಪ್ಲೇ ಆಫ್ಗೆ ತೇರ್ಗಡೆಯಾಗಿದೆ. ಕಳೆದ ವರ್ಷ ಶೋಚನೀಯ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಮುಂಬೈ ಈ ಬಾರಿ ಆರಂಭ ದಲ್ಲಿ ಸಾಧಾರಣ ನಿರ್ವಹಣೆ ನೀಡಿತು. ಕೊನೆ ಹಂತದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ತಂಡವು ಪ್ಲೇ ಆಫ್ಗೆ ತೇರ್ಗಡೆಗೆ ಹಾತೊರೆಯುತ್ತಿತ್ತು. ಅಂತಿಮ ಲೀಗ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಮಣಿಸುವ ಮೂಲಕ ಮುಂಬೈ ಪ್ಲೇ ಆಫ್ಗೆ ತೇರ್ಗಡೆಯಾಯಿತು.

ಐದು ಬಾರಿಯ ಚಾಂಪಿಯನ್‌ ಆಗಿರುವ ಮುಂಬೈ ಈ ಅದೃಷ್ಟ ವನ್ನು ಚೆನ್ನಾಗಿ ಅರಿತು ಆಡಿದರೆ ಮತ್ತೆ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಬಹುದು. ಆದರೆ ಬುಧವಾರದ ಎಲಿಮಿನೇಟರ್‌ ಪಂದ್ಯದಲ್ಲಿ ಅದರ ಎದುರಾಳಿ ಆಗಿರುವ ಲಕ್ನೋ ತಂಡದ ಜತೆ ಇಷ್ಟರವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಮುಂಬೈ ಸೋತಿರುವುದು ಚಿಂತೆಯ ವಿಷಯವಾಗಿದೆ. ಇದೇ ವೇಳೆ ಲಕ್ನೋ ತಂಡವೂ ಎಚ್ಚರಿಕೆಯಿಂದ ಆಡಬೇಕಾದ ಅಗತ್ಯವಿದೆ. ಲಕ್ನೋ ತಂಡ ಕಳೆದ ವರ್ಷ ಎಲಿಮಿನೇಟರ್‌ ಪಂದ್ಯದಲ್ಲಿಯೇ ಆರ್‌ಸಿಬಿ ವಿರುದ್ಧ ಸೋತು ನಿರ್ಗಮಿಸಿತ್ತು.

ಲಕ್ನೋ ಬ್ಯಾಟಿಂಗ್‌ ಬಲಿಷ್ಠ
ಕೆಎಲ್‌ ರಾಹುಲ್‌ ಅವರ ಅನು ಪಸ್ಥಿತಿಯ ಹೊರತಾಗಿಯೂ ಲಕ್ನೋ ತಂಡದ ಬ್ಯಾಟಿಂಗ್‌ ಬಲಿಷ್ಠವಾಗಿದೆ. 14 ಪಂದ್ಯಗಳಿಂದ 368 ರನ್‌ ಪೇರಿಸಿರುವ ಮಾರ್ಕಸ್‌ ಸ್ಟೋಯಿನಿಸ್‌ ಸ್ಫೋಟಕ ಆಟಕ್ಕೆ ಹೆಸರುವಾಸಿ. ಅವರಲ್ಲದೇ ಕೈಲ್‌ ಮೇಯರ್ (361 ರನ್‌) ಮತ್ತು ನಿಕೋರಾಸ್‌ ಪೂರಣ್‌ (358 ರನ್‌) ಅವರ ಅಮೋಘ ಆಟದಿಂದಾಗಿ ಲಕ್ನೋ ಸುಲಭವಾಗಿ ಪ್ಲೇ ಆಫ್ಗೆ ತೇರ್ಗಡೆಯಾಯಿತು.

ಚೆನ್ನೈಯ ನಿಧಾನಗತಿಯ ಪಿಚ್‌ನಲ್ಲಿ ಪೂರಣ್‌, ಮàಯರ್, ಸ್ಟೋಯಿ ನಿಸ್‌ ಉತ್ತಮ ನಿರ್ವಹಣೆ ನೀಡಲು ಸಾಧ್ಯವಾದರೆ ಲಕ್ನೋ ಮುನ್ನಡೆಯುವ ಸಾಧ್ಯತೆಯಿದೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೋತಿದ್ದರೂ ಆ ಪಂದ್ಯದಲ್ಲಿ ಮೇಯರ್ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಒಂದು ವೇಳೆ ಬುಧವಾರದ ಪಂದ್ಯದಲ್ಲಿ ಆವರು ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರೆ ಲಕ್ನೋ ಮೇಲುಗೈ ಸಾಧಿಸಬಹುದು.

ಮುಂಬೈಯ ಬ್ಯಾಟಿಂಗ್‌ ಶಕ್ತಿಗೆ ಕಡಿವಾಣ ಹಾಕುವ ಬಗ್ಗೆಯೂ ಲಕ್ನೋ ಚಿಂತಿಸಬೇಕಾಗಿದೆ. ತಂಡದ ಪರ ಗರಿಷ್ಠ ವಿಕೆಟ್‌ ಪಡೆದಿರುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯಿ (16 ವಿಕೆಟ್‌) ಈ ಮಹತ್ವದ ಪಂದ್ಯದಲ್ಲೂ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಅವರಿಗೆ ನಾಯಕ ಕೃಣಾಲ್‌ ಪಾಂಡ್ಯ ಅವರಲ್ಲದೇ ನವೀನ್‌ ಉಲ್‌ ಹಕ್‌ ಮತ್ತು ಆವೇಶ್‌ ಖಾನ್‌ ನೆರವಾಗುವ ಸಾಧ್ಯತೆಯಿದೆ. ಅನುಭವಿ ಅಮಿತ್‌ ಮಿಶ್ರಾ ಕೂಡ ಉತ್ತಮ ದಾಳಿ ಸಂಘಟಿಸಲು ಸಮರ್ಥರಿದ್ದಾರೆ.

ಲೀಗ್‌ ಹಂತದಲ್ಲಿ ಮುಂಬೈ ತಂಡ ಈ ಪಿಚ್‌ನಲ್ಲಿ ಒದ್ದಾಡಿರುವುದನ್ನು ಲಕ್ನೋ ಗಮನಿಸಿದೆ. ಹೀಗಾಗಿ ನಿಯಂತ್ರಿತ ಬೌಲಿಂಗ್‌ ಮೂಲಕ ಮುಂಬೈಯನ್ನು ಕಟ್ಟಿಹಾಕಲು ಲಕ್ನೋ ಯೋಚಿಸುತ್ತಿದೆ.

ಮುಂಬೈ ಶ್ರೇಷ್ಠ
ಮುಂಬೈಯ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಬಲಿಷ್ಠವಾಗಿದೆ. ಆಸ್ಟ್ರೇಲಿ ಯದ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಅವರ ಕೊಡುಗೆಯನ್ನು ಮುಂಬೈ ಮರೆಯಲು ಸಾಧ್ಯವಿಲ್ಲ. ಕೊನೆಯ ಲೀಗ್‌ನಲ್ಲಿ ಮುಂಬೈ ತಂಡವು ಹೈದರಾಬಾದ್‌ ವಿರುದ್ಧ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಜೇಯ ಶತಕದಿಂದಾಗಿ ಮುಂಬೈ ಜಯಿಸಿತ್ತು. ಗ್ರೀನ್‌ (381 ರನ್‌) ಅವರಲ್ಲದೇ ಸೂರ್ಯಕುಮಾರ್‌ ಯಾದವ್‌ (511 ರನ್‌) ನಾಯಕ ರೋಹಿತ್‌ ಶರ್ಮ (313 ರನ್‌), ಇಶಾನ್‌ ಕಿಶನ್‌ (439) ಅವರ ಬ್ಯಾಟಿಂಗ್‌ ವೈಭವ ಮುಂಬೈಯ ಶಕ್ತಿಯಾಗಿದೆ. ಇವರನ್ನು ಕಟ್ಟಿಹಾಕಲು ಲಕ್ನೋ ಕಾರ್ಯತಂತ್ರ ರೂಪಿಸಬೇಕಾಗಿದೆ.

ಬೌಲಿಂಗ್‌ನಲ್ಲಿ ಮುಂಬೈ ಪಿಯೂಷ್‌ ಚಾವ್ಲಾ ಅವರ ಅನುಭವವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಇಷ್ಟರವರೆಗೆ 20 ವಿಕೆಟ್‌ ಪಡೆದಿರುವ ಅವರು ತಂಡದ ಗರಿಷ್ಠ ವಿಕೆಟ್‌ ಪಡೆದ ಸಾಧಕರಾಗಿದ್ದಾರೆ. ಅವರಿಗೆ ಜಾಸನ್‌ ಬೆಹ್ರನ್‌ಡಾಫ್ì (14 ವಿಕೆಟ್‌) ನೆರವಾಗುವ ಸಾಧ್ಯತೆಯಿದೆ.

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.