ರಾಷ್ಟ್ರೀಯ ಬಾಕ್ಸಿಂಗ್: ಸರಿತಾ, ಸೋನಿಯಾಗೆ ಚಿನ್ನ
Team Udayavani, Jan 13, 2018, 11:54 AM IST
ರೋಹ್ಟ್ಕ್: ಅಂತಾರಾಷ್ಟ್ರೀಯ ಪದಕ ವಿಜೇತ ಬಾಕ್ಸರ್ಗಳಾದ ಎಲ್. ಸರಿತಾದೇವಿ, ಸೋನಿಯಾ ಲಾಥರ್, ಸರ್ಜುಬಾಲಾ ಅವರು ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಶುಕ್ರವಾರ ನಡೆದ 60 ಕೆ.ಜಿ. ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಸರಿತಾದೇವಿ, ಆರ್ಎಸ್ಪಿಬಿ ಪವಿತ್ರಾ ಅವರನ್ನು ಸೋಲಿಸಿ ಚಿನ್ನ ಗೆದ್ದರು. 57 ಕೆ.ಜಿ. ವಿಭಾಗದ ಫೈನಲ್ನಲ್ಲಿ ಸೋನಿಯಾ ಲಾಥರ್ 5-0 ಅಂತರದಿಂದ ವಿಶ್ವ ಯೂತ್ ಚಾಂಪಿಯನ್ ಶಶಿ ಚೋಪ್ರಾ ವಿರುದ್ಧ ಗೆಲುವು ಸಾಧಿಸಿದರು. 48 ಕೆ.ಜಿ. ವಿಭಾಗದ ಫೈನಲ್ನಲ್ಲಿ ವಿಶ್ವ ಚಾಂಪಿಯನ್ ಬೆಳ್ಳಿ ಪದಕ ವಿಜೇತೆ ಸರ್ಜುಬಾಲಾ 3-2ರಿಂದ ರಿತು ವಿರುದ್ಧ ಗೆಲುವು ಸಾಧಿಸಿದರು. ಉಳಿದಂತೆ 54 ಕೆ.ಜಿ. ವಿಭಾಗದಲ್ಲಿ ಮೀನಾ ಕುಮಾರಿ, 69 ಕೆ.ಜಿ. ವಿಭಾಗದಲ್ಲಿ ಪೂಜಾ, 75 ಕೆ.ಜಿ. ವಿಭಾಗದಲ್ಲಿ ಪೂಜಾ ರಾಣಿ, 82 ಕೆ.ಜಿ. ವಿಭಾಗದಲ್ಲಿ ಸೀಮಾ ಪೋನಿಯಾ ಚಿನ್ನದ ಪದಕದಿಂದ ಸಿಂಗಾರಗೊಂಡರು.