“ಎಟಿಪಿ ಪೈನಲ್ಸ್‌’ ಟೆನಿಸ್‌ ಫೆಡರರ್‌ಗೆ ಆಘಾತವಿಕ್ಕಿದ ನಿಶಿಕೊರಿ


Team Udayavani, Nov 13, 2018, 6:30 AM IST

kei-nishikori.jpg

ಲಂಡನ್‌: ವಿಶ್ವದ 9ನೇ ಶ್ರೇಯಾಂಕಿತ ಜಪಾನಿ ಟೆನಿಸಿಗ ಕೀ ನಿಶಿಕೊರಿ ಸ್ವಿಸ್‌ ತಾರೆ ರೋಜರ್‌ ಫೆಡ ರ ರ್‌ಗೆ ಅಘಾ ತ ವಿಕ್ಕಿ “ಎಟಿಪಿ ಫೈನಲ್ಸ್‌ ’ ಟೂರ್ನಿಯ ರೌಂಡ್‌ ರಾಬಿನ್‌ ಸುತ್ತಿನಲ್ಲಿ ಅಚ್ಚರಿಯ ಫ‌ಲಿತಾಂಶ ದಾಖಲಿಸಿದ್ದಾರೆ.

ರವಿವಾರ ರಾತ್ರಿ ನಡೆದ “ಲೇಟನ್‌ ಹೆವಿಟ್‌’ ಗುಂಪಿನ 2ನೇ ಪಂದ್ಯದಲ್ಲಿ  6 ಬಾರಿಯ ಎಟಿಪಿ ಫೈನಲ್ಸ್‌ ಚಾಂಪಿಯನ್‌ ಫೆಡ ರರ್‌ 6-7 (4-7), 3-6 ನೇರ ಸೆಟ್‌ಗಳಿಂದ ನಿಶಿಕೊರಿಗೆ ಶರಣಾದರು. ಈ ಸೋಲು ಫೆಡರರ್‌ ಅವರ ಸೆಮಿಫೈನಲ್‌ ದಾರಿಯನ್ನು ಕಠಿನಗೊಳಿಸಿದೆ.

ಶಾಂಘೈ ಹಾಗೂ ಪ್ಯಾರಿಸ್‌ ಓಪನ್‌ ಟೂರ್ನಿಗಳಲ್ಲಿ ನಿಶಿಕೊರಿಯನ್ನು ಸೋಲಿ ಸಿದ್ದ ಫೆಡರರ್‌, ಲಂಡನ್‌ ಕಾದಾಟದ ವೇಳೆ ನಿರಂತರ ತಪ್ಪು ಮಾಡ ತೊಡಗಿದರು. ಆರಂಭಿಕ ಸೆಟ್‌ನಲ್ಲಿ ಫೆಡರರ್‌ ಅವರ 20 ತಪ್ಪು ಹೊಡೆತಗಳ ಪ್ರಯೋಜನ ಪಡೆದ ನಿಶಿಕೊರಿ ಟೈ ಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿದರು. ಎರಡನೇ ಸೆಟ್‌ನಲ್ಲೂ  ಪಂದ್ಯದ ಮೇಲೆ ಹಿಡಿತ ಸಾಧಿಸಿದ ನಿಶಿಕೊರಿ, ಫೆಡರರ್‌ಗೆ ಹೆಚ್ಚಿನ ಅವಕಾಶ ನೀಡದೆ 6-3 ಅಂಕಗಳ ಅಂತರದಿಂದ ಜಯಿಸಿದರು.

ಮುಂದಿನ ಪಂದ್ಯದಲ್ಲಿ ಫೆಡರರ್‌ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು ಎದುರಿಸಲಿದ್ದಾರೆ. ಈ ಕೂಟದ ಸೆಮಿಫೈ ನಲ್‌ ಪ್ರವೇಶಿಸಿ ಬೇಕಾದರೆ ಥೀಮ್‌ ವಿರುದ್ಧದ ಪಂದ್ಯವನ್ನು ಫೆಡರರ್‌ ಜಯಿಸಬೇಕಾದುದು ಅನಿವಾರ್ಯ.

“ಕಳೆದ 2 ತಿಂಗಳಲ್ಲಿ 2 ಬಾರಿ ಫೆಡರರ್‌ ವಿರುದ್ಧ ಸೋತಿ ದ್ದೆ.ನನ್ನ ರೋಲ್‌ ಮಾಡೆಲ್‌ನೆದುರು ಆಡುವುದು ಅಷ್ಟು ಸುಲ ಭವಲ್ಲ.ಇದು ನನಗೆ ದೊಡ್ಡ ಸವಾಲಾಗಿತ್ತು. ಫೆಡರರ್‌ ಅವರನ್ನು ಸೋಲಿಸಿರುವುದು ಖುಷಿ ಕೊಟ್ಟಿದೆ’ ಎಂದು ನಿಶಿ ಕೊರಿ ಹೇಳಿದ್ದಾರೆ.

ಆ್ಯಂಡರ್ಸನ್‌ಗೆ ಜಯ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು 6-3, 7-6 (12/10) ಸೆಟ್‌ಗಳಿಂದ ಸೋಲಿಸಿದರು.ಚೊಚ್ಚಲ ಎಟಿಪಿ ಫೈನಲ್ಸ್‌ ಆಡುತ್ತಿರುವ ಆ್ಯಂಡರ್ಸನ್‌ ಮುಂದಿನ ಪಂದ್ಯದಲ್ಲಿ ನಿಶಿಕೊರಿ ಅವರನ್ನು ಎದುರಿಸಲಿದ್ದಾರೆ.

ಟಾಪ್ ನ್ಯೂಸ್

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.