ಭಾರತಕ್ಕೆ ವಾಪಸಾಗಲು ಸೂಚನೆ

ಕ್ರಿಕೆಟ್‌ ಮ್ಯಾನೇಜರ್‌ ದುರ್ವರ್ತನೆ

Team Udayavani, Aug 15, 2019, 5:52 AM IST

ಹೊಸದಿಲ್ಲಿ: ಕೆರಿಬಿಯನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ ಭಾರತ ಕ್ರಿಕೆಟ್‌ ತಂಡದ ಮ್ಯಾನೇಜರ್‌ (ಆಡಳಿತಾತ್ಮಕ ಪ್ರಬಂಧಕ) ಸುನೀಲ್‌ ಸುಬ್ರಹ್ಮಣ್ಯಂ ಅವರನ್ನು ಬಿಸಿಸಿಐ ಕೂಡಲೇ ವಾಪಸಾಗಲು ಸೂಚಿಸಿದೆ. ಕ್ರಿಕೆಟ್‌ ಅಧಿಕಾರಿಯೊಬ್ಬರನ್ನು ಹೀಗೆ ಅರ್ಧದಲ್ಲಿ ವಾಪಸು ಕರೆಸಿಕೊಳ್ಳುತ್ತಿರುವುದು ದೇಶದ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲು.

ನನಗೆ ಕಿರಿಕಿರಿ ಮಾಡಬೇಡಿ!
ಜಲ ಸಂರಕ್ಷಣೆಯ ಸಂದೇಶ ಸಾರುವ ವೀಡಿಯೊ ಶೂಟಿಂಗ್‌ಗಾಗಿ ಆಟಗಾರರನ್ನು ಒದಗಿಸಬೇಕೆಂಬ ವಿನಂತಿಯೊಂದಿಗೆ ರಾಯಭಾರ ಕಚೇರಿ ಅಧಿಕಾರಿಗಳು ಸುನೀಲ್‌ ಸುಬ್ರಹ್ಮಣ್ಯಂ ಅವರನ್ನು ಸಂಪರ್ಕಿಸಿದ್ದರು. ಗಯಾನದ ಭಾರತೀಯ ಹೈಕಮಿಶನ್‌ನ ಹಿರಿಯ ಅಧಿಕಾರಿಯೊ ಬ್ಬರು ಸಹಕಾರ ಕೋರಿದಾಗ, ಸಂದೇಶ ಗಳನ್ನು ಕಳುಹಿಸಿ ನನಗೆ ಕಿರಿಕಿರಿ ಮಾಡ ಬೇಡಿ ಎಂದು ಸುಬ್ರಹ್ಮಣ್ಯಂ ಒರಟಾಗಿ ಉತ್ತರಿಸಿದ್ದರು.
ಅಧಿಕಾರಿಗಳು ಸರಕಾರದ ನಿರ್ದೇಶನದ ಮೇರೆಗೆ ಜಲ ಸಂರಕ್ಷಣೆಯ ವೀಡಿಯೊ ರೆಕಾರ್ಡಿಂಗ್‌ ಮಾಡಲು ಬಯಸಿದ್ದರು. ಆದರೆ ಸುಬ್ರಹ್ಮಣ್ಯಂ ಅವರ ಫೋನ್‌ ಕರೆಗಳಿಗೂ ಉತ್ತರಿಸದೆ ಅವಮಾನಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.

ಸುಬ್ರಹ್ಮಣ್ಯಂ ಕ್ಷಮೆ
ತನ್ನಿಂದಾಗಿರುವ ಪ್ರಮಾದಕ್ಕೆ ಸುನೀಲ್‌ ಸುಬ್ರಹ್ಮಣ್ಯಂ ಕ್ಷಮೆ ಯಾಚಿಸಿದ್ದಾರೆ. “ಸರಿಯಾಗಿ ನಿದ್ದೆಯಿಲ್ಲದ ಕಾರಣ ಮಾನಸಿಕ ಒತ್ತಡದಲ್ಲಿ ನಾನು ಈ ರೀತಿ ವರ್ತಿಸಿರಬಹುದು. ಇದಕ್ಕಾಗಿ ಬೇಷರತ್‌ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ. ಆದರೆ ಪ್ರಕರಣ ಈಗಾಗಲೇ ಸರಕಾರದ ಉನ್ನತ ಹಂತಕ್ಕೆ ತಲುಪಿದ್ದು, ನಾವೇನೂ ಮಾಡುವಂತಿಲ್ಲ ಎಂದು ಬಿಸಿಸಿಐ ಕೈಕೊಡವಿಕೊಂಡಿದೆ.

ಹುದ್ದೆಗೆ ಸಂಚಕಾರ
ಈ ವಿದ್ಯಮಾನದ ಹೊರತಾಗಿಯೂ ಭಾರತ ತಂಡ ವೀಡಿಯೊ ಶೂಟಿಂಗ್‌ನಲ್ಲಿ ಭಾಗವಹಿಸಿದೆ. ಇದನ್ನು ಸುಬ್ರಹ್ಮಣ್ಯಂ ವೀಕ್ಷಿಸುವ ಅಗತ್ಯವಿದ್ದು, ಇದಾದ ಕೂಡಲೇ ವಾಪಸಾಗಲು ಅವರಿಗೆ ಬಿಸಿಸಿಐ ಸೂಚಿಸಿದೆ. ಈ ಘಟನೆಯಿಂದಾಗಿ ಸುಬ್ರಹ್ಮಣ್ಯಂ ತನ್ನ ಹುದ್ದೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ