ಸುಕೇಶ್‌ ಮಿಂಚು; ಬೆಂಗಾಲ್‌ ವಿಜಯ

Team Udayavani, Oct 10, 2019, 5:55 AM IST

ಗ್ರೇಟರ್‌ ನೋಯ್ಡಾ (ಯುಪಿ): ಕನ್ನಡಿಗ ರೈಡರ್‌ ಸುಕೇಶ್‌ ಹೆಗ್ಡೆ (6 ಅಂಕ) ಅವರ ಪ್ರಚಂಡ ದಾಳಿಯಿಂದಾಗಿ ಪ್ರೊ ಕಬಡ್ಡಿ ಗ್ರೇಟರ್‌ ನೋಯ್ಡಾ ಚರಣದ ಬುಧವಾರದ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ 33-29 ಅಂಕಗಳ ಅಂತರದಿಂದ ತಮಿಳ್‌ ತಲೈವಾಸ್‌ ತಂಡವನ್ನು ಸೋಲಿಸಿತು.

ಇದರೊಂದಿಗೆ ಕೂಟದಲ್ಲಿ ಬೆಂಗಾಲ್‌ ಹುಲಿಗಳ ಅಬ್ಬರ ಜೋರಾಗಿದ್ದು, ಸದ್ಯ ಅಗ್ರಸ್ಥಾನಕ್ಕೆ ಏರಿದೆ (83). ದಬಾಂಗ್‌ ಡೆಲ್ಲಿ ಎರಡಕ್ಕೆ ಇಳಿಯಿತು (82).
ಅತ್ಯಂತ ರೋಚಕವಾಗಿ ಸಾಗಿದ ದಿನದ ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌  41-36 ಅಂತರಿಂದ ಯುಪಿ ಯೋಧಾವನ್ನು ಮಣಿಸಿ ಕೂಟ ಮುಗಿಸಿತು.

ಬೆಂಗಾಲ್‌ ಹುಲಿಗಳ ಗರ್ಜನೆ
ಈಗಾಗಲೇ ಪ್ಲೇ ಆಫ್ ಹಂತಕ್ಕೇರಿರುವ ಬೆಂಗಾಲ್‌ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿತು. ಸುಕೇಶ್‌ ಹೆಗ್ಡೆ ರೈಡಿಂಗ್‌ನಿಂದ ಮಿಂಚಿದರೆ, ಮೊಹಮ್ಮದ್‌ ನಬಿಭಕ್‌Ò
(7 ಅಂಕ) ಆಲ್‌ರೌಂಡರ್‌ ಪ್ರದರ್ಶನ ನೀಡಿ ಗಮನ ಸೆಳೆದರು. ಉಳಿದಂತೆ ರಿಂಕು ನರ್ವಲ್‌ (5 ಟ್ಯಾಕಲ್‌ ಅಂಕ), ಸೌರಭ್‌ ಪಾಟೀಲ್‌ (4 ರೈಡಿಂಗ್‌ ಅಂಕ) ತಂಡದ ಜಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಮೊನಚಿಲ್ಲದ ತಲೈವಾಸ್‌
ತಾರಾ ಆಟಗಾರ ರಾಹುಲ್‌ ಚೌಧರಿ ಈ ಪಂದ್ಯದಲ್ಲೂ ಕಳಪೆ ನಿರ್ವಹಣೆ ನೀಡಿದ್ದು ತಮಿಳ್‌ ತಲೈವಾಸ್‌ಗೆ ಹಿನ್ನಡೆಯಾಗಿ ಪರಿಣಮಿಸಿತು. ಅವರು ಕೇವಲ 7 ರೈಡಿಂಗ್‌ ಅಂಕಗಳಿಸಲಷ್ಟೇ ಶಕ್ತರಾದರು. ಸಾಗರ್‌ (5 ಟ್ಯಾಕಲ್‌ ಅಂಕ), ವಿ. ಅಜಿತ್‌ ಕುಮಾರ್‌ (4 ರೈಡಿಂಗ್‌ ಅಂಕ) ಗಮನ ಸೆಳೆದರಾದರೂ ಅವರಿಂದಲೂ ಪರಿಪೂರ್ಣ ಆಟ ಹೊರಹೊಮ್ಮಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ