ಪ್ರೊ ಕಬಡ್ಡಿ ಹರಾಜು : ಸಿದ್ಧಾರ್ಥ್ ದೇಸಾಯಿಗೆ 1.45 ಕೋಟಿ ರೂ.
ಕಬಡ್ಡಿ ಇತಿಹಾಸದ 2ನೇ ಗರಿಷ್ಠ ಮೊತ್ತಕ್ಕೆ ಟೈಟಾನ್ಸ್ ಪಾಲು
Team Udayavani, Apr 9, 2019, 6:30 AM IST
ಮುಂಬಯಿ: ಏಳನೇ ಆವೃತ್ತಿ ಪ್ರೊ ಕಬಡ್ಡಿ ಹರಾಜಿನಲ್ಲಿ ಸಿದ್ಧಾರ್ಥ್ ದೇಸಾಯಿ 1.45 ಕೋಟಿ ರೂ. ದಾಖಲೆಯ ಮೊತ್ತಕ್ಕೆ ತೆಲುಗು ಟೈಟಾನ್ಸ್ ತಂಡಕ್ಕೆ ಮಾರಾಟಗೊಂಡಿದ್ದಾರೆ.
ಇದು ಪ್ರೊ ಕಬಡ್ಡಿಯ ಇತಿಹಾಸದ ಎರಡನೇ ಗರಿಷ್ಠ ಮೊತ್ತ. 6ನೇ ಆವೃತ್ತಿಯ ಲೀಗ್ನಲ್ಲಿ ಮೋನು ಗೋಯತ್ ಹರ್ಯಾಣ ಸ್ಟೀಲರ್ ತಂಡಕ್ಕೆ 1.51 ಕೋಟಿ ರೂ.ಗೆ ಮಾರಾಟಗೊಂಡಿದ್ದರು. ಇದು ಪ್ರೊ ಕಬಡ್ಡಿಯ ಇತಿಹಾಸದಲ್ಲಿ ಪಡೆದಿದ್ದ ಗರಿಷ್ಠ ಮೊತ್ತವಾಗಿತ್ತು.
ಸಾಂಗ್ಲಿ ವೀರ ಕೋಟ್ಯಧಿಪತಿ
ಸಿದ್ಧಾರ್ಥ್ ದೇಸಾಯಿ ಮೂಲತಃ ಮಹಾರಾಷ್ಟ್ರದ ಸಾಂಗ್ಲಿಯವರು. 6ನೇ ಆವೃತ್ತಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಹೀಗಾಗಿ ಈ ಸಲ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಆದರೆ ಕಳೆದ ಆವೃತ್ತಿಯಲ್ಲಿ ಮೋನು ಗೋಯತ್ ಪಡೆದ ಮೊತ್ತಕ್ಕೆ ಕೇವಲ 6 ಲಕ್ಷ ಕಡಿಮೆ ಆಗಿದ್ದರಿಂದ ಹೊಸ ಇತಿಹಾಸ ನಿರ್ಮಿಸುವ ಅವಕಾಶದಿಂದ ದೇಸಾಯಿ ವಂಚಿತರಾದರು. ಆದರೆ ಮೋನು ಗೋಯತ್ ಈ ಬಾರಿ 93 ಲಕ್ಷ ರೂ.ಗೆ ಯುಪಿ ಯೋಧಾ ತಂಡಕ್ಕೆ ಮಾರಾಟವಾಗಿದ್ದಾರೆ.
ನಿತಿನ್ಗೆ 1.20 ಕೋಟಿ ರೂ.
ಕಳೆದ ಬಾರಿ ಪುನೇರಿ ಪಲ್ಟಾನ್ ಪರ ಆಡಿದ್ದ ನಿತಿನ್ ತೋಮರ್ ಅವರನ್ನು ಅದೇ ತಂಡದ ಫ್ರಾಂಚೈಸಿ 1.20 ಕೋಟಿ ರೂ. ನೀಡಿ ತಮ್ಮಲ್ಲೇ ಉಳಿಸಿಕೊಂಡಿದೆ. ರಾಹುಲ್ ಚೌಧರಿ ಅವರನ್ನು ತಮಿಳ್ ತಲೈವಾಸ್ 94 ಲಕ್ಷ ರೂ.ಗೆ ಖರೀದಿಸಿದೆ.
ಆಲ್ರೌಂಡರ್ ಸಂದೀಪ್ ನರ್ವಲ್ ಅವರನ್ನು ಯು ಮುಂಬಾ ತಂಡ 89 ಲಕ್ಷ ರೂ.ಗೆ ಖರೀದಿಸಿದೆ. ಮಂಗಳವಾರ ಕೂಡ ಹರಾಜು ನಡೆಯಲಿದೆ. ಹರಾಜಿನಲ್ಲಿ ಒಟ್ಟು 388 ಭಾರತೀಯರು ಹಾಗೂ 53 ವಿದೇಶಿ ಆಟಗಾರರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ