Udayavni Special

ಐಪಿಎಲ್‌ ಆರಂಭದಿಂದಲೂ ಹಲವು ವಿಘ್ನ: ಸವಾಲು ಎದುರಿಸಿ ಸಾಮ್ರಾಟ ಪಟ್ಟ


Team Udayavani, Apr 3, 2020, 5:34 PM IST

ಐಪಿಎಲ್‌ ಆರಂಭದಿಂದಲೂ ಹಲವು ವಿಘ್ನ: ಸವಾಲು ಎದುರಿಸಿ ಸಾಮ್ರಾಟ ಪಟ್ಟ

ಐಪಿಎಲ್‌ ಆರಂಭವಾದಾಗಿನಿಂದ ಒಂದಲ್ಲ ಒಂದು ಸಮಸ್ಯೆಗಳು ಅದರ ಬೆನ್ನತ್ತಿ ಬಂದಿವೆ. ಒಂದು ರೀತಿಯಲ್ಲಿ ಅದರ ಆರಂಭವೇ ಸವಾಲಿನ ನಡುವೆ ಆಗಿದ್ದು. ಬಿಸಿಸಿಐಗೆ ಸೆಡ್ಡು ಹೊಡೆದು ಐಸಿಎಲ್‌ ಆರಂಭವಾದಾಗ, ಅದನ್ನು ನಿಯಂತ್ರಿಸಲು ಐಪಿಎಲ್‌ ಆರಂಭಿಸುವ ತೀರ್ಮಾನವನ್ನು ಅಂದಿನ ಬಿಸಿಸಿಐ ಉಪಾಧ್ಯಕ್ಷ ಲಲಿತ್‌ ಮೋದಿ ಮಾಡಿದರು. ಮುಂದೆ ಜಾಗತಿಕ ಲೀಗ್‌ ಕ್ರೀಡೆಗಳ ಪೈಕಿ ಈ ಕೂಟಕ್ಕೆ ಮಹತ್ವದ ಸ್ಥಾನ ಸಿಕ್ಕಿತು. ಹಾಗಂತ ಸವಾಲುಗಳು ಕಡಿಮೆಯಾಗಲಿಲ್ಲ. ಈ ಬಾರಿಯೂ ಕೂಟ ನಡೆಯುತ್ತದೋ, ಇಲ್ಲವೋ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ ಹಿಂದೆ ಎದುರಿಸಿದ ಸವಾಲುಗಳ ಚಿತ್ರಣ ಇಲ್ಲಿದೆ

2009ರ 2ನೇ ಕೂಟವೇ ದ. ಆಫ್ರಿಕಾಗೆ ಸ್ಥಳಾಂತರ!

ಮೊದಲ ಐಪಿಎಲ್‌ ನಡೆದಿದ್ದು 2008ರಲ್ಲಿ. ಅದು ಭಾರೀ ಅಬ್ಬರ ಹುಟ್ಟು ಹಾಕಿತ್ತು. ವಿಚಿತ್ರವೆಂದರೆ 2009ರಲ್ಲಿ ನಡೆದ ಕೇವಲ ಎರಡನೇ ಕೂಟವನ್ನೇ ಭಾರತದಿಂದ ಹೊರಗೆ ನಡೆಸಬೇಕಾದ ಅನಿವಾರ್ಯತೆಗೆ ಬಿಸಿಸಿಐ ಸಿಲುಕಿತು. ಆ ವರ್ಷ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದರಿಂದ ಐಪಿಎಲ್‌ ಅನ್ನು, ದ. ಆಫ್ರಿಕಾದಲ್ಲಿ ನಡೆಸಲು ದಿಢೀರ್‌ ತೀರ್ಮಾನಿಸಿ ಸ್ಥಳಾಂತರಿಸಲಾಯಿತು. ಅದರ ನಂತರ ಶುರುವಾಗಿದ್ದು ವಿವಾದ. ಈ ರೀತಿಯ ಸ್ಥಳಾಂತರದ ವೇಳೆ ವಿದೇಶಿ ವಿನಿಮಯದ ನಿಯಮಗಳನ್ನು ಸರಿಯಾಗಿ ಪಾಲಿಸಲಿಲ್ಲ ಎಂದು ಐಪಿಎಲ್‌ ಮುಖ್ಯಸ್ಥರಾಗಿದ್ದ ಲಲಿತ್‌ ಮೋದಿ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಅವರನ್ನು ಮುಂದೆ ಬಿಸಿಸಿಐ ನಿಷೇಧಿಸಿತು. ಇದೇ ಪ್ರಕರಣದಲ್ಲಿ ಕೆಕೆಆರ್‌ ಮುಖ್ಯಸ್ಥ ಶಾರುಖ್‌ ಖಾನ್‌, ಪಂಜಾಬ್‌ ಕಿಂಗ್ಸ್‌ ಮಾಲಕಿ ಪ್ರೀತಿ ಜಿಂಟಾ ಕೂಡ ಹಲವು ಕಾನೂನು ಸಮರ ನಡೆಸಬೇಕಾಯಿತು.

ಶ್ರೀನಿವಾಸನ್‌, ಅನುರಾಗ್‌ ಠಾಕೂರ್‌ ಪದಚ್ಯುತಿ
ತಾವೇ ಮಾಲಿಕರಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ ನಲ್ಲಿರುವುದರಿಂದ, ಶ್ರೀನಿವಾಸನ್‌ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯುವ ಅಧಿಕಾರ ಕಳೆದುಕೊಂಡರು. ಸರ್ವೋಚ್ಚ ನ್ಯಾಯಪೀಠ ಅವರನ್ನು 2014ರಲ್ಲಿ ಪದಚ್ಯುತ ಮಾಡಿತು. ಬಿಸಿಸಿಐನಲ್ಲಿ ಮಾಡಲು ಹೇಳಿದ್ದ ಸಮಗ್ರ ಆಡಳಿತಾತ್ಮಕ ಸುಧಾರಣೆಗೆ ಸಹಕಾರ ಮಾಡಲಿಲ್ಲವೆಂಬ ಕಾರಣಕ್ಕೆ, ಮುಂದೆ ಅಧ್ಯಕ್ಷರಾದ ಅನುರಾಗ್‌ ಠಾಕೂರ್‌ ಅವರನ್ನೂ 2017 ಸರ್ವೋಚ್ಚ ನ್ಯಾಯಾಲಯ ಪದಚ್ಯುತಗೊಳಿಸಿತು. ಅದಾದ ಮೇಲೆ ಶೇ.70ರಷ್ಟು ಬಿಸಿಸಿಐ ಸಂವಿಧಾನವನ್ನೇ ಬದಲಿಸಲಾಯಿತು.

2012ರಲ್ಲಿ ಪಾಮರ್‌ ಬಾಕ್‌  ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಪಂಜಾಬ್‌ ಕಿಂಗ್ಸ್‌ ಮಾಲಿಕ ನೆಸ್‌ ವಾಡಿಯ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಹಿಂದೊಮ್ಮೆ ಸಹ ಮಾಲಕಿ ಪ್ರೀತಿ ಜಿಂಟಾ ಆರೋಪಿಸಿದ್ದರು. ಅದಕ್ಕಿಂತ ದೊಡ್ಡ ಪ್ರಕರಣ ನಡೆದಿದ್ದು 2012ರಲ್ಲಿ. ಆಸ್ಟ್ರೇಲಿಯದ ಎಡಗೈ ಬ್ಯಾಟ್ಸ್‌ಮನ್‌ ಲೂಕ್‌ ಪಾಮರ್‌ಬಾಕ್‌ ಆಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರಾಗಿದ್ದರು. ಅವರು ಜೊಹಲ್‌ ಹಮೀದ್‌ ಎಂಬ ಅಮೆರಿಕ ವ್ಯಕ್ತಿಗೆ ಲೈಂಗಿಕ ಕಿರುಕುಳ ನೀಡಿದ್ದು ದೊಡ್ಡ ಸುದ್ದಿಯಾಗಿ, ನ್ಯಾಯಾಲಯದ ಮೆಟ್ಟಿಲೇರಿತ್ತು. ಲೂಕ್‌ ಬಂಧನದ ಭೀತಿ ಎದುರಿಸಿದ್ದರು. ಅಷ್ಟರಲ್ಲಿ ಪ್ರಕರಣ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಿ ಲೂಕ್‌ ಸುರಕ್ಷಿತವಾಗಿ ಆಸ್ಟ್ರೇಲಿಯಕ್ಕೆ ಮರಳಿದರು. ಮುಂದೆ ಲೂಕ್‌ ಕ್ರಿಕೆಟ್‌ನಿಂದಲೇ ನಿವೃತ್ತರಾದರು.

2013ರಲ್ಲಿ ಸ್ಪಾಟ್‌ ಫಿಕ್ಸಿಂಗ್‌ನ ಮಹಾಸ್ಫೋಟ
ಈ ಪ್ರಕರಣವಂತೂ ಐಪಿಎಲ್‌ ಇತಿಹಾಸದಲ್ಲಿ ಎಂದೂ ಮರೆಯಲು ಸಾಧ್ಯವೇ ಇಲ್ಲ. ರಾಜಸ್ಥಾನ್‌ ರಾಯಲ್ಸ್‌ ತಂಡದ ಆಟಗಾರರಾಗಿದ್ದ ಎಸ್‌.ಶ್ರೀಶಾಂತ್‌, ಅಂಕಿತ್‌ ಚವಾಣ್‌, ಅಜಿತ್‌ ಚಂಡೀಲರನ್ನು, ರಾತ್ರೋರಾತ್ರಿ ಮುಂಬೈ ಪೊಲೀಸರು ಸ್ಪಾಟ್‌ ಫಿಕ್ಸಿಂಗ್‌ ಆರೋಪದಲ್ಲಿ ಬಂಧಿಸಿದರು. ಮುಂದೆ ಮೂವರೂ ಆಜೀವ ನಿಷೇಧಕ್ಕೊಳಗಾದರು. ಶ್ರೀಶಾಂತ್‌ ನ್ಯಾಯಾಲಯ ಹೋರಾಟದ ನಂತರ ನಿಷೇಧದಿಂದ ಹೊರಬಂದಿದ್ದಾರೆ. ಅದಕ್ಕೂ ಮುನ್ನವೇ ದೆಹಲಿ ಸ್ಥಳೀಯ ನ್ಯಾಯಾಲಯ ಆರೋಪಿಗಳಾಗಿದ್ದ ಎಲ್ಲರನ್ನೂ ಸಾಕ್ಷಾಧಾರದ ಕೊರತೆಯಿಂದ ಖುಲಾಸೆ ಮಾಡಿತು. ಈ ಘಟನೆ ಹಲವು ರೂಪದಲ್ಲಿ, ಹಲವು ವರ್ಷಗಳ ಕಾಲ ಬಿಸಿಸಿಐಯನ್ನು ಕಾಡಿತು.

ಚೆನ್ನೈ ಕಿಂಗ್ಸ್‌, ರಾಜಸ್ಥಾನ್‌ಗೆ 2 ವರ್ಷ ನಿಷೇಧ
2013ರ ಫಿಕ್ಸಿಂಗ್‌ ಪ್ರಕರಣದಿಂದಾದ ಮತ್ತೂಂದು ದೊಡ್ಡ ಬೆಳವಣಿಗೆಯೆಂದರೆ, ಐಪಿಎಲ್‌ನ ಎರಡು ಪ್ರಸಿದ್ಧ ತಂಡಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳನ್ನು ಎರಡು ವರ್ಷಗಳ ಕಾಲ ನಿಷೇಧಿಸಿದ್ದು. ಚೆನ್ನೈನ ಆಡಳಿತ ಮಾಲಿಕ ಮೈಯಪ್ಪನ್‌, ರಾಜಸ್ಥಾನ್‌ ಸಹ ಮಾಲಿಕ ರಾಜ್‌ ಕುಂದ್ರಾ ಬೆಟ್ಟಿಂಗ್‌ ಮಾಡಿದ ಪರಿಣಾಮ, ಈ ತಂಡಗಳು ನಿಷೇಧ ಅನುಭವಿಸುವಂತಾಯಿತು. ಅವು 2016, 2017ರ ಕೂಟದಿಂದ ಹೊರಬಿದ್ದವು.

ಮೈಯಪ್ಪನ್‌, ರಾಜ್‌ಕುಂದ್ರಾಗೆ ನಿಷೇಧ
ಐಪಿಎಲ್‌ನಲ್ಲಿ ತಂಡದ ಮಾಲಿಕರಾಗಿದ್ದವರು ಯಾವ ಕಾರಣಕ್ಕೂ ತಪ್ಪು ಮಾಡುವಂತಿಲ್ಲ. ಚೆನ್ನೈ ತಂಡದ ಆಡಳಿತ ಮುಖ್ಯಸ್ಥರಾಗಿದ್ದ ಶ್ರೀನಿವಾಸನ್‌ ಅಳಿಯ ಗುರುನಾಥ್‌ ಮೈಯಪ್ಪನ್‌, ರಾಜಸ್ಥಾನ್‌ ರಾಯಲ್ಸ್‌ ತಂಡದ ಅಂದಿನ ಮುಖ್ಯಸ್ಥರಾಗಿದ್ದ ರಾಜ್‌ ಕುಂದ್ರಾ, 2013ರ ಪ್ರಕರಣದ ತನಿಖೆ ವೇಳೆ ಬೆಟ್ಟಿಂಗ್‌ ನಡೆಸಿದ್ದು ಸಾಬೀತಾಯಿತು. ಇದರಿಂದ ಈ ಇಬ್ಬರನ್ನೂ ಕ್ರಿಕೆಟ್‌ ಸಂಬಂಧಿ ಚಟುವಟಿಕೆಗಳಿಂದ ಸರ್ವೋಚ್ಚ ನ್ಯಾಯಪೀಠ ಆಜೀವ ನಿಷೇಧಿಸಿತು.

2014ರಲ್ಲೂ ಅರ್ಧ ಕೂಟ ಯುಎಇನಲ್ಲಿ
2009ರಲ್ಲಿ ಲೋಕಸಭಾ ಚುನಾವಣೆ ಕಾರಣಕ್ಕೆ ಪೂರ್ಣ ಕೂಟ ದ.ಆಫ್ರಿಕಾದಲ್ಲಿ ನಡೆದಿತ್ತು. 2014ರಲ್ಲೂ ಲೋಕಸಭಾ ಚುನಾವಣೆ ಯಿದ್ದಿದ್ದರಿಂದ ಅರ್ಧದಷ್ಟು ಕೂಟ ಯುಎಇನಲ್ಲಿ ನಡೆಯಿತು. ಅನಂತರ ಭಾರತಕ್ಕೆ ಮರಳಿತು. ಸಾರ್ವತ್ರಿಕ ಚುನಾವಣೆ ಕಾರಣಕ್ಕೆ, ಕೂಟವನ್ನೇ ಹೊರ ದೇಶದಲ್ಲಿ ನಡೆಸಬೇಕಾದ 2ನೇ ಉದಾಹರಣೆಯಿದು.

2016ರ ಕೂಟಕ್ಕೆ ಬರದ ಛಾಯೆ
2016ರ ಐಪಿಎಲ್‌ಗೆ ಅತಿ ಹೆಚ್ಚು ಕಾಡಿದ್ದು ನೀರಿನ ಬರ. ಕಳೆದ 100 ವರ್ಷದಲ್ಲೇ ಮಹಾರಾಷ್ಟ್ರದಲ್ಲಿ ಕಂಡು ಕೇಳರಿಯದ ಬರವಿದೆ. ಆದ್ದರಿಂದ ಈ ಬಾರಿ ಮಹಾರಾಷ್ಟ್ರದಲ್ಲಿ ಐಪಿಎಲ್‌ ಪಂದ್ಯ ನಡೆಸಬಾರದೆಂದು ಲೋಕಸತ್ತಾ ಎಂಬ ಎನ್‌ಜಿಒ ಅರ್ಜಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿ ಮಹಾರಾಷ್ಟ್ರ ಉಚ್ಚ ನ್ಯಾಯಾಲಯ ತೀರ್ಪು ನೀಡಿತು. ಪರಿಣಾಮ ಮಹಾರಾಷ್ಟ್ರದಲ್ಲಿ ಮುಂಬೈ, ಪುಣೆ, ನಾಗ್ಪುರದಲ್ಲಿ ನಡೆಸಬೇಕಾಗಿದ್ದ ಒಟ್ಟು 20 ಪಂದ್ಯಗಳ ಪೈಕಿ 12 ರದ್ದಾಯಿತು. ನಡೆದಿದ್ದು ಕೇವಲ 8 ಪಂದ್ಯ. ಉಳಿದ ಪಂದ್ಯಗಳು ನೀರಿನ ಸಮಸ್ಯೆಯಿಲ್ಲದ ಬೇರೆ ಬೇರೆ ರಾಜ್ಯಕ್ಕೆ ವರ್ಗಾವಣೆಗೊಂಡವು. ಮಹಾರಾಷ್ಟ್ರ ಮಾದರಿಯಲ್ಲೇ ಅದೇ ವರ್ಷ ದೇಶದ ಉಳಿದ ಕಡೆ ಅರ್ಜಿ ಸಲ್ಲಿಕೆಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೈ ಮುಗಿತೀವಿ ನಮ್ಮನ್ನು ಊರಿಗೆ ಕರಕೊಂಡು ಹೋಗಿ!

ಕೈ ಮುಗಿತೀವಿ ನಮ್ಮನ್ನು ಊರಿಗೆ ಕರಕೊಂಡು ಹೋಗಿ!

ಪ್ರವಾಸೋದ್ಯಮದಲ್ಲಿ ಪ್ರಚಾರದಲ್ಲಿದೆ ಬಗೆ ಬಗೆಯ ಟ್ರೆಂಡ್ ; ಇಲ್ಲಿದೆ ಅವುಗಳ ಪರಿಚಯ

ಪ್ರವಾಸೋದ್ಯಮದಲ್ಲಿ ಪ್ರಚಾರದಲ್ಲಿದೆ ಬಗೆ ಬಗೆಯ ಟ್ರೆಂಡ್ ; ಇಲ್ಲಿದೆ ಅವುಗಳ ಪರಿಚಯ

ಕನ್ನಡ ನಿರ್ಲಕ್ಷ್ಯ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸುರೇಶ್ ಕುಮಾರ್

ಕನ್ನಡ ನಿರ್ಲಕ್ಷ್ಯ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸುರೇಶ್ ಕುಮಾರ್

ನಾಗರಹೊಳೆ: ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಹುಲಿ!

ನಾಗರಹೊಳೆ: ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಹುಲಿ!

Web-tdy-1

ಸೈಕಲ್ ಮೆಕ್ಯಾನಿಕ್ ಸಮಾಜ ಸೇವೆ ಮಾಡಿ ಪದ್ಮ ಶ್ರೀ ಗೌರವ ಪಡೆದದ್ದು ಹೇಗೆ ಗೊತ್ತಾ ?

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3ನೇ ಬಲಿ

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3ನೇ ಬಲಿ ; ಶತಕ ಬಾರಿದ ಸೋಂಕಿತರ ಸಂಖ್ಯೆ

ಗುಡ್ಡಮ್ಮಾಡಿ : ಬಾವಿಗೆ ಬಿದ್ದು ವ್ಯಕ್ತಿ ಸಾವು ; ಸಹೋದರ ಪಾರು

ಗುಡ್ಡಮ್ಮಾಡಿ : ಬಾವಿಗೆ ಬಿದ್ದು ವ್ಯಕ್ತಿ ಸಾವು, ಸಹೋದರ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ-ಆಸ್ಟ್ರೇಲಿಯ ಕ್ರಿಕೆಟ್‌ ಸರಣಿ ವೇಳಾಪಟ್ಟಿ ಅಂತಿಮ

ಭಾರತ-ಆಸ್ಟ್ರೇಲಿಯ ಕ್ರಿಕೆಟ್‌ ಸರಣಿ ವೇಳಾಪಟ್ಟಿ ಅಂತಿಮ

ರಣಜಿ ಮಾದರಿಯಲ್ಲಿ ಬದಲಾವಣೆ ಇಲ್ಲ

ರಣಜಿ ಮಾದರಿಯಲ್ಲಿ ಬದಲಾವಣೆ ಇಲ್ಲ

‘ಜೈವಿಕ ಸುರಕ್ಷಾ ಕ್ರಿಕೆಟ್‌’ ಅವಾಸ್ತವಿಕ: ರಾಹುಲ್‌ ದ್ರಾವಿಡ್‌

‘ಜೈವಿಕ ಸುರಕ್ಷಾ ಕ್ರಿಕೆಟ್‌’ ಅವಾಸ್ತವಿಕ: ರಾಹುಲ್‌ ದ್ರಾವಿಡ್‌

ಐಪಿಎಲ್ ಪ್ರದರ್ಶನದ ಮೂಲಕ ಮತ್ತೆ ಟೀಂ ಇಂಡಿಯಾ ಎಂಟ್ರಿ ನೀಡುವೆ

ಐಪಿಎಲ್ ಪ್ರದರ್ಶನದ ಮೂಲಕ ಮತ್ತೆ ಟೀಂ ಇಂಡಿಯಾ ಎಂಟ್ರಿ ನೀಡುವೆ

ಭಾರತೀಯ ವೇಗಿಗಳು ಇಷ್ಟು ನಿಖರವಾಗಿ ಯಾರ್ಕರ್ ಎಂದೂ ಹಾಕುತ್ತಿರಲಿಲ್ಲ: ಕರ್ಸನ್ ಘಾರ್ವಿ

ಭಾರತೀಯ ವೇಗಿಗಳು ಇಷ್ಟು ನಿಖರವಾಗಿ ಯಾರ್ಕರ್ ಎಂದೂ ಹಾಕುತ್ತಿರಲಿಲ್ಲ: ಕರ್ಸನ್ ಘಾರ್ವಿ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

new stori

ಲಾಕ್‌ಡೌನ್‌ ಟೈಮಲ್ಲಿ ಅಜೇಯ್‌ರಾವ್‌ ಮಾಡಿದ್ದೇನು ಗೊತ್ತಾ?

mueder rachiya

ಲಿಲ್ಲಿ ಆಗ್ತಾರಂತೆ ರಚಿತಾ

varma trailer

ಭಯ ಹುಟ್ಟಿಸುತ್ತಲೇ ಬಂದ ಕೋವಿಡ್‌ 19‌ ಟ್ರೇಲರ್‌!

wild-kar-holl

ವೈಲ್ಡ್‌ ಕರ್ನಾಟಕದಲ್ಲಿ ಚಿತ್ರ ನಟರು

suna-swabhimana

ಸುಮಲತಾ ಸ್ವಾಭಿಮಾನದ ಗೆಲುವಿಗೆ ವರ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.