ಜಕಾರ್ತಾ ಇಂಡೋನೇಷ್ಯಾ ಓಪನ್; ಫೈನಲ್ ಪ್ರವೇಶಿಸಿದ ಪಿವಿ ಸಿಂಧು!

Team Udayavani, Jul 20, 2019, 6:10 PM IST

ಜಕಾರ್ತ: ಚೀನಾದ ಚೆನ್ ಯೂ ಫೆಯಿ ಸವಾಲನ್ನು ಸುಲಭವಾಗಿ ಮೆಟ್ಟಿ ನಿಂತ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಇಂಡೋನೇಷ್ಯಾ ಓಪನ್ ಪಂದ್ಯಾವಳಿಯ ಫೈನಲ್ ಗೆ ಶನಿವಾರ ಲಗ್ಗೆ ಇಟ್ಟಿದ್ದಾರೆ.

ಸಿಂಧು ತನ್ನ ಎದುರಾಳಿ ಚೆನ್ ಯೂ ವಿರುದ್ಧ 21-19, 21-10 ಅಂಕಗಳ ಗೆಲುವಿನೊಂದಿಗೆ ಅಂತಿಮ ಹಣಾಹಣಿಗೆ ಪ್ರವೇಶ ಪಡೆದಿದ್ದಾರೆ.

ಇದಕ್ಕೂ ಮುನ್ನ ಜಪಾನಿನ ನೊಜೊಮಿ ಒಕುಹಾರ ಸವಾಲನ್ನು ಸುಲಭದಲ್ಲಿ ಮೆಟ್ಟಿನಿಂತ ಸಿಂಧು ಇಂಡೋನೇಷ್ಯಾ ಓಪನ್ ಪಂದ್ಯಾವಳಿಯ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು.

ಶುಕ್ರವಾರದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸಿಂಧು ಅವರು ಒಕುಹಾರ ವಿರುದ್ಧ 21-14, 21-7 ಅಂಕಗಳ ಅಂತರದಲ್ಲಿ ಜಯ ಸಾಧಿಸಿದ್ದರು.  ಭಾನುವಾರ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಪಿವಿ ಸಿಂಧು ಜಪಾನ್ ನ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಅಕಾನೆ ಯಾಮಾಗುಚಿ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ