ವಿಶ್ವ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್ಗೆ ಸಿಂಧು
Team Udayavani, Dec 17, 2021, 6:23 AM IST
ವೆಲ್ವಾ (ಸ್ಪೇನ್): ಥಾಯ್ಲೆಂಡ್ನ ಪಾರ್ನ್ಪಾವೀ ಚೊಚುವಾಂಗ್ ಅವರನ್ನು ಪರಾಭವಗೊಳಿಸಿದ ಪಿ.ವಿ.ಸಿಂಧು ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಗುರುವಾರ ನಡೆದ 48 ನಿಮಿಷಗಳ ಪ್ರೀಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ವಿಶ್ವದ 7ನೇ ಶ್ರೇಯಾಂಕಿತೆ ಪಿ.ವಿ.ಸಿಂಧು 21-14, 21-18 ನೇರ ಗೇಮ್ಗಳಿಂದ ಥಾಯ್ ಆಟಗಾರ್ತಿಯನ್ನು ಮಣಿಸಿದರು. ಚೊಚುವಾಂಗ್ ಎದುರಿನ ಗೆಲುವಿನ ಅಂತರವನ್ನು 5-3ಕ್ಕೆ ವಿಸ್ತರಿಸಿದರು. ಇದಕ್ಕೂ ಹಿಂದಿನ ಈ ವರ್ಷದ 2 ಮುಖಾಮುಖೀಗಳಲ್ಲಿ ಸಿಂಧು ಈಕೆಯೆದುರು ಪರಾಭವಗೊಂಡಿದ್ದರು.
ಸಿಂಧು ಅವರಿನ್ನು ವಿಶ್ವದ ನಂ.1 ಆಟಗಾರ್ತಿ, ಚೀನಾ ತೈಪೆಯ ತೈ ಜು ಯಿಂಗ್ ಅವರನ್ನು ಎದುರಿಸಲಿದ್ದಾರೆ. ಅವರು ಸ್ಕಾಟ್ಲೆಂಡಿನ ಕಸ್ಟಿì ಗಿಲ್ಮೋರ್ ವಿರುದ್ಧ 21-10, 19-21, 21-11 ಅಂತರದ ಜಯ ದಾಖಲಿಸಿದರು. ಮೊದಲ ಸುತ್ತಿನ ಬೈ ಪಡೆದಿದ್ದ ಸಿಂಧು, ದ್ವಿತೀಯ ಸುತ್ತಿನಲ್ಲಿ ಸ್ಲೊವೇಕಿಯದ ಮಾರ್ಟಿನಾ ರೆಪಿಸ್ಕಾ ಅವರನ್ನು 21-7, 21-9 ಅಂತರದಿಂದ ಪರಾಭವಗೊಳಿಸಿದ್ದರು.
ಡಬಲ್ಸ್ನಲ್ಲಿ ಸೋಲು: ಭಾರತದ ಪುರುಷರ ಹಾಗೂ ಡಬಲ್ಸ್ ಜೋಡಿಗಳೆರಡೂ ಪರಾಭವಗೊಂಡವು. ಪುರುಷರ ವಿಭಾಗದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ, ವನಿತಾ ವಿಭಾಗದ ಅಶ್ವಿನಿ ಪೊನ್ನಪ್ಪ-ಎನ್.ಸಿಕ್ಕಿ ರೆಡ್ಡಿ ಪ್ರೀಕ್ವಾರ್ಟರ್ ಫೈನಲ್ನಲ್ಲಿ ಎಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ