ಸಿಂಧು ಮುಡಿಗೆ ಕೊರಿಯಾ ಓಪನ್ ಸೂಪರ್ ಸಿರೀಸ್ ಕಿರೀಟ
Team Udayavani, Sep 17, 2017, 1:14 PM IST
ಸಿಯೋಲ್: ಒಲಿಂಪಿಕ್ ಬೆಳ್ಳಿತಾರೆ ಪಿ.ವಿ. ಸಿಂಧು ಭಾನುವಾರ ನಡೆದ ರೋಚಕ ಹೋರಾಟದಲ್ಲಿ ಜಪಾನ್ನ ವಿಶ್ವಚಾಂಪಿಯನ್ ನಜೊಮಿ ಒಕುಹರಾ ಅವರನ್ನು ಮಣಿಸಿ “ಕೊರಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್’ ಪ್ರಶಸ್ತಿ ಜಯಿಸಿ ಸಂಭ್ರಮಿಸಿದ್ದಾರೆ.
ಸಿಂಧು ಒಕುಹರಾ ವಿರುದ್ಧದ 1 ಗಂಟೆ 23 ನಿಮಿಷಗಳ ಫೈನಲ್ ಕಾಳಗದಲ್ಲಿ 21-10, 17-21, 21-16 ಅಂತರದ ಜಯ ಸಾಧಿಸಿ ಕಳೆದ ತಿಂಗಳ ಸೋಲಿನ ಸೇಡು ತೀರಿಸಿಕೊಂಡರು.
ಕಳೆದ ತಿಂಗಳು ಗ್ಲಾಸ್ಗೊದಲ್ಲಿ ನಡೆದ ವಿಶ್ವ ಚಾಂಪಿಯನ್ ಫೈನಲ್ನಲ್ಲಿ ಒಕುಹರಾ ಸಿಂಧುಗೆ ಸೋಲುಣಿಸಿದ್ದರು.