ರಫೆಲ್ ನಡಾಲ್ ಈಗ ಸಾವಿರ ಗೆಲುವಿನ ಸರದಾರ
Team Udayavani, Nov 6, 2020, 7:42 AM IST
ಪ್ಯಾರಿಸ್: ಸ್ಟಾರ್ ಟೆನಿಸಿಗ ರಫೆಲ್ ನಡಾಲ್ ಸಾವಿರ ಗೆಲುವಿನ ಸರದಾರನೆಂಬ ಹಿರಿಮೆಗೆ ಭಾಜನರಾಗಿದ್ದಾರೆ. ಬುಧವಾರ ರಾತ್ರಿ “ಪ್ಯಾರಿಸ್ ಮಾಸ್ಟರ್’ ಕೂಟದ 2ನೇ ಸುತ್ತಿನಲ್ಲಿ ಅವರು ತಮ್ಮದೇ ದೇಶದ ಫೆಲಿಶಿಯಾಮೊ ಲೋಪೆಜ್ ಅವರನ್ನು 4-6, 7-6 (5), 6-4ರಿಂದ ಸೋಲಿಸಿ ಈ ಮೈಲುಗಲ್ಲು ನೆಟ್ಟರು.
“ಓಪನ್ ಯುಗ’ದಲ್ಲಿ ರಫೆಲ್ ನಡಾಲ್ ಸಾವಿರ ಎಟಿಪಿ ಪಂದ್ಯಗಳನ್ನು ಗೆದ್ದ 4ನೇ ಸಾಧಕ. ಉಳಿದ ಮೂವರೆಂದರೆ ಜಿಮ್ಮಿ ಕಾನರ್ (1,274), ರೋಜರ್ ಫೆಡರರ್ (1,242) ಮತ್ತು ಇವಾನ್ ಲೆಂಡ್ಲ್ (1,068).
ಕ್ವಾರ್ಟರ್ ಫೈನಲ್ಗೆ ಬೋಪಣ್ಣ ಜೋಡಿ
ಭಾರತದ ರೋಹನ್ ಬೋಪಣ್ಣ-ಆಸ್ಟ್ರಿಯಾದ ಒಲಿವರ್ ಮರಾಕ್ “ಪ್ಯಾರಿಸ್ ಮಾಸ್ಟರ್’ ಪುರುಷರ ಡಬಲ್ಸ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ದ್ವಿತೀಯ ಸುತ್ತಿನ ಜಿದ್ದಾಜಿದ್ದಿ ಪಂದ್ಯದಲ್ಲಿ ಇವರು 9ನೇ ಶ್ರೇಯಾಂಕದ ಫ್ಯಾಬ್ರಿಕ್ ಮಾರ್ಟಿನ್-ಜೀನ್ ಜೂಲಿಯನ್ ರೋಜರ್ ವಿರುದ್ಧ 3-6, 6-4, 10-8 ಅಂತರದಿಂದ ಮೇಲುಗೈ ಸಾಧಿಸಿದರು. ಶುಕ್ರವಾರದ ಕ್ವಾರ್ಟರ್ ಫೈನಲ್ನಲ್ಲಿ ಬೋಪಣ್ಣ-ಮರಾಕ್ 8ನೇ ಶ್ರೇಯಾಂಕದ ಎಡ್ವರ್ಡ್ ರೋಜರ್ ವಸೆಲಿನ್ -ಜರ್ಗನ್ ಮೆಲ್ಜರ್ ವಿರುದ್ಧ ಆಡುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ