ಗುವಾಹಟಿಯಲ್ಲಿ 3 ಪಂದ್ಯ ಆಡಲಿರುವ ರಾಜಸ್ಥಾನ್
Team Udayavani, Oct 27, 2019, 5:15 AM IST
ಜೈಪುರ: ತನ್ನ ಯೋಜನೆಯಲ್ಲಿ ದೊಡ್ಡ ಮಟ್ಟದ ಯಾವುದೇ ಬದಲಾವಣೆ ಸಂಭವಿಸದೇ ಹೋದರೆ ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ ರಾಜಸ್ಥಾನ್ ರಾಯಲ್ಸ್ ಗುವಾಹಟಿಯ “ಬರ್ಸಾಪಾರ ಸ್ಟೇಡಿಯಂ’ನಲ್ಲಿ 3 ಪಂದ್ಯಗಳನ್ನಾಡುವುದು ಖಚಿತ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ.
ಜೈಪುರದ “ಸವಾಯ್ ಮಾನ್ಸಿಂಗ್ ಕ್ರೀಡಾಂಗಣ’ ರಾಜಸ್ಥಾನದ ತವರು ಅಂಗಳವಾದರೂ ಕೆಲವು ಪಂದ್ಯಗಳನ್ನು ಗುವಾಹಟಿಯಲ್ಲಿ ಆಯೋಜಿಸುವಂತೆ ಅದು ಅಂದಿನ ಬಿಸಿಸಿಐ ಆಡಳಿತಾಧಿಕಾರಿಗಳಲ್ಲಿ (ಸಿಒಎ) ಮನವಿ ಮಾಡಿತ್ತು.
“ಇತರ ಕೆಲವು ತಂಡಗಳೂ ತವರಿನಾಚೆ ಪಂದ್ಯಗಳನ್ನಾಡುವ ಬಗ್ಗೆ ಆಸಕ್ತಿ ವಹಿಸಿವೆ. ರಾಜಸ್ಥಾನ್ ಆಯ್ಕೆ ಗುವಾಹಟಿ’ ಎಂದು ಸಿಒಎ ಸದಸ್ಯರೊಬ್ಬರು ಅಂದೇ ಹೇಳಿದ್ದರು.