ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು
Team Udayavani, Oct 19, 2020, 10:56 PM IST
ಅಬುಧಾಬಿ : ಸೋಮವಾರದ ಐಪಿಎಲ್ ನ 37 ನೇ ಪಂದ್ಯದಲ್ಲಿ ಚೆನ್ನೈ ನೀಡಿದ ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟಿಗೆ ಕೇವಲ 125 ರನ್ ಗಳಿಸಿತ್ತು. ನ್ನೈ ತಂಡದ ಬ್ಯಾಟಿಂಗ್ ನಿರ್ಧಾರವನ್ನು ವೇಗಿ ಜೋಫ್ರ ಆರ್ಚರ್ ತಲೆ ಕೆಳಗಾಗಿಸಿದರು. ಮೊದಲ 2 ಓವರ್ಗಳಲ್ಲಿ ಕೇವಲ 5 ರನ್ ನೀಡಿದ ಅವರು ಫಾ ಡು ಪ್ಲೆಸಿಸ್ (10) ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ವನ್ಡೌನ್ ಬ್ಯಾಟ್ಸ್ಮನ್ ಶೇನ್ ವಾಟ್ಸನ್ (8) ಕೂಡ ಕ್ರೀಸ್ ಆಕ್ರಮಸಿಕೊಳ್ಳಲು ವಿಫಲರಾದರು. ಪವರ್ ಪ್ಲೇ ಅವಧಿಯಲ್ಲಿ ಎರಡು ದೊಡ್ಡ ವಿಕೆಟ್ ಕಳೆದುಕೊಂಡ ಧೋನಿ ಪಡೆ ಸಂಕಟಕ್ಕೆ ಸಿಲುಕಿತು.