ರಣಜಿ: ಸೋಲಿನತ್ತ ಮುಂಬಯಿ

Team Udayavani, Nov 13, 2017, 6:40 AM IST

ಮುಂಬಯಿ: ರಣಜಿ ಟ್ರೋಫಿ ಇತಿಹಾಸದಲ್ಲಿ ತನ್ನ 500ನೇ ಪಂದ್ಯದಲ್ಲಿ ಆತಿಥೇಯ ಮುಂಬಯಿ ಸೋಲಿನತ್ತ ಸಾಗಿದೆ. “ಸಿ’ ಬಣದ ಈ ಪಂದ್ಯದಲ್ಲಿ ಬರೋಡ ಸ್ಪಷ್ಟ ಮೇಲುಗೈ ಸಾಧಿಸಿದ್ದು ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಮುಂಬಯಿ ತಂಡವನ್ನು ಕೇವಲ 171 ರನ್ನಿಗೆ ಆಲೌಟ್‌ ಮಾಡಿಸಿದ ಬಳಿಕ ಬ್ಯಾಟಿಂಗ್‌ ಆರಂಭಿಸಿದ ಬರೋಡ ತಂಡವು ಆದಿತ್ಯ ವಾಗೊ¾àಡ್‌ ಮತ್ತು ಸ್ವಪ್ನಿಲ್‌ ಸಿಂಗ್‌ ಅವರ ಆಕರ್ಷಕ ಶತಕದಿಂದಾಗಿ 9 ವಿಕೆಟಿಗೆ 575 ರನ್‌ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಮೊದಲ ಇನ್ನಿಂಗ್ಸ್‌ನಲ್ಲಿ 404 ರನ್‌ ಹಿನ್ನಡೆ ಅನುಭವಿಸಿದ ಮುಂಬಯಿ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕುಸಿಯಿತು. ಮೂರನೇ ದಿನದಾಟದ ಅಂತ್ಯಕ್ಕೆ ಮುಂಬಯಿ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದು 102 ರನ್‌ ಗಳಿಸಿದೆ. ಇನ್ನೊಂದು ದಿನದ ಆಟ ಬಾಕಿ ಉಳಿದಿದ್ದು ಮುಂಬಯಿ ಸೋಲು ತಪ್ಪಿಸಲು ದಿನಪೂರ್ತಿ ಅಥವಾ ಇನ್ನುಳಿದ ಆರು ವಿಕೆಟ್‌ ನೆರವಿನಿಂದ 302 ರನ್‌ ಗಳಿಸಬೇಕಾಗಿದೆ.

ಮುಂಬಯಿ ಮತ್ತೆ ಕುಸಿತ
ನಾಯಕ ಆದಿತ್ಯ ತಾರೆ ಅವರನ್ನು ಕಳೆದುಕೊಂಡ ಬಳಿಕ ಪೃಥ್ವಿ ಶಾ ಮತ್ತು ಅಜಿಂಕ್ಯ ರಹಾನೆ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಆದರೆ ಅವರಿಬ್ಬರು ದ್ವಿತೀಯ ವಿಕೆಟಿಗೆ 62 ರನ್‌ ಪೇರಿಸಿದ ಬಳಿಕ ಬೇರ್ಪಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಪೃಥ್ವಿ ಶಾ 56 ರನ್‌ ಗಳಿಸಿ ಸ್ವಪ್ನಿಲ್‌ ಸಿಂಗ್‌ಗೆ ಕ್ಲೀನ್‌ಬೌಲ್ಡ್‌ ಆದರು. ಈ ವಿಕೆಟ್‌ ಪತನದ ಬಳಿಕ ಮುಂಬಯಿ ಹಠಾತ್‌ ಕುಸಿಯಿತು. ಮುಂದಿನ 15 ರನ್‌ ಗಳಿಸುವಷ್ಟರಲ್ಲಿ ತಂಡ ಇನ್ನೆರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಶ್ರೇಯಸ್‌ ಅಯ್ಯರ್‌ ಮತ್ತು ಗೋಹಿಲ್‌ ಬೇಗನೇ ಔಟಾದರು.

ಟೆಸ್ಟ್‌ನಲ್ಲಿ ಆಡಿ ಅನುಭವವಿರುವ ಅಜಿಂಕ್ಯ ರಹಾನೆ 28  ರನ್‌ ಗಳಿಸಿ ಆಡುತ್ತಿದ್ದಾರೆ. ಇದೀಗ ಮುಂಬಯಿ ಅವರನ್ನು ಅವಲಂಭಿಸಿದೆ. ಅವರಿಗೆ ಉಳಿದ ಆಟಗಾರರು ಉತ್ತಮ ಬೆಂಬಲ ನೀಡಿದರೆ ಮುಂಬಯಿ ಸೋಲು ತಪ್ಪಿಸಬಹುದು.

ಸಂಕ್ಷಿಪ್ತ ಸ್ಕೋರು: ಮುಂಬಯಿ 171 ಮತ್ತು 4 ವಿಕೆಟಿಗೆ 102 (ಪೃಥ್ವಿ ಶಾ 56, ಅಜಿಂಕ್ಯ ರಹಾನೆ 28 ಬ್ಯಾಟಿಂಗ್‌); ಬರೋಡ 9 ವಿಕೆಟಿಗೆ 575 ಡಿಕ್ಲೇರ್‌x (ಆದಿತ್ಯ ವಾಗೊ¾àಡ್‌ (138, ವಿಷ್ಣು ಸೋಲಂಕಿ 54, ದೀಪಕ್‌ ಹೂಡ 75, ಸ್ವಪ್ನಿಲ್‌ ಸಿಂಗ್‌ 164, ಮಂಗಲೂರ್ಕರ್‌ 43, ಶಾದೂìಲ್‌ ಠಾಕುರ್‌ 96ಕ್ಕೆ 3, ಧವಳ್‌ ಕುಲಕರ್ಣಿ 79ಕ್ಕೆ 2, ಗೋಹಿಲ್‌ 177ಕ್ಕೆ 2).

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ