ಫೆಡರರ್-ಥೀಮ್ ಫೈನಲ್
Team Udayavani, Mar 18, 2019, 12:30 AM IST
ಇಂಡಿಯನ್ ವೆಲ್ಸ್: ಆಸ್ಟ್ರಿಯಾದ ಡೊಮಿನಿಕ್ ಥೀಮ್ ಮತ್ತು 5 ಬಾರಿಯ ಚಾಂಪಿಯನ್ ರೋಜರ್ ಫೆಡರರ್ “ಇಂಡಿಯನ್ ವೆಲ್ಸ್’ ಕೂಟದ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ರಾತ್ರಿ ನಡೆದ ಸೆಮಿ ಫೈನಲ್ ಪಂದ್ಯಗಳಲ್ಲಿ ಡೊಮಿನಿಕ್ ಥೀಮ್ ಕೆನಡಾದ ಮಿಲೋಸ್ ರಾನಿಕ್ ಅವರನ್ನು 7-6 (7-3), 6-7 (3-7), 6-4 ಸೆಟ್ಗಳಿಂದ ಸೋಲಿಸಿದರೆ, ಇನ್ನೊಂದು ಸೆಮಿಫೈನಲ್ ಕಾದಾಟದಲ್ಲಿ ನಡಾಲ್ ಗಂಟು ನೋವಿನಿಂದ ಪಂದ್ಯ ಆಡಲಾಗದೇ ನಿವೃತ್ತಿ ಹೇಳಿದ ಕಾರಣ ರೋಜರ್ ಫೆಡರರ್ ಸುಲಭದಲ್ಲಿ ಪೈನಲ್ ತಲುಪಿದರು. ಥೀಮ್-ರಾನಿಕ್ ನಡುವಿನ ಮೊದಲೆರಡು ಸೆಟ್ ಟೈ ಬ್ರೇಕರ್ಗೆ ವಿಸ್ತರಿಸಲ್ಪಟ್ಟಿತ್ತು. ಮೊದಲ ಸೆಟ್ನಲ್ಲಿ ಥೀಮ್ ಜಯಿಸಿದರೆ, ದ್ವಿತೀಯ ಸೆಟ್ನಲ್ಲಿ ರಾನಿಕ್ ಗೆದ್ದರು. ತೀವ್ರ ಪೈಪೋಟಿಯಿಂದ ಕೂಡಿದ ಕೊನೆಯ ಸೆಟ್ನಲ್ಲಿ ಥೀಮ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.
ಇಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಥೀಮ್ ಫೈನಲ್ನಲ್ಲಿ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ. ಇನ್ನೊಂದೆಡೆ ಫೆಡರರ್ 6ನೇ ಇಂಡಿಯನ್ ವೆಲ್ಸ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 20 ಗ್ರಾನ್ಸ್ಲಾಮ್ ಚಾಂಪಿಯನ್ ಫೆಡರರ್ ವಿರುದ್ಧ ಥೀಮ್ ಒಟ್ಟು 4 ಪಂದ್ಯಗಳನ್ನಾಡಿದ್ದು, 2-2 ಸಮಬಲದ ದಾಖಲೆ ಹೊಂದಿದ್ದಾರೆ.
ಗಾಯಾಳಾದ ನಡಾಲ್
ರಫೆಲ್ ನಡಾಲ್-ರೋಜರ್ ಫೆಡರರ್ ನಡುವಿನ ಸೆಮಿಫೈನಲ್ ಪಂದ್ಯ ರದ್ದಾದುದು ಅಭಿಮಾನಿಗಳನ್ನು ನಿರಾಸೆಯಲ್ಲಿ ಕೆಡವಿತು. ಕರೆನ್ ಕಶನೋವ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆಯಲ್ಲೇ ಗಂಟು ನೋವಿನಿಂದ ಬಳಲಿದ ನಡಾಲ್ ಆ ನೋವಿನಲ್ಲೇ ಆಡಿ ಸೆಮಿಫೈನಲ್ ತಲುಪಿದ್ದರು. ಆದರೆ ಫೆಡರರ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ