ಕೊಹ್ಲಿ ವಿರುದ್ಧದ ಟ್ವೀಟನ್ನು ಲೈಕ್ ಮಾಡಿದ ರೋಹಿತ್!
Team Udayavani, Aug 11, 2018, 9:24 AM IST
ಮುಂಬಯಿ: ಭಾರತ ಕ್ರಿಕೆಟ್ ತಂಡಕ್ಕೆ ಲಂಡನ್ನಲ್ಲಿನ ಭಾರತೀಯ ರಾಯಭಾರ ಕಚೇರಿ ಔತಣಕೂಟ ನೀಡಿತ್ತು. ಅದರಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಪಾಲ್ಗೊಂಡು ವಿವಾದಕ್ಕೆ ಕಾರಣವಾಗಿದ್ದರು. ಇದರ ವಿರುದ್ಧ ಸಾಕಷ್ಟು ಟ್ವೀಟ್ಗಳು ಹರಿದಾಡಿದ್ದವು. ಅದರಲ್ಲೊಂದು ಟ್ವೀಟನ್ನು ರೋಹಿತ್ ಲೈಕ್ ಮಾಡಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದಾರೆ.
“ಚಿತ್ರದಲ್ಲಿನ ಶೂನ್ಯವನ್ನು ಅನುಷ್ಕಾ ಭರ್ತಿ ಮಾಡಿದ್ದಾರೆ. 3ನೇ ಟೆಸ್ಟ್ವರೆಗೆ ಪತ್ನಿಯರನ್ನು ಜತೆಗೊಯ್ಯುವಂತಿಲ್ಲವೆಂಬ ನಿಯಮ ನನಗೆ ಗೊತ್ತಿದೆ. ಒಬ್ಬೊಬ್ಬ ಆಟಗಾರರಿಗೆ ಒಂದೊಂದು ನಿಯಮ’ ಎಂದು ವ್ಯಂಗ್ಯವಾಗಿ ಒಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ರೋಹಿತ್ ಲೈಕ್ ಮಾಡಿದ್ದಾರೆ. ಇದರಿಂದ, ಅನುಷ್ಕಾ ಆಗಮನ ರೋಹಿತ್ಗೂ ಇಷ್ಟವಾಗಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.