ಶಕಿಬ್, ಸ್ಟಫಾನಿ ತಿಂಗಳ ಕ್ರಿಕೆಟಿಗರು
Team Udayavani, Aug 12, 2021, 6:28 AM IST
ದುಬೈ: ಬಾಂಗ್ಲಾದೇಶದ ಆಲ್ರೌಂಡರ್ ಶಕಿಬ್ ಅಲ್ ಹಸನ್ ಮತ್ತು ವೆಸ್ಟ್ ಇಂಡೀಸ್ ವನಿತಾ ತಂಡದ ನಾಯಕಿ ಸ್ಟಫಾನಿ ಟೇಲರ್ ಜುಲೈ ತಿಂಗಳ ಐಸಿಸಿ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ.
ಶಕಿಬ್ ಅಲ್ ಹಸನ್ ಎಲ್ಲ 3 ಮಾದರಿಗಳಲ್ಲೂ ಮಿಂಚಿ ಜಿಂಬಾಬ್ವೆ ವಿರುದ್ಧ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನೂತನ ಟಿ20 ಆಲ್ರೌಂಡರ್ ರ್ಯಾಂಕಿಂಗ್ನಲ್ಲಿ ಶಕಿಬ್ ಇತ್ತೀಚೆಗಷ್ಟೇ ನಂ.1 ಸ್ಥಾನ ಅಲಂಕರಿಸಿದ್ದರು. ಇವರೊಂದಿಗೆ ರೇಸ್ನಲ್ಲಿದ್ದ ಉಳಿದಿಬ್ಬರು ಕ್ರಿಕೆಟಿಗರೆಂದರೆ ಆಸ್ಟ್ರೇಲಿಯದ ಮಿಚೆಲ್ ಮಾರ್ಷ್ ಮತ್ತು ವೆಸ್ಟ್ ಇಂಡೀಸ್ನ ಹೇಡನ್ ವಾಲ್ಶ್ ಜೂನಿಯರ್.
ಸ್ಟಫಾನಿ ಟೇಲರ್ ಜುಲೈಯಲ್ಲಿ ಪ್ರವಾಸಿ ಪಾಕಿಸ್ಥಾನ ವಿರುದ್ಧ ವೆಸ್ಟ್ ಇಂಡೀಸ್ಗೆ ಏಕದಿನ ಹಾಗೂ ಟಿ20 ಸರಣಿ ಗೆಲುವು ತಂದಿತ್ತ ನಾಯಕಿಯೆನಿಸಿದ್ದರು. ತಿಂಗಳ ಆಟಗಾರ್ತಿಯ ರೇಸ್ನಲ್ಲಿ ಇವರು ವಿಂಡೀಸ್ನವರೇ ಆದ ಹ್ಯಾಲಿ ಮ್ಯಾಥ್ಯೂಸ್ ಮತ್ತು ಪಾಕಿಸ್ಥಾನದ ಫಾತಿಮಾ ಸನಾ ಅವರನ್ನು ಹಿಂದಿಕ್ಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ