ಗಾಯದ ಬಳಿಕ ಗೆದ್ದ ಶರಪೋವಾ

Team Udayavani, Jun 20, 2019, 6:07 AM IST

ಮಾಸ್ಕೊ: ಗಾಯದಿಂದ ಚೇತರಿಸಿಕೊಂಡು ಟೆನಿಸ್‌ ಅಂಗಣಕ್ಕೆ ಮರಳಿರುವ ಶರಪೋವಾ ಅವರು ವಿಕ್ಟೋರಿಯಾ ಕುಜೊ¾àವಾ ಅವರನ್ನು ಕಠಿನ ಹೋರಾಟದಲ್ಲಿ ಕೆಡಹಿ “ಮಲೊರ್ಕಾ ಓಪನ್‌’ ಟೆನಿಸ್‌ ಕೂಟದ ದ್ವಿತೀಯ ಸುತ್ತಿಗೇರಿದ್ದಾರೆ.

5 ಬಾರಿಯ ಗ್ರ್ಯಾನ್‌ಸ್ಲಾಮ್‌ ವಿಜೇತೆ ಶರಪೋವಾ ಕಳೆದ ಜನವರಿ ಬಳಿಕ ಯಾವುದೇ ಟೆನಿಸ್‌ ಕೂಟದಲ್ಲಿ ಆಡಿರಲಿಲ್ಲ. ಭುಜದ ಗಾಯದಿಂದ ಚೇತರಿಸಿಕೊಳ್ಳಲು ಟೆನಿಸ್‌ನಿಂದ ದೂರ ಉಳಿದಿದ್ದರು.

ವಿಶ್ರಾಂತಿ ಬಳಿಕ ಈ ಕೂಟದಲ್ಲಿ ಆಡಿದ ಶರಪೋವಾ 7-6 (10-8), 6-0 ನೇರ ಸೆಟ್‌ಗಳಿಂದ ಜಯ ಸಾಧಿಸಿ ಮುನ್ನಡೆದಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಅವರು ಆ್ಯಂಜೆಲಿಕ್‌ ಕೆರ್ಬರ್‌ ವಿರುದ್ಧ ಆಡುವ ಸಾಧ್ಯತೆಯಿದೆ.
ಅಜರೆಂಕಾಗೆ ಸೋಲು
ದಿನದ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಕ್ಯಾರೋಲಿನ್‌ ಗಾರ್ಸಿಯಾ ಅವರು ವಿಕ್ಟೋರಿಯಾ ಅಜರೆಂಕಾ ಅವರನ್ನು 1-6, 6-4, 7-5 ಸೆಟ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ