Udayavni Special

ಅಫ್ಘಾನಿಸ್ಥಾನ ಟೆಸ್ಟ್‌: ಇಂದು ಭಾರತ ತಂಡದ ಆಯ್ಕೆ

Team Udayavani, May 8, 2018, 6:00 AM IST

7.jpg

ಬೆಂಗಳೂರು: ಜೂನ್‌ 14ರಿಂದ ಬೆಂಗಳೂರಿನಲ್ಲಿ ಅಫ್ಘಾನಿಸ್ಥಾನ ವಿರುದ್ಧ ನಡೆಯುವ ಏಕೈಕ ಟೆಸ್ಟ್‌ ಪಂದ್ಯಕ್ಕೆ ಭಾರತ ಕ್ರಿಕೆಟ್‌ ತಂಡದ ಆಯ್ಕೆ ಮಂಗಳ ವಾರ ನಡೆಯಲಿದೆ. ಇದು ಅಫ್ಘಾನಿಸ್ಥಾನದ ಪಾದಾ ರ್ಪಣೆ ಪಂದ್ಯವಾಗಿರುವುದರಿಂದ ಐತಿಹಾಸಿಕ ಮಹತ್ವ ಪಡೆದಿದೆ. ಆದರೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿರುವುದರಿಂದ ಅವರ ಜಾಗದಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತ. ಕೊಹ್ಲಿ ಸ್ಥಾನಕ್ಕೆ ಶ್ರೇಯಸ್‌ ಅಯ್ಯರ್‌ ಆಯ್ಕೆಯಾಗುವ ಸಾಧ್ಯತೆಯಿದೆ.

ಕೊಹ್ಲಿ ಸರ್ರೆ ಕೌಂಟಿಯಲ್ಲಿ
ಅನಂತರ ಭಾರತ ತಂಡ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳುವುದರಿಂದ ಕೊಹ್ಲಿ ಅಲ್ಲಿ ಕೌಂಟಿ ಆಡಿ ಅನುಭವ ಗಳಿಸಲು ತೀರ್ಮಾನಿಸಿದ್ದಾರೆ. ಆದ್ದರಿಂದ ಜೂನ್‌ ತಿಂಗಳಿಡೀ ಅವರು ಇಂಗ್ಲೆಂಡ್‌ನ‌ಲ್ಲಿ ಸರ್ರೆ ಪರ ಆಡುತ್ತಾರೆ. ಅವರು ಡಬ್ಲಿನ್‌ನಲ್ಲಿ ಅಯರ್‌ಲ್ಯಾಂಡ್‌ ವಿರುದ್ಧ ಜೂನ್‌ ಅಂತ್ಯಕ್ಕೆ ನಡೆಯುವ ಎರಡು ಟಿ20 ಪಂದ್ಯಕ್ಕೂ ಲಭಿಸುವ ಸಾಧ್ಯತೆ ಇಲ್ಲ. ಆಗ ಟಿ20 ತಂಡದ ನಾಯಕತ್ವ ರೋಹಿತ್‌ ಶರ್ಮ ಪಾಲಾಗುವ ಸಂಭವವಿದೆ.

ಕೊಹ್ಲಿ ಜಾಗಕ್ಕೆ ಸದ್ಯ ಡೆಲ್ಲಿ ಡೆವಿಲ್ಸ್‌ ಐಪಿಎಲ್‌ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್‌ ಅಯ್ಯರ್‌ ಆಯ್ಕೆಯಾದರೂ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯುತ್ತಾರೆ ಎನ್ನುವ ಖಾತ್ರಿಯಿಲ್ಲ. ಕಾರಣ ತಂಡದ ಆರಂಭಿಕರಾಗಿ ಕೆ.ಎಲ್‌. ರಾಹುಲ್‌, ಶಿಖರ್‌ ಧವನ್‌, ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್‌ ಶರ್ಮ, ವಿಕೆಟ್‌ ಕೀಪರ್‌ ಆಗಿ ವೃದ್ಧಿಮಾನ್‌ ಸಾಹಾ ಆಡುತ್ತಾರೆ. ಇವರ ನಡುವೆ ಶ್ರೇಯಸ್‌ಗೆ ಜಾಗ ಎಲ್ಲಿದೆ ಎನ್ನುವುದು ಪ್ರಶ್ನೆ.

ಪೂಜಾರ, ಇಶಾಂತ್‌ ಆಡುತ್ತಾರೆ
ಇದೇ ವೇಳೆ ಕೌಂಟಿ ಆಡುತ್ತಿರುವ ಇಶಾಂತ್‌ ಶರ್ಮ, ಚೇತೇಶ್ವರ ಪೂಜಾರ ಅಫ್ಘಾನಿಸ್ಥಾನ ವಿರುದ್ಧದ ಟೆಸ್ಟ್‌ ಆಡುವುದಿಲ್ಲ ಎಂದು ಹೇಳಲಾಗಿತ್ತು. ಮಾಧ್ಯಮಗಳಲ್ಲಿ ಹಬ್ಬಿರುವ ಈ ಸುದ್ದಿ ಸುಳ್ಳು, ಅವರು ಭಾರತಕ್ಕೆ ಬಂದು ಟೆಸ್ಟ್‌ನಲ್ಲಿ ಆಡಲ್ದಿದಾರೆಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್‌ ಖಚಿತಪಡಿಸಿದ್ದಾರೆ.

“ಎ’ ತಂಡವೂ ಪ್ರಕಟ 
ಇದೇ ವೇಳೆ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಲಿರುವ ಭಾರತ “ಎ’ ತಂಡವೂ ಪ್ರಕಟಗೊಳ್ಳಲಿದೆ. ಪೃಥ್ವಿ ಶಾ, ಶುಭಮನ್‌ ಗಿಲ್‌, ಶಿವಂ ಮೊದಲಾದ ಯುವ ಕ್ರಿಕೆಟಿಗರು ಈ ತಂಡಕ್ಕೆ ಆಯ್ಕೆಯಾಗುವುದು ಖಚಿತವಾಗಿದೆ.  ಭಾರತ ತಂಡ ಅಲ್ಲಿ ವೆಸ್ಟ್‌ ಇಂಡೀಸ್‌ “ಎ’ ತಂಡವ ನ್ನೊಳಗೊಂಡ ಏಕದಿನ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿ ಜೂನ್‌ 22ರಿಂದ ಆರಂಭವಾಗಲಿದೆ.

ಅಶ್ವಿ‌ನ್‌ ಟೆಸ್ಟ್‌ ಭವಿಷ್ಯಕ್ಕೆ ಧಕ್ಕೆ?
ಸದ್ಯ ಭಾರತೀಯ ತಂಡದ ಕೆಲ ಕ್ರಿಕೆಟಿಗರ ಭವಿಷ್ಯದ ಬಗ್ಗೆ ಊಹಾಪೋಹಗಳು ಹಬ್ಬಿವೆ. ಆ ಪ್ರಕಾರ ಆರ್‌.ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅವರ ಟೆಸ್ಟ್‌ ಭವಿಷ್ಯ ಸಂಕಷ್ಟದಲ್ಲಿದೆ. 2 ವರ್ಷದ ಹಿಂದೆ ಸೀಮಿತ ಓವರ್‌ಗಳ ತಂಡದಿಂದ ಹೊರಬಿದ್ದಿದ್ದ ಅವರು ಈಗ ಟೆಸ್ಟ್‌ನಿಂದಲೂ ಹೊರಬೀಳುವ ಆತಂಕದಲ್ಲಿದ್ದಾರೆ. ಅಫ್ಘಾನಿಸ್ಥಾನದ ವಿರುದ್ಧ ಟೆಸ್ಟ್‌ಗೆ ಅಶ್ವಿ‌ನ್‌ ಅವರನ್ನು ಆಡಿಸದಿರುವ ಸಾಧ್ಯತೆಯಿದೆ. ಅನಂತರ ಇಂಗ್ಲೆಂಡ್‌ನ‌ಲ್ಲಿ ನಡೆಯುವ ಪ್ರವಾಸಕ್ಕೆ ಆಯ್ಕೆಯಾದರೂ ಅಲ್ಲಿ ವಿಫ‌ಲವಾದರೆ ಶಾಶ್ವತವಾಗಿ ಅವರು ತಂಡದಿಂದ ಹೊರಬೀಳುವ ಪರಿಸ್ಥಿತಿಯಿದೆ. ಅವರ ಬದಲು ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌ ಜಾಗ ಪಡೆಯಲಿದ್ದಾರೆಂದು ಊಹಿಸಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ 19: ಉತ್ತರಪ್ರದೇಶದಲ್ಲಿ ದೇವಸ್ಥಾನಗಳ ಬಂದ್ ಮುಂದುವರಿಕೆ; ಭಕ್ತರಿಗೆ ನಿರಾಸೆ

ಕೋವಿಡ್ 19: ಉತ್ತರಪ್ರದೇಶದಲ್ಲಿ ದೇವಸ್ಥಾನಗಳ ಬಂದ್ ಮುಂದುವರಿಕೆ; ಭಕ್ತರಿಗೆ ನಿರಾಸೆ

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

ಕೃಷಿ ಮಸೂದೆಗೆ ವಿರೋಧ, ಮೇಲ್ಮನೆ ಕೋಲಾಹಲ: ಎಂಟು ಸಂಸದರು ಅಮಾನತು-ವೆಂಕಯ್ಯ ನಾಯ್ಡು

ಕೃಷಿ ಮಸೂದೆಗೆ ವಿರೋಧ, ಮೇಲ್ಮನೆ ಕೋಲಾಹಲ: ಎಂಟು ಸಂಸದರು ಅಮಾನತು-ವೆಂಕಯ್ಯ ನಾಯ್ಡು

ವಿಜಯಪುರ: ಅಪರಿಚಿತ ವಾಹನ ಢಿಕ್ಕಿಯಾಗಿ ಸ್ಥಳದಲ್ಲೇ 29 ಕುರಿಗಳ ಸಾವು!

ವಿಜಯಪುರ: ಅಪರಿಚಿತ ವಾಹನ ಢಿಕ್ಕಿಯಾಗಿ ಸ್ಥಳದಲ್ಲೇ 29 ಕುರಿಗಳ ಸಾವು!

ಚೀನಾಪಡೆಗೆ ಮುಖಭಂಗ: ಲಡಾಖ್ ನ 6 ಪ್ರಮುಖ ಪರ್ವತ ಶ್ರೇಣಿ ಭಾರತೀಯ ಸೇನಾಪಡೆ ವಶಕ್ಕೆ

ಚೀನಾಪಡೆಗೆ ಮುಖಭಂಗ: ಲಡಾಖ್ ನ 6 ಪ್ರಮುಖ ಪರ್ವತ ಶ್ರೇಣಿ ಭಾರತೀಯ ಸೇನಾಪಡೆ ವಶಕ್ಕೆ

ಹಳ್ಳದಲ್ಲಿ ಸಿಲುಕಿದ ಕೂಲಿಕಾರ್ಮಿಕರಿದ್ದ ಟ್ರಾಕ್ಟರ್: ಸ್ಥಳೀಯರ ಸಾಹಸದಿಂದ ರಕ್ಷಣೆ

ಹಳ್ಳದಲ್ಲಿ ಸಿಲುಕಿದ ಕೂಲಿಕಾರ್ಮಿಕರಿದ್ದ ಟ್ರಾಕ್ಟರ್: ಸ್ಥಳೀಯರ ಸಾಹಸದಿಂದ ರಕ್ಷಣೆ

ಮತ್ತೆ ಜೀವಕಳೆ ಪಡೆದ ಚಾರ್ಮಾಡಿ ಜಲಪಾತಗಳು: ಅಲ್ಲಲ್ಲಿ ಗುಡ್ಡ‌‌ ಕುಸಿತ

ಮತ್ತೆ ಜೀವಕಳೆ ಪಡೆದ ಚಾರ್ಮಾಡಿ ಜಲಪಾತಗಳು: ಅಲ್ಲಲ್ಲಿ ಗುಡ್ಡ‌‌ ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

MUST WATCH

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavaniಹೊಸ ಸೇರ್ಪಡೆ

ಕೋವಿಡ್ 19: ಉತ್ತರಪ್ರದೇಶದಲ್ಲಿ ದೇವಸ್ಥಾನಗಳ ಬಂದ್ ಮುಂದುವರಿಕೆ; ಭಕ್ತರಿಗೆ ನಿರಾಸೆ

ಕೋವಿಡ್ 19: ಉತ್ತರಪ್ರದೇಶದಲ್ಲಿ ದೇವಸ್ಥಾನಗಳ ಬಂದ್ ಮುಂದುವರಿಕೆ; ಭಕ್ತರಿಗೆ ನಿರಾಸೆ

ಕಲಾವಿದರಿಗೆ ಸುಸಜ್ಜಿತ ಸುಡಿಯೋ

ಕಲಾವಿದರಿಗೆ ಸುಸಜ್ಜಿತ ಸ್ಟುಡಿಯೋ

ಯಾವುದೇ ಕಾರಣಕ್ಕೂ ಸದನ ಮೊಟಕುಗೊಳಿಸಲು ಬಿಡುವುದಿಲ್ಲ: ಡಿಕೆಶಿ

ಯಾವುದೇ ಕಾರಣಕ್ಕೂ ಸದನ ಮೊಟಕುಗೊಳಿಸಲು ಬಿಡುವುದಿಲ್ಲ: ಡಿಕೆಶಿ

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

bng-tdy-1

ಪ್ರಯಾಣದ ಪ್ರಯಾಸ ತಗ್ಗಿಸಲಿದೆಯೇ ಹಾಲ್ಟ್ ಸ್ಟೇಷನ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.