ಕ್ವಾರ್ಟರ್‌ ಫೈನಲ್‌ ತಲುಪಿದ ಸಿಂಧು, ಸೈನಾ, ಪ್ರಣಯ್‌


Team Udayavani, Jul 15, 2022, 6:05 AM IST

ಕ್ವಾರ್ಟರ್‌ ಫೈನಲ್‌ ತಲುಪಿದ ಸಿಂಧು, ಸೈನಾ, ಪ್ರಣಯ್‌

ಸಿಂಗಾಪುರ್‌: ಕೊನೆಗೂ ಒಂದು ಹಂತದ ಫಾರ್ಮ್ ಕಂಡುಕೊಂಡ ಸೈನಾ ನೆಹ್ವಾಲ್‌, ಚೀನದ ಬಲಿಷ್ಠ ಎದುರಾಳಿ ಹೆ ಬಿಂಗ್‌ ಜಿಯಾವೊ ಅವರನ್ನು ಮಣಿಸಿ “ಸಿಂಗಾಪುರ್‌ ಓಪನ್‌’ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಪಿ.ವಿ. ಸಿಂಧು, ಎಚ್‌.ಎಸ್‌. ಪ್ರಣಯ್‌ ಕೂಡ ಎಂಟರ ಘಟ್ಟ ಮುಟ್ಟಿದ್ದಾರೆ.

ಸೈನಾ ನೆಹ್ವಾಲ್‌ 9ನೇ ರ್‍ಯಾಂಕಿಂಗ್‌ ಹಾಗೂ 5ನೇ ಶ್ರೇಯಾಂಕದ ಬಿಂಗ್‌ ಜಿಯಾವೊ ಅವರನ್ನು 3 ಗೇಮ್‌ಗಳ ಹೋರಾಟದ ಬಳಿಕ 21-19, 11-21, 21-17 ಅಂತರದಿಂದ ಪರಾಭವಗೊಳಿಸಿದರು.

3ನೇ ಶ್ರೇಯಾಂಕದ ಆಟಗಾರ್ತಿ ಪಿ.ವಿ. ಸಿಂಧು ವಿಯೆಟ್ನಾಮ್‌ನ ತು ಲಿನ್‌ ಎನ್‌ಗುಯೆನ್‌ ಅವರ ಸವಾಲನ್ನು ಮೆಟ್ಟಿನಿಂತು 19-21, 21-19, 21-18 ಅಂತರದ ರೋಚಕ ಗೆಲುವು ದಾಖಲಿಸಿದರು. ಚೀನದ ಮತ್ತೋರ್ವ ಆಟಗಾರ್ತಿ ಹಾನ್‌ ಯುಇ ಇವರ ಮುಂದಿನ ಎದುರಾಳಿ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಎಚ್‌.ಎಸ್‌. ಪ್ರಣಯ್‌ ಚೈನೀಸ್‌ ತೈಪೆಯ ಚೌ ತೀನ್‌ ಚೆನ್‌ ಅವರನ್ನು 14-21, 22-20, 21-18 ಅಂತರದಿಂದ ಮಣಿಸಿ ನಿಟ್ಟುಸಿರೆಳೆದರು. ಇವರ ಮುಂದಿನ ಎದುರಾಳಿ ಜಪಾನ್‌ನ ಕೊಡೈ ನರವೋಕ.

ಕೆ. ಶ್ರೀಕಾಂತ್‌ ಅವರನ್ನು ಮಣಿಸಿ ಏರುಪೇರಿನ ಫ‌ಲಿತಾಂಶವೊಂದನ್ನು ದಾಖಲಿ ಸಿದ್ದ ಮಿಥುನ್‌ ಮಂಜುನಾಥ್‌ ಅವರ ಆಟ ದ್ವಿತೀಯ ಸುತ್ತಿನಲ್ಲಿ ಕೊನೆಗೊಂಡಿದೆ. ಅವರನ್ನು ಐರ್ಲೆಂಡ್‌ನ‌ ನಾಟ್‌ ಎನ್‌ಗುಯೆನ್‌ 21-10, 18-21, 21-16 ಅಂತರದಿಂದ ಪರಾಭವಗೊಳಿಸಿದರು.

ವನಿತಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಾಲಿಹಾ ಆಟ ಕೂಡ ಮುಗಿದಿದೆ. ಚೀನದ ಹಾನ್‌ ಯುಎ ವಿರುದ್ಧ 9-21, 13-21 ಅಂತರದಿಂದ ಎಡವಿದರು.

ಡಬಲ್ಸ್‌ನಲ್ಲಿ  ಮುನ್ನಡೆ :

ಪುರುಷರ ಡಬಲ್ಸ್‌ ಜೋಡಿ ಎಂ.ಆರ್‌. ಅರ್ಜುನ್‌-ಧ್ರುವ ಕಪಿಲ ಕೂಡ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಇವರು ಮಲೇಷ್ಯಾದ ಗೋಹ್‌ ಝೆ ಫೀ-ನುರ್‌ ಇಜುದ್ದೀನ್‌ ವಿರುದ್ಧ 18-21, 24-22, 21-18 ಅಂತರದ ರೋಚಕ ಗೆಲುವು ಸಾಧಿಸಿದರು.

ಟಾಪ್ ನ್ಯೂಸ್

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

ರಾಮಲಿಂಗಾರೆಡ್ಡಿ

Chitradurga; ಸರ್ಕಾರಕ್ಕೆ, ಪಕ್ಷಕ್ಕೆ, ಪೆನ್ ಡ್ರೈವ್ ಗೆ ಯಾವ ಸಂಬಂಧವಿಲ್ಲ:ರಾಮಲಿಂಗಾರೆಡ್ಡಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

three year old child passed away in Suspicious way

Belagavi: ಮೂರು ವರ್ಷದ‌ ಕಂದಮ್ಮ ಅನುಮಾನಾಸ್ಪದ ಸಾವು; ಕೊಲೆ ಆರೋಪ

Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

4-cet

CET Results: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

is there any reserve day for ipl qualifiers? what rule says

IPL Playoff ಪಂದ್ಯಗಳಿಗೆ ಮೀಸಲು ದಿನವಿದೆಯೇ? ಮಳೆ ನಿಯಮ ಏನು ಹೇಳುತ್ತದೆ?

Will Dhoni play IPL next year too..?; What did Rayudu say?

IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?

ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

1-ewqwe

Thailand Open: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಚಾಂಪಿಯನ್ಸ್‌

1-weee

Italian Open ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್‌

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

Kalaburagi; ಸಿಯುಕೆನಲ್ಲಿ ಕೋಲಾರದ ವಿದ್ಯಾರ್ಥಿ ಆನಂದ ಅನುಮಾನಾಸ್ಪದ ಸಾವು

Kalaburagi; ಸಿಯುಕೆನಲ್ಲಿ ಕೋಲಾರದ ವಿದ್ಯಾರ್ಥಿ ಆನಂದ ಅನುಮಾನಾಸ್ಪದ ಸಾವು

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

one year for siddaramaiah govt

ಗ್ಯಾರಂಟಿ ಸರಕಾರಕ್ಕೆ ವರ್ಷದ ಗೋರಂಟಿ!; ಹಲವು ಸವಾಲುಗಳ ನಡುವೆಯೂ ಭರವಸೆ ಈಡೇರಿಸಿದ ಸರಕಾರ

ರಾಮಲಿಂಗಾರೆಡ್ಡಿ

Chitradurga; ಸರ್ಕಾರಕ್ಕೆ, ಪಕ್ಷಕ್ಕೆ, ಪೆನ್ ಡ್ರೈವ್ ಗೆ ಯಾವ ಸಂಬಂಧವಿಲ್ಲ:ರಾಮಲಿಂಗಾರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.