ಸೌತ್‌ ಏಶ್ಯನ್‌ ಗೇಮ್ಸ್‌ : ಸಾಕ್ಷಿ, ರವೀಂದರ್‌ ಸ್ವರ್ಣ ಸಾಧನೆ

Team Udayavani, Dec 9, 2019, 5:23 AM IST

ಕಾಠ್ಮಂಡು (ನೇಪಾಲ): ಸೌತ್‌ ಏಶ್ಯನ್‌ ಗೇಮ್ಸ್‌ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಪಾರಮ್ಯ ಮುಂದುವರಿದಿದೆ. ರವಿವಾರ ನಡೆದ ವನಿತೆಯರ 62 ಕೆಜಿ ವಿಭಾಗದಲ್ಲಿ ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ಚಿನ್ನಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಕುಸ್ತಿಯ ಎಲ್ಲ 12 ವಿಭಾಗದ ಸ್ಪರ್ಧೆಗಳಲ್ಲೂ ಭಾರತ ಸ್ವರ್ಣ ಸಾಧನೆ ಮಾಡಿದಂತಾಯಿತು.

ಅಂಡರ್‌-23 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ರವೀಂದರ್‌, ಪುರುಷರ 61 ಕೆಜಿ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಫೈನಲ್‌ನಲ್ಲಿ ಅವರು ಪಾಕಿಸ್ಥಾನದ ಎಂ. ಬಿಲಾಲ್‌ ವಿರುದ್ಧ ಜಯಕ್ಕೆ ತೀವ್ರ ಸೆಣಸಾಟ ನಡೆಸಬೇಕಾಯಿತು. ಆದರೆ ಸಾಕ್ಷಿ ಮಲಿಕ್‌ ಎಲ್ಲ ಪಂದ್ಯಗಳನ್ನೂ ಸುಲಭದಲ್ಲಿ ಗೆದ್ದರು. ಅವರ ಎಲ್ಲ ಸ್ಪರ್ಧೆಗಳೂ ಏಕಪಕ್ಷೀಯವಾಗಿಯೇ ಸಾಗಿದವು.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ಪವನ್‌ ಕುಮಾರ್‌ ಪುರುಷರ 86 ಕೆಜಿ ಫ್ರೀಸ್ಟೈಲ್‌ನಲ್ಲಿ ಇದೇ ಸಾಧನೆಯನ್ನು ಪುನರಾವರ್ತಿಸಿದರು. ವನಿತೆಯರ 59 ಕೆಜಿ ವಿಭಾಗದಲ್ಲಿ ಅಂಶು ಕೂಡ ಚಿನ್ನದಿಂದ ಸಿಂಗಾರಗೊಂಡರು.

ಸೋಮವಾರ ಗೌರವ್‌ ಬಲಿಯನ್‌ (74 ಕೆಜಿ) ಮತ್ತು ಅನಿತಾ ಶೆರೋನ್‌ (68 ಕೆಜಿ) ಕ್ರಮವಾಗಿ ಪುರುಷರ ಹಾಗೂ ವನಿತೆಯರ ಫ್ರೀಸ್ಟೈಲ್‌ ವಿಭಾಗಗಳಲ್ಲಿ ಅಖಾಡಕ್ಕಿಳಿಯಲಿದ್ದಾರೆ. ಇವರ ಮೇಲೂ ದೊಡ್ಡ ಪದಕಗಳ ನಿರೀಕ್ಷೆ ಇಡಲಾಗಿದೆ.

7 ಬಾಕ್ಸರ್‌ಗಳು ಫೈನಲಿಗೆ
ಬಾಕ್ಸಿಂಗ್‌ನಲ್ಲೂ ಭಾರತ ಅಮೋಘ ಸಾಧನೆ ತೋರ್ಪಡಿಸಿದ್ದು, ರವಿವಾರ ವಿಕಾಸ್‌ ಕೃಷ್ಣನ್‌ ಮತ್ತು ಪಿಂಕಿ ರಾಣಿ ಸೇರಿದಂತೆ 7 ಮಂದಿ ಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ಭಾರತದ 8 ಬಾಕ್ಸರ್ಗಳು ಪ್ರಶಸ್ತಿ ಸುತ್ತು ತಲುಪಿದ್ದರು. ಇದರೊಂದಿಗೆ ಭಾರತವೀಗ ಬಾಕ್ಸಿಂಗ್‌ ಪದಕಗಳನ್ನು ಬಾಚಿಕೊಳ್ಳಲು ಹೊರಟಿದೆ.

ಹಾಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ವಿಕಾಸ್‌ ಕೃಷ್ಣನ್‌ (69 ಕೆಜಿ) ಸೆಮಿಫೈನಲ್‌ನಲ್ಲಿ ನೇಪಾಲದ ಬಿಕಾಶ್‌ ಲಾಮಾ ಅವರನ್ನು 5-0 ಅಂತರದಿಂದ ಮಣಿಸಿದರು. ಫೈನಲ್‌ ಸ್ಪರ್ಧೆಗಳು ಸೋಮವಾರ ಮತ್ತು ಮಂಗಳವಾರ ನಡೆಯಲಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಖುದ್ದು ಪಾಕಿಸ್ತಾನಿ ಸೇನೆಯ ಪಿಆರ್‌ ವಿಭಾಗವೇ ನಿರ್ಮಾಣ ಮಾಡಿದ ""ಕಾಫ್ ಕಂಗನಾ''ದಂಥ ಅಬ್ಬರದ ದೇಶಭಕ್ತಿಯ ಸಿನೆಮಾವನ್ನೂ ಕೂಡ ಪಾಕಿಸ್ತಾನಿ ಪ್ರೇಕ್ಷಕರು ನಿರಾಕರಿಸಿಬಿಟ್ಟರು....

  • ಹೊಸದಿಲ್ಲಿ: ರೈಲುಗಳಲ್ಲಿನ ಇ-ಟಿಕೆಟ್‌ನ ಅಕ್ರಮ ಜಾಲವನ್ನು ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಮಂಗಳವಾರ ಬಯಲಿಗೆ ಎಳೆದಿದೆ. ಈ ಜಾಲವು ಪಾಕ್‌, ಬಾಂಗ್ಲಾ ಮತ್ತು ದುಬಾೖಯೊಂದಿಗೆ...

  • ಹೊಸದಿಲ್ಲಿ: ತಮ್ಮನ ಜೀವ ಉಳಿಸಿದ ಅಕ್ಕ ಆರತಿ, ಆ್ಯಂಬುಲೆನ್ಸ್‌ಗೆ ದಾರಿ ತೋರಿದ ಬಾಲಕ ವೆಂಕಟೇಶ್‌ಗೆ ಪ್ರಸಕ್ತ ಸಾಲಿನ ಶೌರ್ಯ ಪ್ರಶಸ್ತಿಯ ಗೌರವ ಸಂದಿದೆ. ಕರ್ನಾಟಕದ...

  • ಅಬ್ಟಾ, ಆಫೀಸಲ್ಲಿ ತುಂಬಾ ಕೆಲಸ ಇತ್ತು ಅಂತ ಮನೆಗೆ ಬಂದು ಮೈ ಚಾಚುವ ಅನುಕೂಲ ಬಹುತೇಕ ಉದ್ಯೋಗಸ್ಥೆಯರಿಗೆ ಇಲ್ಲ. ಆಫೀಸಿಂದ ಅವರು ಸೀದಾ ಬರುವುದೇ ಅಡುಗೆಮನೆಗೆ. ಅಲ್ಲಿ...

  • ಮೆಜಸ್ಟಿಕ್‌ ಬಸ್‌ ಸ್ಟಾಂಡ್‌ನ‌ ಪ್ಲಾಟ್‌ಫಾರ್ಮ್ ಬಳಿಯ ತೂತಿನಿಂದ ಇಲಿಯೊಂದು ಹೊರಬಂದು, ಹತ್ತಿರದಲ್ಲಿ ಬಿದ್ದಿದ್ದ ಬಿಸ್ಕತ್ತನ್ನು ತಿಂದು ಓಡಿತು! ಅಬ್ಟಾ, ಎಷ್ಟು...