ಆಸ್ಟ್ರೇಲಿಯ ಓಪನ್ನಲ್ಲಿ ಸ್ಟಾನ್ ವಾವ್ರಿಂಕ ಸ್ಪರ್ಧೆ
Team Udayavani, Jan 14, 2018, 6:40 AM IST
ಸಿಡ್ನಿ: ಪ್ರತಿಷ್ಠಿತ “ಆಸ್ಟ್ರೇಲಿಯ ಓಪನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸುತ್ತಿರುವುದನ್ನು ಸ್ಟಾನಿಸ್ಲಾಸ್ ವಾವ್ರಿಂಕ ಖಚಿತ ಪಡಿಸಿದ್ದಾರೆ.
ಈಗಲೂ ಮೊಣಕಾಲು ನೋವಿನ ಸಮಸ್ಯೆಯಿದೆ, ಆದರೂ ತಾನು ವರ್ಷಾರಂಭದ ಗ್ರ್ಯಾನ್ಸ್ಲಾಮ್ನಲ್ಲಿ ಆಡುವುದಾಗಿ ವಾವ್ರಿಂಕ ತಿಳಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವಾವ್ರಿಂಕ, ಕಳೆದ ವಿಂಬಲ್ಡನ್ ಚಾಂಪಿಯನ್ಶಿಪ್ ಬಳಿಕ ಯಾವುದೇ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರಲಿಲ್ಲ.
ಆಸ್ಟ್ರೇಲಿಯ ಓಪನ್ ಮೊದಲ ಸುತ್ತಿನ ಪಂದ್ಯದಲ್ಲಿ ವಾವ್ರಿಂಕ ಲಿಥುವೇನಿಯಾದ ರಿಕಾರ್ಡಸ್ ವಿರುದ್ಧ ಆಡಲಿದ್ದಾರೆ.