Udayavni Special

ಭೀಕರ ಗುಂಡಿನ ದಾಳಿ; ಬಾಂಗ್ಲಾ ಕ್ರಿಕೆಟಿಗರು ಪಾರು


Team Udayavani, Mar 16, 2019, 12:30 AM IST

z-4.jpg

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ನ‌ ಕ್ರೈಸ್ಟ್‌ಚರ್ಚ್‌ನಲ್ಲಿ ಶುಕ್ರವಾರ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರು ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇಲ್ಲಿನ ಮಸ್ಜಿದ್‌ ಅಲ್‌ ನೂರ್‌ ಮಸೀದಿ ಮೇಲೆ ಮೂವರು ಉಗ್ರಗಾಮಿ ಗಳು ನಡೆಸಿದ ಕೃತ್ಯದ ಸಂದರ್ಭದಲ್ಲೇ, ಬಾಂಗ್ಲಾದೇಶದ ಕ್ರಿಕೆಟಿಗರು ಮಸೀದಿಗೆ ತೆರಳಿ ಪ್ರಾರ್ಥನೆ ಮಾಡಲು ಬಯಸಿದ್ದರು. ಇನ್ನೇನು ಮಸೀದಿ ಸಮೀಪ ಬಸ್‌ ಇಳಿಯಬೇಕು ಎನ್ನುವಷ್ಟರಲ್ಲಿ ಭಾರೀ ಗುಂಡಿನ ದಾಳಿ ನಡೆದು, ಜನರು ಸಾಯುತ್ತಿರುವುದನ್ನು ಬಾಂಗ್ಲಾ ತಂಡ ವೀಕ್ಷಿಸಿದೆ.

ಬಾಂಗ್ಲಾ ಕ್ರಿಕೆಟ್‌ ತಂಡದ 17 ಆಟಗಾರರನ್ನು ಬಸ್‌ನಲ್ಲಿ ಒಯ್ಯಲಾಗಿತ್ತು. ಈ ಪೈಕಿ ಕ್ರಿಕೆಟಿಗರಾದ ಲಿಟನ್‌ ದಾಸ್‌, ನಯೀಮ್‌ ಹುಸೇನ್‌ ಹಾಗೂ ಬೌಲಿಂಗ್‌ ತರಬೇತುದಾರ, ಕರ್ನಾಟಕದ ಸುನೀಲ್‌ ಜೋಶಿ ಮಸೀದಿಗೆ ತೆರಳದೇ ಹೊಟೇಲ್‌ನಲ್ಲೇ ಉಳಿದುಕೊಂಡಿದ್ದರು. ಭಾರತದ ವಾಣಿಜ್ಯ ರಾಜಧಾನಿ ಮುಂಬಯಿಯ ಕಂಪ್ಯೂಟರ್‌ ಎಂಜಿನಿಯರ್‌, ಕ್ರಿಕೆಟ್‌ ವಿಶ್ಲೇಷಕ ಶ್ರೀನಿವಾಸ ಚಂದ್ರಶೇಖರನ್‌, ಬಾಂಗ್ಲಾ ತಂಡದ ಜತೆಗೆ ಬಸ್‌ನಲ್ಲಿ ತೆರಳಿದ್ದರು. ಹೆಚ್ಚು ಕಡಿಮೆ 8ರಿಂದ 10 ನಿಮಿಷ ಭಯಾನಕ ದಾಳಿಯನ್ನು ಕಣ್ಣಾರೆ ನೋಡುವಂತಹ ಸ್ಥಿತಿ ಬಾಂಗ್ಲಾ ಕ್ರಿಕೆಟಿಗರಿಗೆ ಎದುರಾಗಿತ್ತು. ಬಾಂಗ್ಲಾ ಕ್ರಿಕೆಟಿಗರಿಗೆ ಆರಂಭದಲ್ಲಿ ಬಸ್‌ನಿಂದ ಕೆಳಗಿಳಿಯಲು ಭದ್ರತಾ ಸಿಬಂದಿ ಅವಕಾಶ ನೀಡಿರಲಿಲ್ಲ. ದಾಳಿ ಮುಗಿದು ಹಲವು ನಿಮಿಷಗಳ ಅನಂತರ, ಮಸೀದಿಗೆ ಸಮೀಪದಲ್ಲೇ ಇದ್ದ ಹ್ಯಾಗ್ಲೆ ಪಾರ್ಕ್‌ ಮೂಲಕ ಹೊಟೇಲ್‌ಗೆ ತೆರಳಲು ಅವಕಾಶ ನೀಡಲಾಯಿತು.

ಹೆದರಿ ಕಣ್ಣೀರು ಹಾಕಿದ ಬಾಂಗ್ಲಾ ಕ್ರಿಕೆಟಿಗರು
ಘಟನೆಗೆ ಬಾಂಗ್ಲಾ ಕ್ರಿಕೆಟಿಗರು ಪ್ರತ್ಯಕ್ಷದರ್ಶಿಗಳಾಗಿದ್ದರು. ಬಸ್‌ನಲ್ಲಿ ಕುಳಿತುಕೊಂಡು, ಉಸಿರು ಬಿಗಿಹಿಡಿದು, ಘಟನೆಯನ್ನು ವೀಕ್ಷಿಸುತ್ತಿದ್ದ ಅವರು ಸ್ತಂಭೀಭೂತರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಬಾಂಗ್ಲಾದೇಶ ತಂಡದ ವ್ಯವಸ್ಥಾಪಕ ಖಾಲಿದ್‌ ಮಸೂದ್‌, “ಘಟನೆಯಲ್ಲಿ ನಾವು ಸಿಕ್ಕಿಕೊಳ್ಳಲಿಲ್ಲ ಎನ್ನುವುದನ್ನು ನೆನೆದರೆ ಅಬ್ಟಾ ಎನಿಸುತ್ತದೆ. ಇಡೀ ಘಟನೆ ಒಂದು ಸಿನಿಮಾ ದೃಶ್ಯವಿದ್ದಂತಿತ್ತು. ರಕ್ತಸಿಕ್ತ ಜನರು ಮಸೀದಿಯಿಂದ ಹೊರನುಗ್ಗುತ್ತಿದ್ದದ್ದನ್ನು ನಾವು ಕಣ್ಣಾರೆ ಕಾಣಬಹುದಿತ್ತು. ಇಂತಹ ಭಯಾನಕ ಘಟನೆ ನೋಡಿದ ಆಟಗಾರರು ಇದರ ಪರಿಣಾಮಕ್ಕೊಳಗಾಗುವುದು ಸಹಜ. ಬಸ್‌ನಲ್ಲಿ ಸಿಕ್ಕಿಕೊಂಡು ಹೊರಬರಲಾಗದ ಸ್ಥಿತಿಗೆ ತಲುಪಿದ್ದ ಕೆಲ ಆಟಗಾರರು, ಪಾರಾಗುವ ದಾರಿ ತಿಳಿಯದೇ ಕಣ್ಣೀರು ಸುರಿಸುತ್ತಿದ್ದರು’ ಎಂದಿದ್ದಾರೆ.

ಘಟನೆ ಬಗ್ಗೆ ಶ್ರೀನಿವಾಸ್‌ ಚಂದ್ರಶೇಖರ್‌ ಪ್ರತಿಕ್ರಿಯಿಸಿ, “ಪ್ರಾರಂಭದಲ್ಲಿ ನಮಗೆ ಪ್ರತಿಕ್ರಿಯಿಸಲು ಆಗಿರಲಿಲ್ಲ. ಭೀತರಾಗಿದ್ದಾಗ ನಿಮ್ಮ ಮನಸ್ಸು ಸಹಜವಾಗಿ ಸ್ಥಗಿತಗೊಂಡಿರುತ್ತದೆ. ಎಲ್ಲರಿಗೂ ಹಾಗೆ ಆಗಿತ್ತು. ಸುಮ್ಮನೆ ತಲೆ ಬಗ್ಗಿಸಿಕೊಂಡು ಕೂತಿದ್ದೆವು’ ಎಂದಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡ ನ್ಯೂಜಿಲ್ಯಾಂಡ್‌ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ಆಗಮಿಸಲು ನಿರ್ಧರಿಸಿದೆ. ಮಾ. 16ರಿಂದ ಇಲ್ಲಿ ಸರಣಿಯ 3ನೇ ಟೆಸ್ಟ್‌ ಆರಂಭವಾಗಬೇಕಿತ್ತು.

ಕನ್ನಡಿಗ ಸುನೀಲ್‌ ಜೋಶಿ ಪಾರು
ಭಾರತ ಕ್ರಿಕೆಟ್‌ ತಂಡದ ಮಾಜಿ ಬೌಲರ್‌, ಕರ್ನಾಟಕ ತಂಡದ ಮಾಜಿ ನಾಯಕ ಎಡಗೈ ಸ್ಪಿನ್ನರ್‌ ಸುನೀಲ್‌ ಜೋಶಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಅವರು ಬಾಂಗ್ಲಾ ದೇಶ ತಂಡದ ಸ್ಪಿನ್‌ ಬೌಲಿಂಗ್‌ ತರಬೇತುದಾರರಾಗಿ ಕಿವೀಸ್‌ಗೆ ತೆರಳಿದ್ದರು. ಆದರೆ ಅವರು ಬಾಂಗ್ಲಾ ಆಟಗಾರರೊಂದಿಗೆ ತೆರಳದೆ ಹೊಟೇಲ್‌ನಲ್ಲೇ ಉಳಿದುಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, “ಮಂಗಳವಾರ ನಾನು ಭಾರತಕ್ಕೆ ಹಿಂದಿರುಗುತ್ತೇನೆ, ಇದಕ್ಕೂ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದಿದ್ದಾರೆ.

“ಅದು ಭಯೋತ್ಪಾದಕ ಕೃತ್ಯವೆಂದೇ ಗೊತ್ತಾಗಿರಲಿಲ್ಲ’
ಬಾಂಗ್ಲಾ ಕ್ರಿಕೆಟ್‌ ತಂಡದ ವೀಡಿಯೋ ವಿಶ್ಲೇಷಕರಾಗಿ ಕಿವೀಸ್‌ಗೆ ತೆರಳಿದ್ದ, ಭಾರತದ ಕಂಪ್ಯೂಟರ್‌ ಎಂಜಿನಿಯರ್‌ ಶ್ರೀನಿವಾಸ್‌ ಚಂದ್ರಶೇಖರನ್‌, ಘಟನೆಯನ್ನು ಕಣ್ಣಾರೆ ಕಂಡು ನಡುಗಿ ಹೋಗಿದ್ದಾರೆ. ತಮ್ಮೆದುರಿನ ಸಾವುನೋವುಗಳಿಗೆ ಸಾಕ್ಷಿಗಳಾಗಿದ್ದಾರೆ. ಇಡೀ ಘಟನೆಯನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಉದ್ದೇಶ ತಂಡಕ್ಕಿತ್ತು. ಅದಕ್ಕೆಂದೇ ಹ್ಯಾಗ್ಲೆ ಪಾರ್ಕ್‌ನಲ್ಲಿದ್ದ ಮಸೀದಿಗೆ ತೆರಳಿದ್ದೆವು. ಗುಂಡಿನ ದಾಳಿ ನಡೆಯುತ್ತಿದ್ದ ಸ್ಥಳಕ್ಕೂ ಬಾಂಗ್ಲಾ ಕ್ರಿಕೆಟಿಗರ ಬಸ್‌ಗೂ ಕೆಲವೇ ಮೀಟರ್‌ಗಳ ಅಂತರವಿತ್ತು. ಆರಂಭದಲ್ಲಿ ನಮಗೆ ಗುಂಡಿನ ಶಬ್ದ ಕೇಳಿ ಬಂತು. ಕೆಲವೇ ನಿಮಿಷಗಳಲ್ಲಿ ಮಹಿಳೆಯೊಬ್ಬಳು ರಸ್ತೆ ಮೇಲೆ ಬಿದ್ದು ಮೂಛೆì ಹೋಗಿದ್ದಳು. ಅದನ್ನು ನೋಡಿ ವೈದ್ಯಕೀಯ ನೆರವು ಬೇಕಿರಬಹುದು ಎನ್ನುವ ಕಾರಣಕ್ಕೆ ಕೆಲವು ಆಟಗಾರರು ಬಸ್‌ನಿಂದ ಕೆಳಕ್ಕಿಳಿದು ಮಹಿಳೆಯ ನೆರವಿಗೆ ಹೋಗಲು ಸಿದ್ಧವಾಗಿದ್ದರು. ಅಷ್ಟರಲ್ಲೇ ರಕ್ತಸಿಕ್ತರಾಗಿದ್ದ ಇನ್ನೊಂದಷ್ಟು ಮಂದಿ ಮಸೀದಿಯಿಂದ ಹೊರಗೆ ಓಡಿ ಬರುತ್ತಿರುವುದನ್ನು ನೋಡಿದೆವು. ಆಗ ಏನೋ ದೊಡ್ಡ ದುರಂತವೇ ನಡೆಯುತ್ತಿದೆ ಎಂಬ ಸುಳಿವು ಸಿಕ್ಕಿತು. ಆಗ ನಮಗೆ ಸೀಟ್‌ ಬಿಟ್ಟು, ಕೆಳಗೆ ಮಲಗಿಕೊಳ್ಳಲು ಸೂಚನೆ ಬಂತು. ಇನ್ನೆಷ್ಟು ನಿಮಿಷ ಹೀಗೆ ಇರಬೇಕು ಎಂದು ಗೊತ್ತಿರಲಿಲ್ಲ. ನಿಧಾನಕ್ಕೆ ಪರಿಸ್ಥಿತಿ ತಿಳಿಯಾಗುತ್ತ ಬಂದಾಗ ಆಟಗಾರರೂ ಸಹಜ ಸ್ಥಿತಿಗೆ ಬಂದರು…’ ಹೀಗೆಂದು ಹೇಳುತ್ತಿರುವಾಗ ಚಂದ್ರಶೇಖರನ್‌ ಧ್ವನಿ ನಡುಗುತ್ತಿತ್ತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಕೋವಿಡ್-19 ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಕೋವಿಡ್-19 ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಅಭಿಯಾನಕ್ಕೆ ಭಾರತದ ಎರಡು ಫುಟ್ ಬಾಲ್ ಕ್ಲಬ್‌

ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಅಭಿಯಾನಕ್ಕೆ ಭಾರತದ ಎರಡು ಫುಟ್ ಬಾಲ್ ಕ್ಲಬ್‌

ಫುಟ್ ಬಾಲ್ ವಿಶ್ವಕಪ್‌ಗಾಗಿ ರಷ್ಯಾ, ಕತಾರ್‌ನಿಂದ ಲಂಚ: ಅಮೆರಿಕ ಕಾನೂನು ಸಚಿವಾಲಯದ ಆರೋಪ

ಫುಟ್ ಬಾಲ್ ವಿಶ್ವಕಪ್‌ಗಾಗಿ ರಷ್ಯಾ, ಕತಾರ್‌ನಿಂದ ಲಂಚ: ಅಮೆರಿಕ ಕಾನೂನು ಸಚಿವಾಲಯದ ಆರೋಪ

ಫಿನಿಶರ್‌ ಆಗಿ ತಂಡಕ್ಕೆ ಮರಳುವೆ: ರಾಬಿನ್‌ ಉತ್ತಪ್ಪ

ಫಿನಿಶರ್‌ ಆಗಿ ತಂಡಕ್ಕೆ ಮರಳುವೆ: ರಾಬಿನ್‌ ಉತ್ತಪ್ಪ

ಮನೆಯೊಳಗೆ ಕ್ರಿಕೆಟ್‌ ಆಡಿದ ರೈನಾ

ಮನೆಯೊಳಗೆ ಕ್ರಿಕೆಟ್‌ ಆಡಿದ ರೈನಾ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

08-April-21

ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

08-April-32

ರೈತರ ಉತ್ಪನ್ನ ನೇರ ಗ್ರಾಹಕರಿಗೆ

08-April-31

ಎಪಿಎಂಸಿಗೆ ತಂದ ಹಣ್ಣು -ತರಕಾರಿ ಖರೀದಿಸುವರಿಲ್ಲ

ಲಾಕ್ ಡೌನ್ ಕತೆಗಳು : ಉಪಾಯಂ ಕಾರ್ಯ ಸಾಧನಂ!

ಲಾಕ್ ಡೌನ್ ಕತೆಗಳು : ಉಪಾಯಂ ಕಾರ್ಯ ಸಾಧನಂ!